ಮಹಿಳಾ ವಿಶ್ವಕಪ್: ಪಾಕ್ ಎದುರು ಭಾರತಕ್ಕೆ ಸೋಲು

7

ಮಹಿಳಾ ವಿಶ್ವಕಪ್: ಪಾಕ್ ಎದುರು ಭಾರತಕ್ಕೆ ಸೋಲು

Published:
Updated:

ಗಾಲ್ (ಪಿಟಿಐ): ಪುರುಷರ ತಂಡದವರು ಪಾಕಿಸ್ತಾನವನ್ನು ಬಗ್ಗುಬಡಿದ ಸಂಭ್ರಮದಲ್ಲಿದ್ದರೆ, ಇತ್ತ ಭಾರತ ಮಹಿಳೆಯರು ಸಾಂಪ್ರದಾಯಿಕ ಎದುರಾಳಿಗೆ ಶರಣಾಗಿದ್ದಾರೆ.ಟ್ವೆಂಟಿ-20 ಮಹಿಳೆಯರ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಸೋಮವಾರದ ಪಂದ್ಯದಲ್ಲಿ ಭಾರತ ತಂಡದವರು ಕೇವಲ ಒಂದು ರನ್‌ನಿಂದ ಸೋಲು ಕಂಡು ನಿರಾಸೆ ಅನುಭವಿಸಿದರು.ಪಾಕ್ ತಂಡದ 98 ರನ್‌ಗಳಿಗೆ ಉತ್ತರವಾಗಿ ಭಾರತ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು ಕೇವಲ 97 ರನ್ ಗಳಿಸಿತು. ಜೂಲನ್ ಗೋಸ್ವಾಮಿ ಅವರ ಆಲ್‌ರೌಂಡ್ ಆಟ ಗೆಲುವಿನ ಭರವಸೆ ಮೂಡಿಸಿತ್ತಾದರೂ ಉಳಿದವರು ಸಂಪೂರ್ಣ ವಿಫಲರಾದರು.ಇದರೊಂದಿಗೆ `ಎ~ ಗುಂಪಿನಲ್ಲಿ ಆಡಿದ ಇದುವರೆಗಿನ ಎಲ್ಲಾ ಪಂದ್ಯಗಳಲ್ಲಿ ಭಾರತ ತಂಡದವರು ಸೋಲು ಕಂಡರು. ಈ ತಂಡದರು ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಬುಧವಾರ ಆತಿಥೇಯ ಶ್ರೀಲಂಕಾ ತಂಡವನ್ನು ಎದುರಿಸಲಿದ್ದಾರೆ.ಭಾರತ ಎದುರಿನ ಈ ಪಂದ್ಯದಲ್ಲಿ ಗೆದ್ದರೂ ಪಾಕ್ ಕೂಡ ಸೆಮಿಫೈನಲ್‌ಗೆ ಪ್ರವೇಶ ಪಡೆಯುವಲ್ಲಿ ವಿಫಲವಾಯಿತು. ಈ ಗುಂಪಿನಲ್ಲಿ ಅವರು ಮೂರನೇ ಸ್ಥಾನ ಪಡೆದರು.ಸಂಕ್ಷಿಪ್ತ ಸ್ಕೋರ್: ಪಾಕಿಸ್ತಾನ: 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 98 (ಸನಾ ಮಿರ್ 26; ಜೂಲನ್ ಗೋಸ್ವಾಮಿ 16ಕ್ಕೆ2); ಭಾರತ: 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 97 (ಜೂಲನ್ ಗೋಸ್ವಾಮಿ 21; ನಿದಾ ದಾರ್ 12ಕ್ಕೆ3): ಫಲಿತಾಂಶ: ಪಾಕಿಸ್ತಾನಕ್ಕೆ 1 ರನ್‌ನ ಜಯ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry