ಬುಧವಾರ, ಏಪ್ರಿಲ್ 14, 2021
31 °C

ಮಹಿಳಾ ವಿ.ವಿ.ಯಿಂದ 25 ಕೋಟಿ ರೂ. ಪ್ರಸ್ತಾವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಜಾಪುರ: ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಸರ್ಕಾರಕ್ಕಿಂತ ಖಾಸಗಿ ಸಹಭಾಗಿತ್ವವೇ ದೊಡ್ಡದು. ಉಳಿದ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕ ಉನ್ನತ ಶಿಕ್ಷಣದಲ್ಲಿ ಸಾಧಿಸಬೇಕಾದದ್ದು ಬಹಳಷ್ಟಿದೆ. ಆದ್ದರಿಂದ ಖಾಸಗಿ ಸಹಭಾಗಿತ್ವವಿಲ್ಲದೆ ವಿದ್ಯಾರ್ಥಿಗಳ ಆಶೋತ್ತರಗಳನ್ನು ಈಡೇರಿಸಲು ಸಾಧ್ಯವಿಲ್ಲ ಎಂದು ಉನ್ನತ ಶಿಕ್ಷಣ ಸಚಿವ ಸಿ.ಟಿ. ರವಿ ಹೇಳಿದರು.ಇಲ್ಲಿಯ ಮಹಿಳಾ ವಿಶ್ವವಿದ್ಯಾಲಯಕ್ಕೆ ಭಾನುವಾರ ಭೇಟಿ ನೀಡಿ, ಪ್ರಗತಿ ಪರಿಶೀಲನೆ ನಡೆಸಿದ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.ವಿಶ್ವವಿದ್ಯಾಲಯಗಳನ್ನು ಇನ್ನಷ್ಟು ಸಮರ್ಥಗೊಳಿಸುವ ಅನಿವಾರ್ಯತೆ ಇದೆ. ಉನ್ನತ ಶಿಕ್ಷಣ ಇಲಾಖೆ ವ್ಯಾಪ್ತಿಗೆ 17 ವಿಶ್ವವಿದ್ಯಾಲಯಗಳು ಒಳಪಡುತ್ತವೆ. ಇವುಗಳಿಗೆ 40 ದಿನಗಳ ಒಳಗೆ ಭೇಟಿ ನೀಡಿ, ಅವಶ್ಯಕತೆಗಳಿಗೆ ಯೋಜನೆ ರೂಪಿಸಿ, ಶಕ್ತಿಶಾಲಿಯನ್ನಾಗಿ ಮಾಡುವ ಚಿಂತನೆ ಸರ್ಕಾರಕ್ಕಿದೆ ಎಂದರು.ಮಹಿಳಾ ವಿಶ್ವವಿದ್ಯಾಲಯವು ದಶಕದ ಸಂಭ್ರಮದಲ್ಲಿದೆ. ಇಲ್ಲಿನ ತಾಂತ್ರಿಕ ಸಮಸ್ಯೆ ನಿವಾರಿಸಿ, ಸುಭದ್ರ ಗೊಳಿಸಿದ ನಂತರ ಇತರ ವಿವಿಗಳಿಗೆ ಮನ್ನಣೆ ನೀಡಲಾಗುವುದು. ವಿವಿಯ ಕುಲಪತಿಯವರು 25 ಕೋಟಿ ರೂ.ಗಳ ಪ್ರಸ್ತಾವನೆ ಸಲ್ಲಿಸಿದ್ದಾರೆ. ಮುಖ್ಯಮಂತ್ರಿ ಜೊತೆಗೆ ಈ ಕುರಿತು ಚರ್ಚಿಸಿ, ಶೀಘ್ರ ಅನುದಾನ ಬಿಡುಗಡೆಗೆ ಆದ್ಯತೆ ನೀಡಲಾಗುವುದು.ವಿಶ್ವವಿದ್ಯಾಲಯಗಳನ್ನು ತಾಂತ್ರಿಕವಾಗಿ ಅಪ್‌ಡೇಟ್ ಮಾಡಬೇಕಾದ ಅವಶ್ಯಕತೆ ಇದೆ. ಕೌಶಲ್ಯಾಧಾರಿತ ಶಿಕ್ಷಣ ಆತ್ಮವಿಶ್ವಾಸ ಹಾಗೂ ಸ್ವಾವಲಂಬನೆಗೆ ದಾರಿ ಮಾಡಿಕೊಡಬೇಕು. ಸಾಮಾಜಿಕ ಹೊಣೆಗಾರಿಕೆಯಿಂದ ಬೆಳೆಸುವ ಶಿಕ್ಷಣ ನೀಡಬೇಕು. ಆ ನಿಟ್ಟಿನಲ್ಲಿ ಶಿಕ್ಷಣ ವ್ಯವಸ್ಥೆಯನ್ನು ಬೆಳೆಸುವ ಅವಶ್ಯಕತೆ ಇದೆ. ಇದಕ್ಕಾಗಿ ಶಿಕ್ಷಣ ತಜ್ಞರ ಜೊತೆ ಸಮಾಲೋಚನೆ ನಡೆಸಿ,  ಕ್ರಮ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದರು.ರಾಜ್ಯದಲ್ಲಿ 195 ಇಂಜಿನಿಯರಿಂಗ್ ಕಾಲೇಜುಗಳಿವೆ. ಅದರಲ್ಲಿ ಸರ್ಕಾರಿ ಕಾಲೇಜುಗಳು ಕೆವಲ 11 ಮಾತ್ರ. ಆದ್ದರಿಂದ ಉಳ್ಳವರು ಕಾಲೇಜುಗಳನ್ನು ತೆಗೆಯುವ ಮೂಲಕ  ತಮ್ಮ ಪ್ರತಿಷ್ಠೆಯನ್ನು ತೋರಿಸುವಂತಾ ಬೇಕು ಎಂದು ಸಲಹೆ ನೀಡಿದರು.ರಾಜಸ್ಥಾನದಲ್ಲಿ 33, ಉತ್ತರ ಪ್ರದೇಶದಲ್ಲಿ 17, ಹಿಮಾಚಲ ಪ್ರದೇಶದಲ್ಲಿ 15, ಗುಜರಾತ್‌ನಲ್ಲಿ 13, ಮಧ್ಯಪ್ರದೇಶ ಹಾಗೂ ಹರಿಯಾಣದಲ್ಲಿ ತಲಾ 9 ಖಾಸಗಿ ವಿಶ್ವವಿದ್ಯಾಲಯಗಳಿವೆ. ಆದರೆ ಕರ್ನಾಟಕದಲ್ಲಿ ಮಾತ್ರ ಕೇವಲ 2 ಖಾಸಗಿ ವಿಶ್ವವಿದ್ಯಾಲಯಗಳಿವೆ. ಇಲ್ಲಿ ಇನ್ನಷ್ಟು ಖಾಸಗಿ ವಿಶ್ವವಿದ್ಯಾಲಯಗಳ ಅವಶ್ಯಕತೆಯಿದೆ ಎಂದರು.ರಾಜ್ಯದಲ್ಲಿನ ಒಟ್ಟು 360 ಸರ್ಕಾರಿ ಕಾಲೇಜುಗಳಿಗೆ ಮೂಲಭೂತ ಸೌಕರ್ಯ ಒದಗಿಸಲು ಮೊದಲ ಆದ್ಯತೆ ನಿಡಲಾಗುವುದು.ಪತ್ರಿಕಾಗೋಷ್ಠಿಯಲ್ಲಿ  ಶಾಸಕ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಇಂಡಿ ಶಾಸಕ ಡಾ.ಸಾರ್ವಭೌಮ ಬಗಲಿ, ಕುಲಸಚಿವ ಜಿ.ಆರ್. ನಾಯಕ, ಮೌಲ್ಯಮಾಪನ ಕುಲಸಚಿವೆ ತೇಜಾವತಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.