ಮಹಿಳಾ ಬ್ಯಾಂಕ್ ಸ್ಥಾಪನೆ

7

ಮಹಿಳಾ ಬ್ಯಾಂಕ್ ಸ್ಥಾಪನೆ

Published:
Updated:

ಶಿವಮೊಗ್ಗ: ಎಲ್ಲಾ ಜಿಲ್ಲೆಗಳಲ್ಲಿ ಮಹಿಳೆಯರ ನೇತೃತ್ವದಲ್ಲಿ ಮಹಿಳಾ ಬ್ಯಾಂಕ್‌ಗಳನ್ನು ಆರಂಭಿಸುವ ಉದ್ದೇಶವಿದೆ ಎಂದು ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ  ಸರೋಜಿನಿ ಭಾರದ್ವಾಜ್ ತಿಳಿಸಿದರು.ಮಹಿಳಾ ಬ್ಯಾಂಕ್ ಸ್ಥಾಪನೆಗೆ ಸೇವಾ ಮನೋಭಾವನೆಯುಳ್ಳ ಸ್ವಯಂಸೇವಾ ಪ್ರತಿನಿಧಿಗಳು ಹಾಗೂ ಮಠಾಧೀಶರ ಸಹಕಾರ ಪಡೆಯಲಾಗುವುದು ಎಂದು ಅವರು ಗುರುವಾರ ತಿಳಿಸಿದರು.ಬೀಡಿ ಕಾರ್ಮಿಕರಿಗೆ ಅನುಕೂಲ ಆಗುವಂತೆ `ಜೀವನಸಾಥಿ~ ಎಂಬ ವಿನೂತನ ಯೋಜನೆಯೊಂದನ್ನು ಗದಗ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಆರಂಭಿಸಲಾಗಿದೆ. ಈ ಯೋಜನೆಯಡಿಯಲ್ಲಿ ಶೇ. 1ರ ಬಡ್ಡಿ ದರದಲ್ಲಿ ್ಙ 1ರಿಂದ 5 ಸಾವಿರ ವರೆಗೆ ಸಾಲ- ಸೌಲಭ್ಯ ಕಲ್ಪಿಸಲಾಗುವುದು ಎಂದರು.ಕಿರುಸಾಲ ಯೋಜನೆ, ಉದ್ಯೋಗಿನಿ ಯೋಜನೆ, ಸ್ವಸಹಾಯ ಸಂಘಗಳ ಮೂಲಕ ಸ್ವಯಂ ಉದ್ಯೋಗಕ್ಕೆ ಉತ್ತೇಜಿಸಲಾಗಿದೆ. ಅಲ್ಲದೇ, ನಿಗಮದ ವ್ಯಾಪ್ತಿಯಲ್ಲಿ ಬರುವ ಮಹಿಳೆಯರಿಗೆ ಆದಾಯೋತ್ಪನ್ನ ಚಟುವಟಿಕೆಗಳ ಬಗ್ಗೆ ಮಾರ್ಗದರ್ಶನ ಹಾಗೂ ತಾಂತ್ರಿಕ ಸಲಹೆಯ ಜತೆಗೆ ಮಹಿಳೆಯರು ಉತ್ಪಾದಿಸಿದ ಆಹಾರೋತ್ಪನ್ನಗಳಿಗೆ ಮಾರುಕಟ್ಟೆ ಸೌಲಭ್ಯ ಒದಗಿಸಲು ಹಲವು ಸಂಸ್ಥೆಗಳೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.ರಾಜ್ಯ ಸಂಪನ್ಮೂಲ ಕೇಂದ್ರದಿಂದ 30 ಜಿಲ್ಲೆಗಳಲ್ಲಿ ಕೌನ್ಸಿಲರ್‌ಗಳನ್ನು ನೇಮಿಸಲಾಗಿದೆ ಎಂದು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry