ಮಹಿಳಾಪರ ಪಠ್ಯ ರೂಪಿಸಲು ಒತ್ತಾಯ

7

ಮಹಿಳಾಪರ ಪಠ್ಯ ರೂಪಿಸಲು ಒತ್ತಾಯ

Published:
Updated:
ಮಹಿಳಾಪರ ಪಠ್ಯ ರೂಪಿಸಲು ಒತ್ತಾಯ

ಬೆಂಗಳೂರು:ಮಹಿಳೆಯರ ಬಗ್ಗೆ ಸಹಾನುಭೂತಿ ರೂಪಿಸುವ ವಿಷಯಗಳನ್ನು ಶಾಲಾ ಪಠ್ಯಕ್ರಮದಲ್ಲಿ ಅಳವಡಿಸಬೇಕು, ಮಹಿಳೆಯರ ಪರ ಸಂವೇದನೆ ಇರುವ ಬರಹಗಳನ್ನು ಅದರಲ್ಲಿ ಅಳವಡಿಸಬೇಕು ಎಂದು ಕರ್ನಾಟಕ ಲೇಖಕಿಯರ ಸಂಘ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದೆ.ಸಿದ್ದರಾಮಯ್ಯ ಅವರನ್ನು ಗೃಹ ಕಚೇರಿ ‘ಕೃಷ್ಣಾ’ದಲ್ಲಿ ಶನಿವಾರ ಭೇಟಿ ಮಾಡಿದ ಸಂಘದ ನಿಯೋಗ, ‘ಅತ್ಯಾಚಾರಿಗಳಿಗೆ ಉಗ್ರ ಶಿಕ್ಷೆ ಆಗಬೇಕು. ಇದಕ್ಕೆ ಸೂಕ್ತವಾಗಿ ಕಾನೂನು ತಿದ್ದುಪಡಿ ಆಗಬೇಕು. ಹಾಗೆಯೇ, ಪಠ್ಯಕ್ರಮದಲ್ಲೂ ಬದಲಾವಣೆ ಆಗಬೇಕು’ ಎಂದು ಮನವಿ ಸಲ್ಲಿಸಿತು.ಸಂಘದ ಅಧ್ಯಕ್ಷೆ ಡಾ. ವಸುಂಧರಾ ಭೂಪತಿ, ಪ್ರೇಮಾ ಭಟ್‌, ಕೆ. ಷರೀಫಾ ಮತ್ತಿತರರು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry