ಮಂಗಳವಾರ, ಏಪ್ರಿಲ್ 13, 2021
30 °C

ಮಹಾರಾಷ್ಟ್ರದಲ್ಲಿ ಗೋಲಿಬಾರ್: ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭಾಲ್ಕಿ: ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ಸಾಂಗ್ಲಿಯಲ್ಲಿ ಕಬ್ಬಿನ ಬೆಲೆ ಪ್ರತಿ ಟನ್‌ಗೆ 3ಸಾವಿರ ರೂಪಾಯಿ ನಿಗದಿ ಪಡಿಸುವಂತೆ ಆಗ್ರಹಿಸಿ ರೈತರು ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಪೊಲೀಸರು ಗುಂಡು ಹಾರಿಸಿ ವ್ಯಕ್ತಿಯೊಬ್ಬರನ್ನು ಕೊಂದಿರುವುದಕ್ಕೆ ಭಾಲ್ಕಿಯಲ್ಲಿ ತೀವ್ರ ಪ್ರತಿಭಟನೆ ವ್ಯಕ್ತವಾಗಿದೆ.ಮಹಾರಾಷ್ಟ್ರ ಸರ್ಕಾರದ ಈ ಕ್ರಮವನ್ನು ಖಂಡಿಸಿ ಭಾಲ್ಕಿಯ ಮಹಾತ್ಮ ಗಾಂಧಿ ವೃತ್ತದಲ್ಲಿ ಗುರುವಾರ ರೈತ ಸಂಘದ ಪ್ರಮುಖರು ಮಾನವ ಸರಪಳಿ ನಿರ್ಮಿಸಿ ಪ್ರತಿಭಟಿಸಿದರು.ನಂತರ ಇಡೀ ದಿನ ಧರಣಿ ನಡೆಸಿದರು. ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ ಶರಣಬಸಪ್ಪ ಕೊಟೆಪ್ಪಗೋಳ್ ಮೂಲಕ ಪ್ರಧಾನ ಮಂತ್ರಿಯವರಿಗೆ ಬರೆದ  ಮನವಿ ಪತ್ರವನ್ನು ಸಲ್ಲಿಸಿದರು.

ನಂತರ ರೈತ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಮಲ್ಲಿಕಾರ್ಜುನ ಸ್ವಾಮಿ ಮಾತನಾಡಿ, ರಾಷ್ಟ್ರದ ಬೆನ್ನೆಲುಬಾದ ರೈತರ ಮೇಲೆ ಗೋಲಿಬಾರ್ ನಡೆಸಿದ್ದು ಅತ್ಯಂತ ಕ್ರೂರ ವರ್ತನೆಯಾಗಿದೆ ಎಂದು ಖಂಡಿಸಿದರು.ಜೊತೆಗೆ ಸ್ವಾಭಿಮಾನಿ ಶೇತಕಾರಿ ಸಂಘದ ಅಧ್ಯಕ್ಷರೂ ಆದ ಸಂಸದರನ್ನು ಬಂಧಿಸಿರುವದಕ್ಕೆ ಟೀಕಿಸಿದರು. ಕೂಡಲೇ ಮೃತ ರೈತನ ಕುಟುಂಬಕ್ಕೆ 25 ಲಕ್ಷ ರೂಪಾಯಿ ಪರಿಹಾರ ನೀಡಬೇಕು. ಅವರ ಕುಟುಂಬದ ಸದಸ್ಯನಿಗೆ ಸರ್ಕಾರಿ ಸೇವೆ ಒದಗಿಸಬೇಕು ಎಂದು ಆಗ್ರಹ ಪಡಿಸಿದರು.ರೈತ ಸಂಘದ ತಾಲ್ಲೂಕು ಅಧ್ಯಕ್ಷ ಸಿದ್ರಾಮಪ್ಪ ಅಣದೂರೆ, ಬಾಬುರಾವ ಜೋಳದಾಬಕಾ, ಭೀಮಣ್ಣ ಕುಡ್ತೆ, ವಿಠಲರಾವ ಮೇತ್ರೆ, ಕಾಶಪ್ಪ ಡೋಣಗಾಪುರ, ಕಿರಣ ಖಂಡ್ರೆ, ಶ್ರೀಕಾಂತ ಭುರಾಳೆ, ಓಂಪ್ರಕಾಶ ರೊಟ್ಟೆ, ಕಾಶಪ್ಪ ಸೀತಾ, ಶೇಷಾರಾವ ಕಣಜಿ, ಆನಂದ ತಮಾಸಂಗೆ, ಅನಿಲ ಪಾಟೀಲ, ಚನ್ನಬಸಪ್ಪ ಪಾಟೀಲ, ವಿಶ್ವನಾಥ ಚಿಲಶಟ್ಟೆ ಮುಂತಾದವರು ಇದ್ದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.