ಭಾನುವಾರ, ಜೂನ್ 13, 2021
21 °C

ಮಹಿಳಾ ದಿನದ ಅಂಗವಾಗಿ ಕ್ಯಾನ್ಸರ್ ತಪಾಸಣೆ ಶಿಬಿರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಅಂತರರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ಇದೇ ಶನಿವಾರ (ಮಾ. 8) ನಗರದ ವಿವಿಧ ಭಾಗಗಳಲ್ಲಿ ಉಚಿತ ನೇತ್ರ ತಪಾಸಣೆ, ಕ್ಯಾನ್ಸರ್‌ ತಪಾಸಣೆ ಮತ್ತು ದಂತ ಪರೀಕ್ಷಾ ಶಿಬಿರಗಳು ನಡೆಯಲಿವೆ.ಕರ್ನಾಟಕ ಕ್ಯಾನ್ಸರ್‌ ಸೊಸೈಟಿಯು  ವೈಯಾಲಿಕಾವಲ್‌ನಲ್ಲಿರುವ ಸೊಸೈ­ಟಿಯ ಆವರಣದಲ್ಲಿ ಮಧುಮೇಹ ತಪಾ­ಸಣೆ, ಕ್ಯಾನ್ಸರ್‌ ತಪಾಸಣೆ ಮತ್ತು ದಂತ ಪರೀಕ್ಷಾ ಶಿಬಿರವನ್ನು ಆಯೋಜಿಸಿದೆ.ಕ್ಯಾನ್ಸರ್‌ ತಪಾಸಣೆಗೆ ಒಳಗಾಗು­ವ­ವರು ಹೆಸರು   (84539 37230) ನೋಂದಾಯಿಸಿಕೊಳ್ಳಬಹುದಾಗಿದೆ. ಇಂಡಿಯನ್‌ ಓವರ್‌ಸಿಸ್‌ ಬ್ಯಾಂಕ್‌ನ ಬೆಂಗಳೂರು ಘಟಕವು ಬೆಳಿಗ್ಗೆ 9.30ರಿಂದ ಮಧ್ಯಾಹ್ನ 2.30ರ ವರೆಗೆ ನೇತ್ರ ತಪಾಸಣೆ ಶಿಬಿರವನ್ನು ಏರ್ಪಡಸಿದೆ. ಜಯನಗರ ಏಳನೇ ಹಂತದಲ್ಲಿರುವ ಬ್ಯಾಂಕ್‌ನ ಶಾಖೆಯ ಆವರಣದಲ್ಲಿ ಶಿಬಿರ ನಡೆಯಲಿದೆ.ವಾಸನ್‌ ಐ ಕೇರ್‌ ಆಸ್ಪತ್ರೆಯು ಮಾರ್ಚ್‌ 8 ರಿಂದ 31ರವರೆಗೆ 16 ವರ್ಷಕ್ಕಿಂತ ಹೆಚ್ಚಿನ ವಯೋಮಾನ ಮಹಿಳೆಯರಿಗೆ ಉಚಿತ ನೇತ್ರ ತಪಾ­ಸಣೆ ಶಿಬಿರವನ್ನು ಆಯೋಜಿಸಿದೆ.ಶಿಬಿರದಲ್ಲಿ ತಪಾಸಣೆ ಒಳಗಾಗು­ವ­ವರಿಗೆ ಕನ್ನಡಕಗಳು, ಲ್ಯಾಸಿಕ್‌ ಶಸ್ತ್ರ ಚಿಕಿತ್ಸೆಗೆ ಶೇ 10ರಷ್ಟು ಮತ್ತು ಇತರೆ ಶಸ್ತ್ರ ಚಿಕಿತ್ಸೆಗಳಿಗೆ ಶೇ 5ರಷ್ಟು ರಿಯಾ­ಯಿತಿ ನೀಡಲಾಗುವುದು.  ವಾಸನ್‌ ಐ ಕೇರ್‌ನ 13 ಆಸ್ಪತ್ರೆಗಳಲ್ಲಿ ತಪಾಸಣೆ ನಡೆಯಲಿದೆ. ಆಸಕ್ತರು  96200 24517 ಸಂಪರ್ಕಿಸಬಹುದು ಎಂದು ಪ್ರಕಟಣೆಗಳು ತಿಳಿಸಿವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.