ಬುಧವಾರ, ಜೂನ್ 23, 2021
28 °C

ಮಹಾರಾಷ್ಟ್ರದಲ್ಲಿ ಅಕಾಲಿಕ ಮಳೆ: 28 ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ(ಐಎಎನ್‌ಎಸ್‌): ಕಳೆದ ಹತ್ತು ದಿನಗಳಿಂದ ಮಹಾರಾಷ್ಟ್ರದಲ್ಲಿ ಸುರಿ­ಯುತ್ತಿರುವ ಅಕಾಲಿಕ ಮಳೆ­ಯಿಂದಾಗಿ ಕನಿಷ್ಠ 28 ಜನರು ಮೃತ­ಪಟ್ಟು, 100­ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ.ರಾಜ್ಯದ 35 ಜಿಲ್ಲೆಗಳ ಪೈಕಿ 29 ಜಿಲ್ಲೆಗಳಲ್ಲಿ ಸುರಿದ ಮಳೆಯಿಂದಾಗಿ 18,200ಕ್ಕಿಂತ ಹೆಚ್ಚು ಮನೆಗಳಿಗೆ ಹಾನಿ­ಯಾಗಿದೆ. ಅಲ್ಲದೇ, ಬಿರುಗಾಳಿ­ಯಿಂದಾಗಿ ಒಂಬತ್ತು ಸಾವಿರಕ್ಕಿಂತ ಹೆಚ್ಚು ಪ್ರಾಣಿಗಳು ಮೃತಪಟ್ಟಿವೆ.ಮಳೆಯಿಂದಾಗಿ ಔರಂಗಾಬಾದ್‌­ನಲ್ಲಿ 15 ಜನ ಮೃತಪಟ್ಟಿದ್ದಾರೆ. ಉಳಿ­ದಂತೆ ನಾಗಪುರದಲ್ಲಿ ಆರು, ಪುಣೆ­ಯಲ್ಲಿ ಮೂವರು, ನಾಸಿಕ್ ಮತ್ತು ಅಮರಾವತಿಯಲ್ಲಿ ತಲಾ ಇಬ್ಬರು ಸಾವನ್ನಪ್ಪಿದ್ದಾರೆ.ಬಿರುಗಾಳಿ ಮಿಶ್ರಿತ ಮಳೆಯಿಂದಾಗಿ ಸುಮಾರು 13,70,326 ಹೆಕ್ಟೇರ್‌ ಭೂಮಿಯಲ್ಲಿ ಬೆಳೆದಿದ್ದ ಬೆಳೆ ನಾಶವಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.