ಮಹಿಳಾ ಕಬಡ್ಡಿ: ಕೂಡಲಕುಪ್ಪೆ ತಂಡಕ್ಕೆ ಪ್ರಶಸ್ತಿ

7

ಮಹಿಳಾ ಕಬಡ್ಡಿ: ಕೂಡಲಕುಪ್ಪೆ ತಂಡಕ್ಕೆ ಪ್ರಶಸ್ತಿ

Published:
Updated:

ಶ್ರೀರಂಗಪಟ್ಟಣ: ಪಾಲಹಳ್ಳಿಯಲ್ಲಿ ಶಂಭುಲಿಂಗೇಶ್ವರ ಜಾತ್ರೆ ಅಂಗವಾಗಿ ಮಂಗಳವಾರ ನಡೆದ ಮಹಿಳಾ ಕಬಡ್ಡಿ ಪಂದ್ಯಾವಳಿ ಫೈನಲ್ ಪಂದ್ಯದಲ್ಲಿ ಮಂಡ್ಯ ತಾಲ್ಲೂಕು ಬೇಲೂರು ಮಹಿಳಾ ತಂಡದ ವಿರುದ್ಧ ಕೂಡಲಕುಪ್ಪೆ ತಂಡ ಸುಲಭ ಜಯ ಪಡೆಯಿತು.  ಪಂದ್ಯಾವಳಿಯಲ್ಲಿ ಆರಂಭದಿಂದಲೂ ಮೇಲುಗೈ ಸಾಧಿಸಿದ ಕೂಡಲಕುಪ್ಪೆ ತಂಡ ಜಯ ಸಾಧಿಸಿತು. ತಂಡದ ಸ್ಟಾರ್ ಆಟಗಾರ್ತಿಯರಾದ ಕೌಶಲ್ಯ, ರೂಪ ಮತ್ತು ಶಾಲಿನಿ ಉತ್ತಮ ಪ್ರದರ್ಶನ ತೋರಿದರು. ಇದಕ್ಕೂ ಮುನ್ನ ಕೂಡಲಕುಪ್ಪೆ ತಂಡ ಸೆಮಿಫೈನಲ್‌ನಲ್ಲಿ ಮಂಡ್ಯ ತಂಡವನ್ನು ಮಣಿಸಿ ಫೈನಲ್ ಪ್ರವೇಶಿಸಿತು.  ಪುರುಷರ ಕಬಡ್ಡಿ ಪಂದ್ಯಾವಳಿಯಲ್ಲಿ ಮೈಸೂರು, ಮಂಡ್ಯ, ಮದ್ದೂರು, ಹುಣಸೂರು ಸೇರಿದಂತೆ ವಿವಿಧೆಡೆಗಳಿಂದ ಒಟ್ಟು 36 ತಂಡಗಳು ಭಾಗವಹಿಸಿದ್ದವು. ಕಬಡ್ಡಿ ಪಂದ್ಯಾವಳಿ ವೀಕ್ಷಿಸಲು ಪಾಲಹಳ್ಳಿ ಅಷ್ಟೇ ಅಲ್ಲದೆ ಸುತ್ತಮುತ್ತಲ ಗ್ರಾಮಗಳ ಕ್ರೀಡಾಸಕ್ತರು ಅಗಮಿಸಿದ್ದರು. ಮಂಗಳವಾರ ತಡರಾತ್ರಿ ವರೆಗೆ ಪಂದ್ಯ ನಡೆಯಲಿದೆ ಎಂದು ಸಂಘಟಕರು ತಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry