ಸೋಮವಾರ, ಮೇ 10, 2021
20 °C

ಮಹಿಳಾ ಪೊಲೀಸ್ ಕಾನ್‌ಸ್ಟೆಬಲ್ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸಂಪ್‌ನಲ್ಲಿ ನೀರು ತುಂಬಿಕೊಳ್ಳುತ್ತಿದ್ದ ವೇಳೆ ಪಂಪ್‌ನಿಂದ ಆಕಸ್ಮಿಕವಾಗಿ ವಿದ್ಯುತ್ ಪ್ರವಹಿಸಿ ಮಹಿಳಾ ಪೊಲೀಸ್ ಕಾನ್‌ಸ್ಟೆಬಲ್ ಸಾವನ್ನಪ್ಪಿರುವ ಘಟನೆ ಕಾಮಾಕ್ಷಿಪಾಳ್ಯ ಸಮೀಪದ ಶಾರದಾ ಕಾಲೊನಿಯಲ್ಲಿ ಶುಕ್ರವಾರ ರಾತ್ರಿ ನಡೆದಿದೆ.ಬಸವೇಶ್ವರನಗರ ಠಾಣೆಯ ಕಾನ್‌ಸ್ಟೆಬಲ್ ಚಂದ್ರಕಲಾ (28) ಮೃತಪಟ್ಟವರು. ಮೂಲತಃ ಕೋಲಾರ ಜಿಲ್ಲೆಯ ಅವರು 2008ರಲ್ಲಿ ಸೇವೆಗೆ ಸೇರಿದ್ದರು.ಠಾಣೆಯಿಂದ ರಾತ್ರಿ ಮನೆಗೆ ಬಂದ ಚಂದ್ರಕಲಾ, ನೆಲ ಅಂತಸ್ತಿನ ಮೆಟ್ಟಿಲುಗಳ ಬಳಿ ಇರುವ ಸಂಪ್‌ನಲ್ಲಿ ನೀರು ತುಂಬಿಕೊಳ್ಳುತ್ತಿದ್ದಾಗ ಈ ದುರ್ಘಟನೆ ನಡೆದಿದೆ. ಆ ಸಂಪ್‌ಗೆ ವಿದ್ಯುತ್ ಚಾಲಿತ ಪಂಪ್ ಅಳವಡಿಸಿದ್ದು, ಘಟನೆ ವೇಳೆ ಅದು ಚಾಲನೆಯಲ್ಲಿತ್ತು. ಆ ಸಂದರ್ಭದಲ್ಲೇ ಚಂದ್ರಕಲಾ ಅವರು ಸಂಪ್‌ನಿಂದ ನೀರು ತುಂಬಿಕೊಳ್ಳಲು ಹೋದಾಗ ವಿದ್ಯುತ್ ಪ್ರವಹಿಸಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.