ಮಹಿಳಾ ವಿಶ್ವಕಪ್: ಭಾರತ ತಂಡಕ್ಕೆ ಮಿಥಾಲಿ ಸಾರಥ್ಯ

ಭಾನುವಾರ, ಮೇ 26, 2019
33 °C

ಮಹಿಳಾ ವಿಶ್ವಕಪ್: ಭಾರತ ತಂಡಕ್ಕೆ ಮಿಥಾಲಿ ಸಾರಥ್ಯ

Published:
Updated:

ನವದೆಹಲಿ (ಪಿಟಿಐ): ಮಿಥಾಲಿ ರಾಜ್ ಅವರು ಸೆಪ್ಟೆಂಬರ್ 26ರಿಂದ ಅಕ್ಟೋಬರ್ 7ರವರೆಗೆ ಶ್ರೀಲಂಕಾದಲ್ಲಿ ನಡೆಯಲಿರುವ ಮಹಿಳೆಯರ ಟ್ವೆಂಟಿ-20 ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ.ಭಾರತ ತಂಡ ಈ ಟೂರ್ನಿಯಲ್ಲಿ `ಎ~ ಗುಂಪಿನಲ್ಲಿ ಸ್ಥಾನ ಪಡೆದಿದೆ. ಇದರಲ್ಲಿ ಇಂಗ್ಲೆಂಡ್, ಆಸ್ಟ್ರೇಲಿಯಾ ಹಾಗೂ ಪಾಕಿಸ್ತಾನ ತಂಡಗಳಿವೆ. ತನ್ನ ಮೊದಲ ಪಂದ್ಯದಲ್ಲಿ ಸೆ.27ರಂದು ಕಾಂಗರೂ ಪಡೆಯನ್ನು ಎದುರಿಸಲಿದೆ.ತಂಡ ಇಂತಿದೆ: ಮಿಥಾಲಿ ರಾಜ್ (ನಾಯಕಿ), ಹರ್ಮನ್‌ಪ್ರೀತ್ ಕೌರ್ (ಉಪನಾಯಕಿ), ಸುಲಕ್ಷಣಾ ನಾಯ್ಕ, ಜೂಲನ್ ಗೋಸ್ವಾಮಿ, ಪೂನಮ್ ರಾವುತ್, ಗೌಹಾರ್ ಸುಲ್ತಾನಾ, ಎಕ್ತಾ ಬಿಸ್ತ್, ಅರ್ಚನಾ ದಾಸ್, ಎನ್.ನಿರಂಜನಾ, ಮೋನಾ ಮೇಶ್ರಾಮ್, ಶುಭಲಕ್ಷ್ಮಿ ಶರ್ಮ, ಅನುಜಾ ಪಾಟೀಲ್, ರೋಷನಾರಾ ಪರ್ವೀನ್ ಹಾಗೂ ಅಮಿತ್ ಶರ್ಮ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry