ಮಂಗಳವಾರ, ಜನವರಿ 28, 2020
21 °C

ಮಹಿಳಾ ನೈಪುಣ್ಯ: ತರಬೇತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಗೃಹಿಣಿಯರೂ ವಿವಿಧ ಬಗೆಯ ವೃತ್ತಿ ಕೈಗೊಳ್ಳುವಂತಾಗಲು ನಗರದ ಪ್ರಮುಖ ಶೈಕ್ಷಣಿಕ ಸಂಸ್ಥೆ ದಯಾನಂದ ಸಾಗರ ಇನ್‌ಸ್ಟಿಟ್ಯೂಷನ್ಸ್ (ಡಿಎಸ್‌ಐ), ವಿನೂತನ ತರಬೇತಿ  `ಮಹಿಳಾ ನೈಪುಣ್ಯ~ ಕಾರ್ಯಕ್ರಮಕ್ಕೆ ಚಾಲನೆ ನೀಡಿದೆ.ವಿಭಿನ್ನ ಸಾಮಾಜಿಕ ಹಿನ್ನೆಲೆ ಮತ್ತು ವಯೋಮಾನದ ಮಹಿಳೆಯರಿಗೆ ಭಾಷೆ, ಐ.ಟಿ ಮತ್ತಿತರ ವಿಷಯಗಳಲ್ಲಿ ಪರಿಣತಿ ಸಾಧಿಸುವ ತರಬೇತಿಯನ್ನು  ಈ ಯೋಜನೆಯಡಿ ನೀಡಲಾಗುತ್ತಿದೆ. ಅನಕ್ಷರಸ್ಥ ಮತ್ತು ಸುಶಿಕ್ಷಿತ ವನಿತೆಯರು ವಿವಿಧ ಬಗೆಯ ಉದ್ಯೋಗಗಳಲ್ಲಿ ತೊಡಗಲು ಮತ್ತು ಸ್ವಾವಲಂಬಿಯಾಗಲು ಈ ತರಬೇತಿ ನೆರವಾಗುತ್ತದೆ ಎಂದು `ಡಿಎಸ್‌ಐ~ನ ಹಿರಿಯ ಕಾರ್ಯ ನಿರ್ವಾಹಕ ಉಪಾಧ್ಯಕ್ಷ ಆರ್. ಜನಾರ್ದನ್, ಮಂಗಳವಾರ ಇಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.ತರಬೇತಿ ಪಠ್ಯಕ್ರಮದಲ್ಲಿ ಇಂಗ್ಲಿಷ್ ಭಾಷೆ, ಮಾಹಿತಿ ತಂತ್ರಜ್ಞಾನದ ಜತೆಗೆ ಆರೋಗ್ಯ ರಕ್ಷಣೆ, ಪ್ರಥಮ ಚಿಕಿತ್ಸೆ, ತುರ್ತು ಪರಿಸ್ಥಿತಿ ನಿರ್ವಹಣೆ, ಚರ್ಮ ಸಂರಕ್ಷಣೆ, ಹೆರಿಗೆ, ಯೋಗ ಮತ್ತಿತರ ವಿಷಯಗಳಲ್ಲಿಯೂ  ವಿಷಯ ಪರಿಣತರಿಂದ ತರಬೇತಿ ನೀಡಲಾಗುವುದು.ಮೂರು ತಿಂಗಳ ತರಬೇತಿ ಅವಧಿಯಲ್ಲಿ  ಸೋಮವಾರದಿಂದ ಶುಕ್ರವಾರದವರೆಗೆ ಮೂರು ಗಂಟೆ ಕಾಲ ತರಗತಿಗಳು ನಡೆಯುತ್ತವೆ.  ಕೈಗಾರಿಕೆಗಳೂ ಸೇರಿದಂತೆ ವಿವಿಧ ವಲಯಗಳಲ್ಲಿನ ಕುಶಲಕರ್ಮಿಗಳ ಅಗತ್ಯ ಪೂರೈಸುವುದೂ ಈ ತರಬೇತಿಯ ಮುಖ್ಯ ಉದ್ದೇಶವಾಗಿದೆ. ಮಾಹಿತಿಗೆ ದೂರವಾಣಿ ಸಂಖ್ಯೆ 2666 2226/0789 ಅಥವಾ ಇಂಟರ್‌ನೆಟ್ ತಾಣ www.dayanandasagar.edu  ಕ್ಕೆ  ಭೇಟಿ ನೀಡಬಹುದು.

ಪ್ರತಿಕ್ರಿಯಿಸಿ (+)