ಸೋಮವಾರ, ಮೇ 23, 2022
28 °C

ಮಹಾರುದ್ರ ಯಜ್ಞ ಇಂದಿನಿಂದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಂಪ್ಲಿ: ಇಲ್ಲಿಗೆ ಸಮೀಪದ ಬುಕ್ಕಸಾಗರ ಶ್ರೀ ಕರಿಸಿದ್ಧೇಶ್ವರ ಸಂಸ್ಥಾನ ಮಠದಲ್ಲಿ ಮಾ. 21ರಿಂದ 31ರವರೆಗೆ ಮಹಾರುದ್ರ ಯಜ್ಞ, ಅಡ್ಡಪಲ್ಲಕ್ಕಿ ಮಹೋತ್ಸವ ಸೇರಿದಂತೆ ಅನೇಕ ಕಾರ್ಯಕ್ರಮಗಳು ಜರುಗಲಿವೆ ಎಂದು ಕರಿಸಿದ್ಧೇಶ್ವರ ಶಿವಾಚಾರ್ಯರ ಮಹಾಸ್ವಾಮಿಗಳು ತಿಳಿಸಿದ್ದಾರೆ. ಮಾ. 29ರಂದು ಉಜ್ಜಯಿನಿ ಮರುಳಸಿದ್ಧ ರಾಜದೇಶಿಕೇಂದ್ರ ಶಿವಾಚಾರ್ಯರ, ಶ್ರೀಶೈಲ ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯರ ಮತ್ತು ಕಾಶಿ ಡಾ. ಚಂದ್ರಶೇಖರ ಶಿವಾಚಾರ್ಯರ ಅಡ್ಡಪಲ್ಲಕ್ಕಿ ಮಹೋತ್ಸವ ಜರುಗಲಿದೆ.ಇದೇ ಸಂದರ್ಭದಲ್ಲಿ ಕರಿಸಿದ್ಧೇಶ್ವರ ಶಿವಾಚಾರ್ಯರ ಸಹಸ್ರ ಚಂದ್ರ ಶಾಂತಿ ಮತ್ತು 108 ತುಲಾಭಾರ, ಕರಿಸಿದ್ಧೇಶ್ವರ ವಿಶ್ವಾರಾಧ್ಯ ಶಿವಾಚಾರ್ಯರ ದ್ವಾದಶ ಪೀಠಾರೋಹಣ ಮತ್ತು ಮಂಟಪ ಪೂಜೆ, ಲಕ್ಷ ದೀಪೋತ್ಸವ, ಶಿವದೀಕ್ಷೆ, ಧರ್ಮ ಜಾಗೃತಿ ಸಮಾರಂಭ ನಡೆಯಲಿವೆ.  ಮಾ. 21ರಿಂದ 31ರವರೆಗೆ ಶ್ರೀ ಮಠದಲ್ಲಿ ನಿತ್ಯ ಸಂಜೆ 4ಗಂಟೆಗೆ ನಾಡಿನ ಹರಗುರು ಚರಮೂರ್ತಿ ಗಳಿಂದ, ವಿವಿಧ ಮಠಾಧೀಶರಿಂದ ಧರ್ಮ ಜಾಗೃತಿ ಸಮಾರಂಭ ಮತ್ತು ಸಂಗೀತ, ಸಾಂಸ್ಕೃತಿಕ, ನಗೆಹನಿ, ಜಾನಪದ ಗೀತಗಾಯನ ಕಾರ್ಯಕ್ರಮಗಳು ನಡೆಯಲಿವೆ ಎಂದು ಮಹಾರುದ್ರಯಾಗ, ತುಲಾ ಭಾರ ಮಹೋತ್ಸವ ಸಮಿತಿ ಗೌರವಾಧ್ಯಕ್ಷ ಎಮ್ಮಿಗನೂರು ವಾಮದೇವ ಮಹಾಂತ ಶಿವಾಚಾರ್ಯರು ತಿಳಿಸಿದ್ದಾರೆ.ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಮಂತ್ರಿ ಜಿ. ಜನಾರ್ದನರೆಡ್ಡಿ, ಸಚಿವ ಬಿ. ಕರುಣಾಕರರೆಡ್ಡಿ, ಬಿ. ಶ್ರೀರಾಮುಲು, ಎಂ.ಪಿ. ರೇಣುಕಾಚಾರ್ಯ, ಸಂಸದೆ ಜೆ. ಶಾಂತಾ, ಶಾಸಕ ಬಿ.ಎಸ್. ಆನಂದಸಿಂಗ್, ಟಿ.ಎಚ್. ಸುರೇಶ್‌ಬಾಬು ಇನ್ನು ಮುಂತಾದವರು ಪಾಲ್ಗೊಳ್ಳಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.