ಮಹಾವೀರರ ಪಲ್ಲಕ್ಕಿ ಮೆರವಣಿಗೆ

7

ಮಹಾವೀರರ ಪಲ್ಲಕ್ಕಿ ಮೆರವಣಿಗೆ

Published:
Updated:

ಬೀದರ್: `ದಶಲಕ್ಷಣ~ದ ಪ್ರಯುಕ್ತ ನಗರದಲ್ಲಿ ಭಾನುವಾರ ಶ್ರದ್ಧೆ, ಭಕ್ತಿಯೊಂದಿಗೆ ಭಗವಾನ ಮಹಾವೀರರ ಭಾವಚಿತ್ರದ ಮೆರವಣಿಗೆ ನಡೆಯಿತು.ನಗರದ ಜೈನ ಮಂದಿರದಿಂದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ಕಳಸ ಹೊತ್ತ ಮಹಿಳೆಯರು ಮೆರವಣಿಗೆಯ ಮೆರಗು ಹೆಚ್ಚಿಸಿದರು.ಮೆರವಣಿಗೆಯ ಬಳಿಕ ಜೈನ ಮಂದಿರದಲ್ಲಿ ವಿಶೇಷ ಪೂಜೆ ಹಾಗೂ ಧಾರ್ಮಿಕ ಕಾರ್ಯಕ್ರಮ ಜರುಗಿದವು. ಪ್ರಮುಖರಾದ ಜೀನೇಂದ್ರ ಟಿಕ್ಕೆ, ವಿಜಯಕುಮಾರ್ ಜೈನ್, ಅಜೀತ್‌ಮಣಿ, ನೇಮಿನಾಥ ಬೆಳಕಿರೆ ಮತ್ತಿತರರು ಉಪಸ್ಥಿತರಿದ್ದರು.ದಶಲಕ್ಷಣದ ನಿಮಿತ್ತ ಜೈನ ಮಂದಿರದಲ್ಲಿ ಕಳೆದ ಹತ್ತು ದಿನಗಳಿಂದ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆದವು. ಸಮಾರೋಪದ ಅಂಗವಾಗಿ ಪಲ್ಲಕ್ಕಿ ಮೆರವಣಿಗೆ ಜರುಗಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry