ಬುಧವಾರ, ಜೂನ್ 16, 2021
25 °C

ಮಹಿಳಾ ಕ್ರಿಕೆಟ್‌: ಭಾರತಕ್ಕೆ ಸುಲಭ ಜಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಢಾಕಾ: ಜೂಲನ್‌ ಗೋಸ್ವಾಮಿ ಅವರ ಆಲ್‌ರೌಂಡ್‌ ಆಟದ ನೆರವಿನಿಂದ ಭಾರತ ತಂಡದವರು ಇಲ್ಲಿ ನಡೆಯುತ್ತಿರುವ ಬಾಂಗ್ಲಾದೇಶ ವಿರುದ್ಧದ ಮಹಿಳೆಯರ ಟ್ವೆಂಟಿ–20 ಕ್ರಿಕೆಟ್‌ ಸರಣಿಯ ಎರಡನೇ ಪಂದ್ಯದಲ್ಲಿ  ಎಂಟು ವಿಕೆಟ್‌ಗಳ ಗೆಲುವು ಸಾಧಿಸಿದರು.ಕಾಕ್ಸ್‌ ಬಜಾರ್‌ನಲ್ಲಿರುವ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಬಾಂಗ್ಲಾದೇಶ 20 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ ಕೇವಲ 65 ರನ್‌ ಗಳಿಸಿತು. ಈ ಗುರಿಯನ್ನು ಭಾರತ 12.3 ಓವರ್‌ಗಳಲ್ಲಿ ಕೇವಲ 2 ವಿಕೆಟ್‌ ಕಳೆದುಕೊಂಡು ತಲುಪಿತು. ಅಷ್ಟು ಮಾತ್ರವಲ್ಲದೇ, ಮೂರು ಪಂದ್ಯಗಳ ಸರಣಿಯಲ್ಲಿ ಭಾರತ 2–0ರಲ್ಲಿ ಗೆಲುವಿನ ಮುನ್ನಡೆ ಸಾಧಿಸಿದೆ.ರನ್‌ಔಟ್‌ ಆಘಾತ: ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಲು ಮುಂದಾದ ಬಾಂಗ್ಲಾ ತಂಡವು ಆರಂಭಿಕ ಆಟಗಾರ್ತಿಯರನ್ನು ಬಹುಬೇಗ ಕಳೆದುಕೊಂಡಿತು. ಅಯಾಷಾ ರೆಹಮಾನ್‌ ಹಾಗೂ ಸಂಜಿದಾ ಇಸ್ಲಾಮ್‌ ರನ್‌ಔಟ್‌ ಆದರು. ನಂತರದ ಬಂದ ಫರ್ಗಣ ಹಕ್‌ ಕೊಂಚ ಪ್ರತಿರೋಧಯೊಡ್ಡಿದರು. 36 ಎಸೆತಗಳನ್ನು ಎದುರಿಸಿದ ಅವರು ಒಂದು ಬೌಂಡರಿ ಸಮೇತ 18 ರನ್‌ ಗಳಿಸಿದರು. ಇದು ತಂಡದ ಪರ ಗರಿಷ್ಠ ಸ್ಕೋರ್‌ ಕೂಡ.ಆನಂತರ ಬಂದು ಆಟಗಾರ್ತಿಯರು ಬಹುಬೇಗನೇ ವಿಕೆಟ್‌ ಒಪ್ಪಿಸಿದರು. ಇದಕ್ಕೆ ಕಾರಣ  ಪೂನಮ್‌ ಯಾದವ್‌ ಹಾಗೂ ಗೋಸ್ವಾಮಿ ಅವರ ಪರಿಣಾಮಕಾರಿ ದಾಳಿ. ಜೊತೆಗೆ ಬಾಂಗ್ಲಾ ತಂಡದ ನಾಲ್ವರು ಆಟಗಾರ್ತಿಯರು ರನ್‌ಔಟ್‌ ಆದರು. ಉತ್ತಮ ಆರಂಭ: ಅಲ್ಪ ಗುರಿ ಎದುರು ಭಾರತಕ್ಕೆ ಉತ್ತಮ ಆರಂಭವೇ ಲಭಿಸಿತು. ಆರಂಭಿಕ ಆಟಗಾರ್ತಿಯರಾದ ಮಾಧುರಿ ಮೆಹ್ತಾ ಹಾಗೂ ಶಿಖಾ ಪಾಂಡೆ ಮೊದಲ ವಿಕೆಟ್‌ಗೆ 46 ಎಸೆತಗಳಲ್ಲಿ 45 ರನ್‌ ಸೇರಿಸಿದರು. ನಂತರ ಜೂಲನ್‌ ಕೇವಲ 13 ಎಸೆತಗಳಲ್ಲಿ 18 ರನ್‌ ಗಳಿಸಿ ತಂಡವನ್ನು ಗೆಲುವಿನ ಗೆರೆ ಮುಟ್ಟಿಸಿದರು. ಅವರು ನಾಲ್ಕು ಬೌಂಡರಿ ಗಳಿಸಿದರು.ಸಂಕ್ಷಿಪ್ತ ಸ್ಕೋರ್‌:

ಬಾಂಗ್ಲಾದೇಶ:
20 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 65 (ಆಯಾಷಾ ರೆಹಮಾನ್‌ 10, ಫರ್ಗಣ ಹಕ್‌ 18; ಜೂಲನ್‌ ಗೋಸ್ವಾಮಿ 15ಕ್ಕೆ2, ಪೂನಮ್‌ ಯಾದವ್‌ 9ಕ್ಕೆ2);

ಭಾರತ: 12.3 ಓವರ್‌ಗಳಲ್ಲಿ 2 ವಿಕೆಟ್‌ ನಷ್ಟಕ್ಕೆ 66 (ಮಾಧುರಿ ಮೆಹ್ತಾ 23, ಶಿಖಾ ಪಾಂಡೆ 16, ಜೂಲನ್‌ ಗೋಸ್ವಾಮಿ ಔಟಾಗದೆ 18; ಪನಾ ಘೋಷ್‌ 6ಕ್ಕೆ1). ಫಲಿತಾಂಶ: ಭಾರತಕ್ಕೆ 8 ವಿಕೆಟ್‌ ಗೆಲುವು ಹಾಗೂ ಸರಣಿಯಲ್ಲಿ 2–0 ಮುನ್ನಡೆ. ಪಂದ್ಯದ ಶ್ರೇಷ್ಠ ಆಟಗಾರ್ತಿ: ಜೂಲನ್‌ ಗೋಸ್ವಾಮಿ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.