ಬುಧವಾರ, ಜೂನ್ 23, 2021
22 °C

ಮಹಿಳಾ ಕಾರ್ಯಕ್ರಮಗಳಲ್ಲಿ ಹಸ್ತಕ್ಷೇಪ: ಆಕ್ರೋಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗಜೇಂದ್ರಗಡ: ‘ಮಹಿಳಾ ದಿನಾಚರಣೆಯಂತಹ ಮಹಿಳಾ ಪ್ರಧಾನ ಕಾರ್ಯಕ್ರಮಗಳಲ್ಲಿ ಚುನಾಯಿತ ಪುರುಷ  ಜನ ಪ್ರತಿನಿಧಿಗಳು ರಾಜಕೀಯ ಮಾಡುತ್ತಿರುವುದು ನಾಚಿಗೇಡಿನ ಸಂಗತಿ’ ಎಂದು ಸ್ನೇಹಾ ಮಹಿಳಾ ಮಂಡಳದ ಗೌರವಾಧ್ಯಕ್ಷೆ ಸಂಯುಕ್ತಾ ಬಂಡಿ ಆಕ್ರೋಶ ವ್ಯಕ್ತಪಡಿಸಿದರು.ಅವರು ಇಲ್ಲಿಯ ಉಣಚಗೇರಿ ಸಮಸ್ತ ಮಹಿಳಾ ಮಂಡಳದ ವತಿಯಿಂದ ಇಲ್ಲಿನ ಜಿ.ಕೆ.ಬಂಡಿ ಗಾರ್ಡ್‌ನಲ್ಲಿ ಭಾನುವಾರ ಆಯೋಜಿಸಲಾಗಿದ್ದ ‘ಮಹಿಳಾ ದಿನಾಚರಣೆ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.‘ಮತಕ್ಷೇತ್ರದ ಚುನಾಯಿತ ಪುರುಷರೊಬ್ಬರು ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಹಿಳಾ ನೌಕರರು ಪಾಲ್ಗೊಳ್ಳದಿರಲು ನಿರ್ಬಂಧ ವಿಧಿಸಿದ್ದಾರೆ. ಹಾಗೊಂದು ವೇಳೆ ಆ ಜನ ಪ್ರತಿನಿಯ ಅಲಿಖಿತ ನಿರ್ದೇಶನವನ್ನು ಉಲ್ಲಂಘಿಸಿದರೆ ಮಹಿಳಾ ಸರ್ಕಾರಿ ನೌಕರರನ್ನು ವರ್ಗಾವಣೆ ಅಥವಾ ಅಮಾನತು­ಗೊಳಿಸುವ ಕಟ್ಟಪ್ಪಣೆ ಹೊರಡಿಸಿರುವುದು ಚುನಾ­ಯಿತ ಜನಪ್ರತಿನಿಧಿಯ ಮಹಿಳಾ ಸಮುದಾಯದ ಬಗೆಗಿನ ಗೌರವವನ್ನು ಪ್ರದರ್ಶಿಸುತ್ತಿದೆ’ ಎಂದು ವ್ಯಂಗ್ಯವಾಡಿದರು.‘ರಾಜ್ಯದಲ್ಲಿ ಕಳೆದ ಒಂಬತ್ತು ತಿಂಗಳಿನಿಂದ ಮಹಿಳೆಯರ ಸ್ವಾತಂತ್ರ್ಯ–ಹಕ್ಕುಗಳನ್ನು ಕಸಿಯಲಾ­ಗುತ್ತಿದೆ. ಇದರಿಂದಾಗಿ ಮಹಿಳೆಯರು ಸ್ವತಂತ್ರವಾಗಿ ಜೀವಿಸಲು ಸಾಧ್ಯವಾಗುತ್ತಿಲ್ಲ. ಭಯದ ವಾತಾವರಣ­ದಲ್ಲಿ ಮಹಿಳೆಯರು ಕೈಯಲ್ಲಿ ಜೀವ ಹಿಡಿದುಕೊಂಡು ಬದುಕು ಸವೇಸಬೇಕಾದ ಅನಿವಾರ್ಯತೆ ಎದುರಾ­ಗಿದೆ. ಮಹಿಳೆಯರಿಗೆ ಮುಕ್ತ ಸ್ವಾತಂತ್ರ್ಯ ದೊರಕಬೇಕು. ನಿರ್ಭಿತಿಯಿಂದ ಬದುಕು ನಡೆಸುವಂತಹ ಸ್ವಚ್ಛಂದ ವಾತಾವರಣದ ಅವಶ್ಯಕತೆ ಇದೆ’ ಎಂದರು.ರೇವತಿ ಶಿವಕುಮಾರ ಉದಾಸಿ ಮಾತನಾಡಿ, ಪುರುಷ ಪ್ರಧಾನ ಮಹಿಳೆಯರಿಗೆ ಪುರುಷರ ಸರಿಸಮಾನ ಸ್ಥಾನಮಾನ ನೀಡಬೇಕು’ ಎಂದರು.ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಗೈದ ಪದ್ಮಾವತಿ ಗೌಡ, ಸ್ವಪ್ನಾ ಬನ್ನಿಕೊಪ್ಪ, ಲಲಿತಾ ಪಾಟೀಲ, ಕಸ್ತೂರಿ ಹಿರೇಮಠ, ಮಾಬೂಬಿ ಮುಲ್ಲಾ, ಷಮ್ಮುಬಿ ಮುಲ್ಲಾ ಇವರನ್ನು ಸನ್ಮಾನಿಸಲಾಯಿತು.ಪುರಸಭೆ ಅಧ್ಯಕ್ಷೆ ಕವಿತಾ ಜಾಲಿಹಾಳ, ಉಪಾಧ್ಯಕ್ಷೆ ಅಕ್ಕಮ್ಮ ಜಾನಾಯಿ, ಪುರಸಭೆ ಸದಸ್ಯೆಯರಾದ ಸುಮಿತ್ರಾ ತೊಂಡಿಹಾಳ, ವಿಜಯಲಕ್ಷ್ಮಿ ಚಟ್ಟೇರ್‌್, ಡಾ.ರೇಷ್ಮಾ ಕೋಲಕಾರ, ಗೀತಾ ಕಂಬಳ್ಯಾಳ, ಕವಿತಾ ಹಿರೇಮನಿ, ರಾಜೇಶ್ವರಿ ಪಟ್ಟೇದ, ವಿಜಯಾಬಾಯಿ ಬಾಗಮಾರ, ವನಜಾ ಮಾಳಗಿ, ಬಸಮ್ಮ ಸಾಲಿಮಠ, ದೀಪಾ ಗೋಯಲ್‌್, ರುಕ್ಮಿಣಿಬಾಯಿ ಮೆಹರವಾಡೆ, ಶಾಂತಾಬಾಯಿ ಜಾಧವ, ಅಕ್ಕಮ್ಮ ಬಡಿಗೇರ, ಲಕ್ಷ್ಮೀದೇವಿ ಜೋಷಿ, ಲತಾ ಕುಲಕರ್ಣಿ, ಶಾಂತವ್ವ ಕುಂಬಾರ ವೇದಿಕೆಯಲ್ಲಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.