ಬುಧವಾರ, ಮೇ 18, 2022
23 °C

ಮಹಿಳಾ ದೌರ್ಜನ್ಯದ ವಿರುದ್ಧ ಹೋರಾಟ ಅವಶ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾನಗಲ್ಲ: ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಹಾನಗಲ್ಲಿನ ಲೊಯೋಲಾ ವಿಕಾಸ ಕೇಂದ್ರ ಮತ್ತು ಮಹಿಳಾ ಸ್ವ-ಸಹಾಯ ಸಂಘಗಳ ಒಕ್ಕೂಟದ ಸಂಯುಕ್ತ ಆಶ್ರಯದಲ್ಲಿ ಇಲ್ಲಿನ ತಾ.ಪಂ. ಕಾರ್ಯಾಲಯದ ಆವರಣದಿಂದ ಲೊಯೋಲಾ ವಿಕಾಸ ಕೇಂದ್ರದವರೆಗೆ ಮಹಿಳಾ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿತ್ತು.ನಂತರ ಲೊಯೋಲಾ ವಿಕಾಸ ಕೇಂದ್ರದ ಸಭಾ ಭವನದಲ್ಲಿ ನಡೆದ ಕಾರ್ಯಕ್ರಮವನ್ನು ಪುರಸಭೆ ಅಧ್ಯಕ್ಷೆ ಲಕ್ಷ್ಮವ್ವ ಹಳೆಕೋಟಿ ಉದ್ಘಾಟಿಸಿದರು. ಉಪನ್ಯಾಸ ನೀಡಿದ ಮುಂಡಗೋಡಿನ ವಕೀಲರಾದ ಅನ್ನಪೂರ್ಣ ಭಟ್, ಇಂದು ಮಹಿಳೆ ಜಗತ್ತನ್ನು ಆಳಬಲ್ಲಳು ಎಂಬುದನ್ನು ತೋರಿಸಿಕೊಟ್ಟಿದ್ದಾಳೆ. ವಿವಿಧ ಕ್ಷೇತ್ರಗಳಲ್ಲಿ ಮಹಿಳಾ ಸಾಧನೆ ಅನನ್ಯವಾಗಿದೆ. ಈ ನಿಟ್ಟಿನಲ್ಲಿ ಕಾನೂನಿನಲ್ಲಿ ಒದಗಿಸಿರುವ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳುವ ಮೂಲಕ ಮಹಿಳಾ ದೌರ್ಜನ್ಯದ ವಿರುದ್ಧ ಒಗ್ಗಟ್ಟಿನಿಂದ ಹೊರಾಡಬೇಕು ಎಂದು ಸಲಹೆ ನೀಡಿದರು.ಅಧ್ಯಕ್ಷತೆ ವಹಿಸಿ ಮಾತನಾಡಿದ ಭಗೀನಿ ಅನಿತಾ ಡಿ’ಸೋಜಾ, ಸಮಾಜದಲ್ಲಿ ಮಹಿಳೆ ಪುರುಷರಷ್ಟೆ ಸಮಾನಳು. ಚುನಾವಣಾ ಮಿಸಲಾತಿಗಳ ಉಪಯೋಗದಿಂದ ಮಹಿಳೆಯರು ಅಧಿಕಾರದ ಚುಕ್ಕಾಣಿ ಹಿಡಿಯುತ್ತಿರುವುದು ಹರ್ಷದಾಯಕ ವಿಚಾರ ಎಂದರು.ಲೊಯೋಲಾ ವಿಕಾಸ ಕೇಂದ್ರದ ಸಿಬ್ಬಂದಿ ‘ಮಹಿಳಾ ದೌರ್ಜನ್ಯ’ ಎಂಬ ಕಿರುರೂಪಕವನ್ನು ಪ್ರದರ್ಶಿಸುವ ಮೂಲಕ ಮಹಿಳೆಯರ ಮೇಲಾಗುವ ದೌರ್ಜನ್ಯವನ್ನು ತಡೆಗಟ್ಟುವ ಕುರಿತು ಮಾಹಿತಿ ನೀಡಿದರು.ಸಂಸ್ಥೆಯ ಸಂಯೋಜಕ ಪ್ರವೀಣ ಪ್ರಾಸ್ತಾವಿಕವಾಗಿ ಮಾತನಾಡಿದರು. ನಿರ್ದೇಶಕರಾದ ಅರುಣ ಲೂಯಿಸ್, ಮೇಲ್ವಿನ್ ಲೋಬೊ, ಜೋಸೆಫ್, ಜೆರೋಮ್, ಮಹಿಳಾ ಸಂಘಗಳ ಮುಖ್ಯಸ್ಥರಾದ ಮಲ್ಲಮ್ಮ, ಈರಮ್ಮ ಪಾಟೀಲ, ರಶೀದಾ ಬಾನು ಮುಂತದವರು ಪಾಲ್ಗೊಂಡಿದ್ದರು. ಕಸ್ತೂರಿ ಸ್ವಾಗತಿಸಿದರು. ಬಸಮ್ಮ ಒಡೆಯರ ಕಾರ್ಯಕ್ರಮ ನಿರೂಪಿಸಿದರು. ದಾನಮ್ಮ ವಂದಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.