ಶುಕ್ರವಾರ, ಜೂನ್ 25, 2021
22 °C

ಮಹಿಳಾ ಪದವಿ ಪ್ರದಾನ ಸಮಾರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಹಿಳಾ ದಿನಾಚರಣೆ ಅಂಗವಾಗಿ ದಯಾನಂದ ಸಾಗರ್‌ ಶಿಕ್ಷಣ ಸಂಸ್ಥೆ ಹಾಗೂ ದೊಡ್ಡಬಳ್ಳಾಪುರದ ಲಯನ್ಸ್‌ ಕ್ಲಬ್‌ ಜತೆಗೂಡಿ ಶಿಕ್ಷಣದಿಂದ ವಂಚಿತರಾದ ಮಹಿಳೆಯರಿಗಾಗಿ ಪದವಿ ಪ್ರದಾನ ಸಮಾರಂಭ ಆಯೋಜಿಸಿದ್ದವು.ಮದುವೆಯ ನಂತರ ಸಂಸಾರದ ಹೊರೆಯಿಂದಾಗಿ ಶಿಕ್ಷಣವನ್ನು ಅರ್ಧಕ್ಕೆ ಕೈಬಿಟ್ಟ ಮಹಿಳೆಯರಿಗಾಗಿ ಇಂಗ್ಲಿಷ್‌, ಕಂಪ್ಯೂಟರ್‌ ಹಾಗೂ ಜೀವನ ಕೌಶಲ ಜ್ಞಾನ ಕುರಿತು ಕಲಿಯುವ ಅವಕಾಶವನ್ನು ಈ ಸಂಸ್ಥೆ ನೀಡಿತ್ತು. 25 ಮಹಿಳೆಯರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಇವರಲ್ಲಿ 21 ಮಹಿಳೆಯರು ಯಶಸ್ವಿಯಾಗಿ ಈ ಕಾರ್ಯಕ್ರಮವನ್ನು ಪೂರ್ಣಗೊಳಿಸಿ ಪ್ರಮಾಣ ಪತ್ರ ಪಡೆದರು.‘ನಾನು ದೊಡ್ಡಬಳ್ಳಾಪುರದ ಪುಟ್ಟ ಗ್ರಾಮದಲ್ಲಿ ನನ್ನ ಪ್ರಾಥಮಿಕ ಶಿಕ್ಷಣ ಪಡೆದಿದ್ದೆ. ನನ್ನ ಪತಿ ರೇಷ್ಮೆ ಕೆಲಸ ಮಾಡುತ್ತಾರೆ. ಇಬ್ಬರು ಮಕ್ಕಳು. ಅವರ ಶೈಕ್ಷಣಿಕ ನೆರವಿಗೆ ನಾನಾಗುತ್ತಿಲ್ಲವಲ್ಲ ಎಂಬ ಕೊರಗು ನನಗಿತ್ತು. ಆದರೆ ಇಲ್ಲಿಗೆ ಬಂದ ಮೇಲೆ ನನ್ನಲ್ಲಿ ಆತ್ಮವಿಶ್ವಾಸ ಹೆಚ್ಚಾಗಿದೆ. ನನ್ನ ಮಕ್ಕಳ ಓದಿನಲ್ಲಿ ನೆರವಾಗುತ್ತಿದ್ದೇನೆ, ಜತೆಗೆ ಪತಿಯ ಕೆಲಸದಲ್ಲೂ’ ಎಂದೆನ್ನುತ್ತಾರೆ ಪೂಜಾ.ಕಾರ್ಯಕ್ರಮಕ್ಕೆ ದೊಡ್ಡಬಳ್ಳಾಪುರದ ಲನ್ಸ್‌ ದತ್ತಿ ಟ್ರಸ್ಟ್‌ ಕೆ.ಎಂ. ಹನುಮಂತರಾಯಪ್ಪ, ಎಲ್‌.ಎಂ. ಕೃಷ್ಣಮೂರ್ತಿ, ದಯಾನಂದ ಸಾಗರ್‌ ಸಂಸ್ಥೆಯ ಆರ್‌.ಜನಾರ್ದನ್‌ ಸಾಕ್ಷಿಯಾದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.