ಮಂಗಳವಾರ, ಮಾರ್ಚ್ 9, 2021
31 °C

ಮಹಿಳಾ ಚಿತ್ರ: ಅಕ್ಷಯ್‌ ಚಿತ್ತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಹಿಳಾ ಚಿತ್ರ: ಅಕ್ಷಯ್‌ ಚಿತ್ತ

ಮಹಿಳಾ ಪ್ರಧಾನ ಸಿನಿಮಾಗಳಲ್ಲಿ ನಟಿಸಲು ಉತ್ಸುಕನಾಗಿದ್ದೇನೆ ಎಂದು ನಟ ಅಕ್ಷಯ್‌ ಕುಮಾರ್ ಹೇಳಿಕೊಂಡಿದ್ದಾರೆ. ನಟಿ ನಿಮ್ರತ್‌ ಕೌರ್‌ ಅವರೊಂದಿಗೆ ನಟಿಸುತ್ತಿರುವ ‘ಏರ್‌ಲಿಫ್ಟ್‌’ ಚಿತ್ರದ ಬಗ್ಗೆ ಪ್ರತಿಕ್ರಿಯಿಸಿರುವ ಅವರು ‘ಬಾಲಿವುಡ್‌ನಲ್ಲಿ  ನಿರ್ಮಾಣವಾಗುತ್ತಿರುವ ಮಹಿಳಾ ಪ್ರಧಾನ ಚಿತ್ರಗಳಲ್ಲಿ ಹೆಚ್ಚಾಗಿ ಜನಪ್ರಿಯ ನಟಿಯರೇ ಅಭಿನಯಿಸುತ್ತಾರೆ. ಆದರೆ ಪುರುಷ ಪಾತ್ರದಲ್ಲಿ ಹೊಸದಾಗಿ ಬಂದಿರುವವರು ಅಥವಾ ಇನ್ನೂ ಜನಪ್ರಿಯತೆ ಗಳಿಸದವರು ಕಾಣಿಸಿಕೊಳ್ಳುತ್ತಾರೆ. ಆದರೆ ‘ಏರ್‌ಲಿಫ್ಟ್‌’ ಚಿತ್ರದ ಸ್ಕ್ರಿಪ್ಟ್‌ ತುಂಬಾ ಇಷ್ಟವಾಗಿದೆ. ಸಿನಿಮಾದ ವಸ್ತು ವಿಷಯ ಮಹಿಳಾ ಪ್ರಧಾನವೋ ಅಥವಾ ಪುರುಷ ಪ್ರಧಾನವೋ ಎನ್ನುವುದಕ್ಕಿಂತ ಚಿತ್ರದ ಸ್ಕ್ರಿಪ್ಟ್‌ ಹಾಗೂ ಪಾತ್ರಗಳ ಹೇಗಿವೆ ಎಂಬುದು ಮುಖ್ಯ’ ಎಂದಿದ್ದಾರೆ.‘ಈ ಮೊದಲು ಐತ್‌ರಾಝ್‌ ಎನ್ನುವ ಸಿನಿಮಾವೊಂದನ್ನು ಮಾಡಿದ್ದೆ. ಕರೀನಾ ಹಾಗೂ ಪ್ರಿಯಾಂಕಾ ಅವರನ್ನು ಕೇಂದ್ರೀಕರಿಸಿದ ಚಿತ್ರ ಅದಾಗಿತ್ತು. ಆ ಸಿನಿಮಾ ಜನಪ್ರಿಯತೆಗಳಿಸುವುದರ ಜೊತೆಗೆ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿತ್ತು. ಸಿನಿಮಾದಲ್ಲಿರುವ ಸಂದೇಶವನ್ನು, ಜನರು ಸ್ವೀಕರಿಸಿದ ರೀತಿ ಎಂಥದ್ದು ಎನ್ನುವುದು ಮುಖ್ಯವಾಗುತ್ತದೆಯೇ ವಿನಾ ನನ್ನೊಬ್ಬನ ಪಾತ್ರ ಎಷ್ಟಿದೆ ಎನ್ನುವುದು ಮುಖ್ಯವಾಗುವುದಿಲ್ಲ’ ಎಂದಿದ್ದಾರೆ ಅಕ್ಷಯ್‌.‘ಪುರುಷ ಪ್ರಧಾನ ಸಿನಿಮಾಗಳಲ್ಲಿ ವಾಣೀಜ್ಯೋದ್ದೇಶಕ್ಕಾಗಿ ಮಹಿಳಾ ಸೂಪರ್‌ಸ್ಟಾರ್‌ಗಳನ್ನು ಬಳಸಿಕೊಳ್ಳುವಂತೆ ಮಹಿಳಾ ಪ್ರಧಾನ ಸಿನಿಮಾದಲ್ಲಿ ಜನಪ್ರಿಯ ನಟರನ್ನು ಬಳಸಿಕೊಳ್ಳಲಾಗುತ್ತದೆ. ಈ ವಿಷಯದಲ್ಲಿ ಪ್ರೇಕ್ಷಕರು ಧನಾತ್ಮಕವಾಗಿಯೇ ಚಿಂತಿಸುತ್ತಾರೆ ಎಂಬುದು ನನ್ನ ಭಾವನೆ’ ಎಂದು ನಿಮ್ರತ್‌ ಕೂಡ ಪ್ರತಿಕ್ರಿಯಿಸಿದ್ದಾರೆ. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.