ಸೋಮವಾರ, ಮೇ 10, 2021
25 °C

ಮಹಿಳಾ ಪೈಪ್ ಬ್ಯಾಂಡ್: ಸಿಆರ್‌ಪಿಎಫ್ ಹೆಗ್ಗಳಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಮಹಿಳಾ ಅರೆಸೇನಾ ತುಕಡಿ ರಚಿಸಿ 25 ವರ್ಷಗಳ ಹಿಂದೆ ಇತಿಹಾಸ ನಿರ್ಮಿಸಿದ್ದ ಕೇಂದ್ರ ಮೀಸಲು ಪೊಲೀಸ್ ಪಡೆ ಇದೀಗ ಮಹಿಳೆಯರೇ ಇರುವ `ಪೈಪ್ ಬ್ಯಾಂಡ್~ ರಚಿಸಿ ಮತ್ತೊಂದು ಮೈಲಿಗಲ್ಲಿಗೆ ಕಾರಣವಾಗಿದೆ.ದೇಶದ ಮೂರು ಮಹಿಳಾ ಅರೆಸೇನಾ ತುಕಡಿಯಿಂದ ಆಯ್ಕೆ ಮಾಡಲಾದ ಅತ್ಯುತ್ತಮ 22 ಮಹಿಳೆಯರು ಈ ತಂಡದಲ್ಲಿದ್ದು ಇದು ಜಗತ್ತಿನ ಮೊದಲ ಮಹಿಳಾ ಅರೆಸೇನಾ ಬ್ಯಾಂಡ್ ಆಗಿದೆ ಎಂದು ಸಿಆರ್‌ಪಿಎಫ್‌ನ ಉಪ ಪೊಲೀಸ್ ಮಹಾನಿರೀಕ್ಷಕಿ ನೀತು ಭಟ್ಟಾಚಾರ್ಯ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.ಇದೇ ಏಪ್ರಿಲ್ ಒಂಬತ್ತರಂದು ನಡೆಯಲಿರುವ `ಶೌರ್ಯ ದಿನ~ದಂದು ರಾಜ್ಯ ಗೃಹ ಸಚಿವ ಜಿತೇಂದ್ರ ಸಿಂಗ್ ಈ ಬ್ಯಾಂಡ್ ಸದಸ್ಯರನ್ನು ಸನ್ಮಾನಿಸಲಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.