ಸೋಮವಾರ, ಜೂನ್ 14, 2021
27 °C

ಮಹಿಳಾ ಉದ್ದಿಮೆದಾರರಿಗೆ ಕಾರ್ಯಾಗಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಶ್ರೀ ಶಕ್ತಿ ಅಭಿವೃದ್ಧಿ  ಸಂಸ್ಥೆ ಹಾಗೂ ರಾಜ್ಯ ತಾಂತ್ರಿಕ ಉನ್ನತೀಕರಣ ಪರಿಷತ್ತಿನ ಆಶ್ರಯದಲ್ಲಿ  ಈಚೆಗೆ ಸಂಪೂರ್ಣ ಯಾಂತ್ರೀಕೃತ ಆಹಾರ ತಯಾರಿಕೆ ಘಟಕಗಳನ್ನು ಹೊಂದಿರುವ ದೇಶದ ಮೊದಲ ಮಹಿಳಾ      ಕ್ಲಸ್ಟರ್‌ನ ಸದಸ್ಯರಿಗೆ  ಒಂದು  ದಿನದ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು.ಮುಖ್ಯ ಅತಿಥಿಯಾಗಿ ಆಗಮಿಸಿದ ಗುಲ್ಬರ್ಗ ಕೆನರಾ ಬ್ಯಾಂಕ್ ಸ್ಟೇಶನ್ ಬಜಾರ್ ಶಾಖೆಯ ಹಿರಿಯ ವ್ಯವಸ್ಥಾಪಕ ಕಡಿವಾಳ ಅವರು ಮಾತನಾಡಿ, ಕೇಂದ್ರ ಅನುದಾನದಲ್ಲಿ ಮಹಿಳೆಯರೇ ನಡೆಸುವ ಆಹಾರ ಸಂಸ್ಕರಣಾ ಘಟಕಗಳು ಮಹಿಳಾ ಉದ್ಯಮಶೀಲರಿಗೆ ಮಾದರಿ, ಹೆಮ್ಮೆಯ ವಿಷಯವೂ ಆಗಿದೆ ಎಂದರು.ಕೆಸಿಟಿಯು ಸಹಾಯಕ ನಿರ್ದೇಶಕ ಸತ್ಯನಾರಾಯಣ ಭಟ್ಟ, ಜಿಲ್ಲಾ ಕೈಗಾರಿಕಾ ಕೇಂದ್ರದ ಬಸವರಾಜ ಯಂಕಂಚಿ ಮಾತನಾಡಿದರು. ಬಿ.ಗುರುರಾಜು ಮಾಹಿತಿ ನೀಡಿದರು.  ಶ್ರೀಶಕ್ತಿ ಮಹಿಳಾ ಅಭಿವೃದ್ಧಿ ಸಂಸ್ಥೆಯ ಅಧ್ಯಕ್ಷೆ ವಿಜಯಲಕ್ಷ್ಮೀ ಆರ್.ಎಸ್. ಸ್ವಾಗತಿಸಿದರು. ಕಾರ್ಯದರ್ಶಿ ಆನಂದಿ ಮೊದ್ದಿಯಾರ ವಂದಿಸಿದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.