ಬುಧವಾರ, ಜೂನ್ 16, 2021
23 °C

ಮಹಿಳಾ ಕ್ರಿಕೆಟ್‌: ಭಾರತಕ್ಕೆ ಸರಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾಕ್ಸ್‌ಬಜಾರ್‌, ಢಾಕಾ (ಪಿಟಿಐ): ಶ್ರಾವಂತಿ ನಾಯ್ಡು (13ಕ್ಕೆ3) ಮತ್ತು ಗೋಹರ್‌ ಸುಲ್ತಾನ (17ಕ್ಕೆ3) ಅವರ ಚುರುಕಿನ ದಾಳಿಯ ನೆರವಿನಿಂದ ಭಾರತ ಮಹಿಳಾ ತಂಡ ಬಾಂಗ್ಲಾದೇಶ ವಿರುದ್ಧದ ಮೂರನೇ ಹಾಗೂ ಕೊನೆಯ ಟ್ವೆಂಟಿ–20 ಕ್ರಿಕೆಟ್‌ ಪಂದ್ಯದಲ್ಲಿ 7 ವಿಕೆಟ್‌ಗಳ ಅಮೋಘ ಗೆಲುವು ಸಾಧಿಸಿತು. ಜೊತೆಗೆ ಸರಣಿಯನ್ನು 3–0ರಲ್ಲಿ ತನ್ನದಾಗಿಸಿಕೊಂಡಿತು.ಕಾಕ್ಸ್‌ ಬಜಾರ್‌ನಲ್ಲಿರುವ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್‌್ ಮಾಡಿದ ಆತಿಥೇಯ ಬಾಂಗ್ಲಾ ನಿಗದಿತ ಓವರ್‌ಗಳಲ್ಲಿ ಎಂಟು ವಿಕೆಟ್‌ ಕಳೆದುಕೊಂಡು 81 ರನ್‌ ಕಲೆ ಹಾಕಿತ್ತು. 16.4 ಓವರ್‌ಗಳಲ್ಲಿ ಮೂರು ವಿಕೆಟ್‌ ಕಳೆದುಕೊಂಡು ಪ್ರವಾಸಿ ಭಾರತ ಗುರಿ ತಲುಪಿತು.ಇದೇ ಕ್ರೀಡಾಂಗಣದಲ್ಲಿ ನಡೆದಿದ್ದ ಎರಡನೇ ಪಂದ್ಯದಲ್ಲಿ ಹರ್ಮನ್‌ಪ್ರೀತ್‌ ಕೌರ್‌ ಸಾರಥ್ಯದ ಭಾರತ ತಂಡ ಎಂಟು ವಿಕೆಟ್‌ಗಳ ಗೆಲುವು ಸಾಧಿಸಿತ್ತು. ಮೊದಲ ಪಂದ್ಯದಲ್ಲಿ 16 ರನ್‌ ಜಯ ಪಡೆದಿತ್ತು. ಐಸಿಸಿ ಮಹಿಳಾ ಟಿ–20 ವಿಶ್ವಕಪ್‌ ಆರಂಭವಾಗಲು ಕೆಲವೇ ದಿನಗಳು ಬಾಕಿ ಇರುವಂತೆಯೇ ಭಾರತ ತಂಡದಲ್ಲಿ ಅಮೋಘ ಸಾಧನೆ ಮೂಡಿ ಬಂದಿದೆ.ಸಂಕ್ಷಿಪ್ತ ಸ್ಕೋರು: ಬಾಂಗ್ಲಾದೇಶ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 81. (ಆಯೆಷಾ ರೆಹಮಾನ್ 18, ಕೆ. ಸಲ್ಮಾ 34, ಲತಾ ಮಂಡಲ್‌ 9; ಶುಭಲಕ್ಷ್ಮಿ ಶರ್ಮಾ 7ಕ್ಕೆ1, ಶ್ರಾವಂತಿ  ನಾಯ್ಡು 13ಕ್ಕೆ3, ಗೋಹರ್‌ ಸುಲ್ತಾನಾ 17ಕ್ಕೆ3)ಭಾರತ 16.4 ಓವರ್‌ಗಳಲ್ಲಿ 3  ವಿಕೆಟ್‌ಗೆ 82. (ಲತಿಕಾ ಕುಮಾರಿ 36, ಶಿಖಾ ಪಾಂಡೆ ಔಟಾಗದೆ 26; ಜಹಾನರಾ ಆಲಮ್‌ 17ಕ್ಕೆ1).

ಫಲಿತಾಂಶ: ಭಾರತಕ್ಕೆ 3 ವಿಕೆಟ್‌ ಜಯ. ಹಾಗೂ 3–0ರಲ್ಲಿ ಸರಣಿ ಜಯ. ಪಂದ್ಯ ಶ್ರೇಷ್ಠ: ಶ್ರಾವಂತಿ ನಾಯ್ಡು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.