ಮಹಿಳಾ ಟ್ವೆಂಟಿ-20 ವಿಶ್ವಕಪ್ ಕ್ರಿಕೆಟ್:ಆಸ್ಟ್ರೇಲಿಯಾಕ್ಕೆ ಎರಡನೇ ಬಾರಿ ಕಿರೀಟ

7

ಮಹಿಳಾ ಟ್ವೆಂಟಿ-20 ವಿಶ್ವಕಪ್ ಕ್ರಿಕೆಟ್:ಆಸ್ಟ್ರೇಲಿಯಾಕ್ಕೆ ಎರಡನೇ ಬಾರಿ ಕಿರೀಟ

Published:
Updated:
ಮಹಿಳಾ ಟ್ವೆಂಟಿ-20 ವಿಶ್ವಕಪ್ ಕ್ರಿಕೆಟ್:ಆಸ್ಟ್ರೇಲಿಯಾಕ್ಕೆ ಎರಡನೇ ಬಾರಿ ಕಿರೀಟ

ಕೊಲಂಬೊ (ಪಿಟಿಐ): ಕ್ಷಣ ಕ್ಷಣಕ್ಕೆ ಕುತೂಹಲ ಕೆರಳಿಸುತ್ತಾ ಸಾಗಿದ ಮಹಿಳಾ ಟ್ವೆಂಟಿ-20 ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಫೈನಲ್‌ನಲ್ಲಿ ಇಂಗ್ಲೆಂಡ್ ತಂಡವನ್ನು ಸೋಲಿಸಿದ ಆಸ್ಟ್ರೇಲಿಯಾ ತಂಡದವರು ಚಾಂಪಿಯನ್ ಆದರು.

ಆರ್.ಪ್ರೇಮದಾಸ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಅಂತಿಮ ಹಣಾಹಣಿಯಲ್ಲಿ ನಾಲ್ಕು ರನ್‌ಗಳಿಂದ ಗೆದ್ದ ಕಾಂಗರೂ ಬಳಗ ಸತತ ಎರಡನೇ ಬಾರಿಗೆ ಈ ಗೌರವ ಸಂಪಾದಿಸಿತು.ಜೊತೆಗೆ ಲೀಗ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧದ ಸೋಲಿಗೆ ಭರ್ಜರಿಯಾಗಿ ಸೇಡು ತೀರಿಸಿಕೊಂಡರು. ಆದರೆ ಈ ಟೂರ್ನಿಯ ಎಲ್ಲಾ ಪಂದ್ಯಗಳಲ್ಲಿ ಜಯಿಸಿದ್ದ ಇಂಗ್ಲೆಂಡ್ ಫೈನಲ್‌ನಲ್ಲಿ ಎಡವಿತು. ಆಸ್ಟ್ರೇಲಿಯಾದ 142 ರನ್‌ಗಳ ಮೊತ್ತಕ್ಕೆ ಉತ್ತರವಾಗಿ ಇಂಗ್ಲೆಂಡ್ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 138 ರನ್ ಗಳಿಸಿತು.

 

ಗೆಲ್ಲಲು ಕೊನೆಯ ಓವರ್‌ನಲ್ಲಿ 16 ರನ್‌ಗಳ ಅಗತ್ಯವಿತ್ತು. ಆದರೆ ಆಫ್ ಸ್ಪಿನ್ನರ್ ಎರಿನ್ ಒಸ್ಬೊರ್ನ್ ಓವರ್‌ನಲ್ಲಿ ಇಂಗ್ಲೆಂಡ್ ಗಳಿಸಿದ್ದು ಕೇವಲ 11 ರನ್. `ಇದೊಂದು ವಿಶೇಷ ಅನುಭವ. ಚಾಂಪಿಯನ್ ಆಗುತ್ತೇವೆ ಎಂಬ ಭರವಸೆ ಇತ್ತು. ಎದುರಾಳಿ ಇಂಗ್ಲೆಂಡ್ ತಂಡದವರು ಉತ್ತಮ ಪೈಪೋಟಿ ನೀಡಿದರು. ಇದುವರೆಗಿನ ಕಠಿಣ ಪ್ರಯತ್ನಕ್ಕೆ ಫಲ ಸಿಕ್ಕಿದೆ~ ಎಂದು ಆಸ್ಟ್ರೇಲಿಯಾ ತಂಡದ ನಾಯಕಿ ಜೋಡಿ ಫೀಲ್ಡ್ಸ್ ನುಡಿದರು.`18 ತಿಂಗಳಿಂದ ನಾವು ಕಠಿಣ ಪ್ರಯತ್ನ ಹಾಕಿ ಅಭ್ಯಾಸ ನಡೆಸಿದ್ದೆವು. ಆದರೆ ಈ ದಿನ ನಮ್ಮದಾಗಿರಲಿಲ್ಲ ಅಷ್ಟೆ. ಚಾಂಪಿಯನ್ ಆದ ಆಸ್ಟ್ರೇಲಿಯಾ ತಂಡದವರಿಗೆ ನಮ್ಮ ಅಭಿನಂದನೆಗಳು. ಆದರೆ ಫೈನಲ್ ತಲುಪಿದ್ದು ಒಂದು ಉತ್ತಮ ಸಾಧನೆ~ ಎಂದು ಇಂಗ್ಲೆಂಡ್ ತಂಡದ ನಾಯಕಿ ಚಾರ್ಲೊಟ್ ಎಡ್ವರ್ಡ್ಸ್ ಹೇಳಿದರು.ಅಷ್ಟೇನು ಸವಾಲಿನಿಂದ ಕೂಡಿರದ ಗುರಿ ಎದುರು ಇಂಗ್ಲೆಂಡ್ ತಂಡಕ್ಕೆ ನಾಯಕಿ ಎಡ್ವರ್ಡ್ಸ್ (28; 23 ಎಸೆತ) ಉತ್ತಮ ಆರಂಭವನ್ನೇ ನೀಡಿದರು. ಆದರೆ ಈ ತಂಡದ ಪ್ರಮುಖ ಆಟಗಾರ್ತಿಯರು ಕೈಕೊಟ್ಟರು. ಕೊನೆಯಲ್ಲಿ ಡೇನಿಲೆ ಹೆಜೆಲ್ (ಔಟಾಗದೆ 16; 13 ಎ.) ನಡೆಸಿದ ಪ್ರಯತ್ನ ಕೂಡ ಸಾಕಾಲಿಲ್ಲ.ಈ ಮುನ್ನ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಲು ಅವಕಾಶ ಪಡೆದಿದ್ದ ಆಸ್ಟ್ರೇಲಿಯಾಕ್ಕೆ ಉತ್ತಮ ಆರಂಭ ಲಭಿಸಿತು. ಬಳಿಕ ಜೆಸ್ ಕೆಮರಾನ್ (45; 34 ಎ.) ತಂಡದ ಮೊತ್ತ ಹೆಚ್ಚಿಸಿದರು.
 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry