ಶುಕ್ರವಾರ, ಮೇ 20, 2022
26 °C

ಮಹಿಳಾ ಶೋಷಣೆಗೆ ಕಡಿವಾಣ ಅಗತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಡಗೋಡ: ಮಹಿಳೆಯರ ಮೇಲೆ ನಡೆಯುತ್ತಿರುವ ನಿರಂತರ ಶೋಷಣೆಗಳಿಗೆ ಕಡಿವಾಣ ಹಾಕಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ತಾ.ಪಂ. ಅಧ್ಯಕ್ಷೆ ಲಕ್ಷ್ಮೀಬಾಯಿ ಕೊರವರ ಹೇಳಿದರು.ಇಲ್ಲಿಯ ವಿವೇಕಾನಂದ ರಂಗಮಂದಿರದಲ್ಲಿ ಜನಸ್ಫೂರ್ತಿ ಟ್ರಸ್ಟ್, ಲೊಯೋಲ ವಿಕಾಸ ಕೇಂದ್ರ, ಜ್ಯೋತಿ ಕಾನ್ವೆಂಟ್ ಹಾಗೂ ಪ್ರೇಮ ಸಾಗರ ಪ್ರೊಜೆಕ್ಟ್ ಆಶ್ರಯದಲ್ಲಿ ನಡೆದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮಹಿಳೆಯರಲ್ಲಿ ಜಾಗೃತಿ ಮೂಡಿಸಬೇಕಾದ ಅವಶ್ಯಕತೆಯಿದ್ದು ಮಹಿಳಾ ಸಬಲಿಕರಣಕ್ಕೆ ಒತ್ತು ನೀಡಬೇಕಾಗಿದೆ. ಸರ್ಕಾರದ ವಿವಿಧ ಯೋಜನೆಗಳನ್ನು ಮಹಿಳೆಯರು ಸಮರ್ಪಕವಾಗಿ ಬಳಕೆ ಮಾಡಿಕೊಂಡು ಆರ್ಥಿಕವಾಗಿ ಸದೃಢವಾಗಬೇಕೆಂದರು.ಕೋಲಾರ ಗ್ರಾಮೀಣ ಮಹಿಳಾ ಒಕ್ಕೂಟದ ಕಾಳಮ್ಮ ಉಪನ್ಯಾಸ ನೀಡಿ ಸಮಾಜದಲ್ಲಿ ಪುರುಷರಷ್ಟೇ ಮಹಿಳೆಯರು ಸಮಾನರಾಗಿದ್ದು ಮಹಿಳೆಯರು ದೌರ್ಜನ್ಯಕ್ಕೆ ಒಳಗಾದಾಗ ಎಲ್ಲ ಮಹಿಳೆಯರು ಒಗ್ಗಟ್ಟಾಗಿ ಆ ಮಹಿಳೆಗೆ ನ್ಯಾಯ ಕೊಡಿಸುವಲ್ಲಿ ಪ್ರಮುಖ ಪಾತ್ರವಹಿಸಬೇಕು ಎಂದರು.   ಸಿ.ದುಲ್ಸಿನ್ ಕ್ರಾಸ್ತಾ, ಬಾನುಬಿ ಶೇಖ, ಎಸ್.ಬಿ.ಎಂ.ನ ವ್ಯವಸ್ಥಾಪಕಿ ಕೆ.ಜಿ. ಪ್ರಪುಲ್ಲಾ, ಯಾನಿ ಶಾಮಸನ್, ಶ್ರಿದೇವಿ ಕುಂಟೋಜಿ, ಅನಿತಾ ರಮೇಶ ಮಾತನಾಡಿದರು. ಲೊಯೋಲ ವಿಕಾಸ ಕೇಂದ್ರದ ಫಾ.ಅರುಣ ಲೂಯಿಸ್ ಪ್ರಾಸ್ತಾವಿಕ ಮಾತನಾಡಿದರು.ಸುಶೀಲಾ ಪೂಜಾರಿ ನಿರೂಪಿಸಿದರು. ತುಂಗಾ ನಾಯ್ಕ ಸ್ವಾಗತಿಸಿದರು. ಹೊನ್ನಮ್ಮ ಸದೆಯನ್ನವರ ವಂದಿಸಿದರು.ಬೀಳ್ಕೊಡುಗೆ

ಶಿರಸಿ: ಕೆಡಿಸಿಸಿ ಬ್ಯಾಂಕ್‌ನಲ್ಲಿ ವಿಭಾಗಾಧಿಕಾರಿಯಾಗಿ ನಿವೃತ್ತಿಯಾದ ಎ.ಆರ್.ಗೌಡರ್ ಮತ್ತು ಹಿರಿಯ ವ್ಯವಸ್ಥಾಪಕರಾಗಿ ನಿವೃತ್ತಿ ಹೊಂದಿದ ಎಸ್.ಡಿ. ಶಾಸ್ತ್ರೀ ಅವರನ್ನು ಬ್ಯಾಂಕ್‌ನ ನೌಕರರ ಸಂಘ ಇತ್ತೀಚೆಗೆ ಆತ್ಮೀಯವಾಗಿ ಸನ್ಮಾನಿಸಿ ಬೀಳ್ಕೊಟ್ಟಿತು.ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಎಸ್.ಜಿ. ಮಾವಿನಕುರ್ವೆ, ಸಹಾಯಕ ಪ್ರಧಾನ ವ್ಯವಸ್ಥಾಪಕ ಡಿ.ಎಂ.ಕುಮಟಾಕರ, ವಿಭಾಗಾಧಿಕಾರಿ ಜಿ.ಜಿ.ಹೆಗಡೆ, ವ್ಯವಸ್ಥಾಪಕ ಎಂ.ಜಿ.ಮಲ್ಮನೆ, ನಿವೃತ್ತ ಹಿರಿಯ ವ್ಯವಸ್ಥಾಪಕ ಎಸ್.ಜಿ. ದೀಕ್ಷಿತ ಮಾತನಾಡಿದರು. ಲಕ್ಷ್ಮಣ ಶಾನಭಾಗ ಸ್ವಾಗತಿಸಿ ವಂದಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.