ಶನಿವಾರ, ಮೇ 8, 2021
26 °C

ಮಹಿಂದ್ರಾ ಸ್ಕೂಟರ್ ಮಾರಾಟ ದುಪ್ಪಟ್ಟು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ: ಮಾರ್ಚ್‌ನಲ್ಲಿ ಆರಂಭಿಸಿದ `ಮಹಿಂದ್ರಾ ಡ್ಯೂರೊ ಡಿಜೆಡ್ ಸ್ಕೂಟರ್ ಪರೀಕ್ಷಾರ್ಥ ಸವಾರಿ ಮಾಡಿ ನೋಡಿ~ ವಿಶೇಷ ಯೋಜನೆ ಅದ್ಭುತ ಫಲಿತಾಂಶ ನೀಡಿದೆ ಎಂದು ಮಹಿಂದ್ರಾ ಟೂ ವೀಲರ್ಸ್‌ ಲಿ.(ಎಂಟಿಡಬ್ಲ್ಯುಎಲ್) ಹೇಳಿಕೊಂಡಿದೆ.`ಮಹಿಂದ್ರಾ ಡ್ಯೂರೊ ಡಿಜೆಡ್ (125ಸಿಸಿ) ಸ್ಕೂಟರ್ ಒಮ್ಮೆ ಪರೀಕ್ಷಾರ್ಥ ಸವಾರಿ ಮಾಡಿ ನೋಡಿ- ನಂತರವೂ ಖುಷಿ ಆಗದೆ ನೀವು ಬೇರೊಂದು ಸ್ಕೂಟರ್ ಖರೀದಿಸಿದಲ್ಲಿ ರೂ. 500 ಪಡೆಯಿರಿ~ ಎಂಬ ಯೋಜನೆ ಆರಂಭಿಸಿದ್ದೆವು. ಈ ನಮ್ಮ ಡಿಜೆಡ್ ಬ್ರಾಂಡ್ ಖಂಡಿತವಾಗಿ ಸ್ಕೂಟರ್ ಪ್ರಿಯರ ಮನಸ್ಸು ಗೆದ್ದೇಗೆಲ್ಲುತ್ತದೆ ಎಂಬ ವಿಶ್ವಾಸವಿತ್ತು. ದಕ್ಷಿಣ ಭಾರತದ ದ್ವಿಚಕ್ರ ವಾಹನ ಪ್ರಿಯರು ಮಹಿಂದ್ರಾ ಡಿಜೆಡ್ ಸ್ಕೂಟರ್ ಸವಾರಿ ಮಾಡಿ `ರೊಂಬಾ ಸಾಲಿಡ್~ ಎಂದು ಪ್ರಶಂಸಿಸಿದ್ದಾರೆ.ನಮ್ಮ ಮಾರಾಟ ತಂತ್ರ ಯಶಸ್ವಿ ಆಗಿರುವುದಕ್ಕೆ ಇದು ಸಾಕ್ಷಿಯಾಗಿದೆ ಎಂದು ಎಂಟಿಡಬ್ಲ್ಯುಎಲ್‌ನ ಮಾರುಕಟ್ಟೆ ಅಭಿವೃದ್ಧಿ ವಿಭಾಗದ ಹಿರಿಯ ಉಪಾಧ್ಯಕ್ಷ ವಿರೇನ್ ಪೋಪ್ಲಿ ಹರ್ಷ ವ್ಯಕ್ತಪಡಿಸಿದ್ದಾರೆ. ಉತ್ತಮ ಫಲಿತಾಂಶ ನೀಡಿರುವ ಈ ಮಾರಾಟ ತಂತ್ರವನ್ನೇ ಈ ತಿಂಗಳು ದೇಶಾದ್ಯಂತ ವಿಸ್ತರಿಸಲಿದ್ದೇವೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಕಳೆದ ಹಣಕಾಸು ವರ್ಷ ಒಟ್ಟು 1,34,750 ಸ್ಕೂಟರ್ ಮಾರಾಟ ವಾಗಿವೆ. 2012ರ ಮಾರ್ಚ್‌ನಲ್ಲಿ 12750 ಸ್ಕೂಟರ್ ರಸ್ತೆಗಿಳಿದಿದ್ದು, ಮಾರಾಟದಲ್ಲಿ ಶೇ. 200ರ ಸಾಧನೆ ತೋರಿವೆ ಎಂದು ಪ್ರಕಟಣೆ ತಿಳಿಸಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.