ಮಹಿಳಾ ಸಮಾವೇಶ: ಹೋರಾಟದ ಕಹಳೆ

7

ಮಹಿಳಾ ಸಮಾವೇಶ: ಹೋರಾಟದ ಕಹಳೆ

Published:
Updated:
ಮಹಿಳಾ ಸಮಾವೇಶ: ಹೋರಾಟದ ಕಹಳೆ

ಹುಬ್ಬಳ್ಳಿ: ನಗರದಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರ ಜಿಲ್ಲಾ ಮಹಿಳಾ ಕಾಂಗ್ರೆಸ್ ಸಮಿತಿ ಹಮ್ಮಿಕೊಂಡಿದ್ದ ಬೆಳಗಾವಿ ವಿಭಾಗ ಮಟ್ಟದ ಮಹಿಳಾ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ, ಹೋರಾಟದ ಹಾದಿಯಲ್ಲಿ ನಡೆಯಲು ಮಹಿಳೆಯರಿಗೆ ಪ್ರೇರಣೆ ನೀಡಿತು.

ಸಮಾವೇಶ ಉದ್ಘಾಟನೆಯಾಗುವ ಮೊದಲೇ ಸಭಾಂಗಣ ಕಕ್ಕಿರಿದು ತುಂಬಿತ್ತು. ಬಂದವರು ಬಾಗಿಲಲ್ಲೇ ನಿಲ್ಲಬೇಕಾಯಿತು. ಕೆಲವರು ನೆಲದಲ್ಲೇ ಕುಳಿತರು. ಸಮಾವೇಶ ಮುಗಿಯುವ ವರೆಗೂ ಅಲುಗಾಡದ ಅವರಿಗೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಅಖಿಲ ಭಾರತ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅನಿತಾ ವರ್ಮಾ, ವಿಧಾನ ಪರಿಷತ್ ಸದಸ್ಯ ವೀರಣ್ಣ ಮತ್ತಿಕಟ್ಟಿ, ಮಾಜಿ ಸಚಿವ ಎಚ್.ಕೆ. ಪಾಟೀಲ ಮತ್ತಿತರರು ಹೋರಾಟದ ಹಾದಿಯನ್ನು ತೋರಿಸಿಕೊಟ್ಟರು.

ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಜನಪರ ಕಾರ್ಯಕ್ರಮಗಳನ್ನು ಜನರ ಬಳಿಗೆ ತಲುಪಿಸಬೇಕು ಎಂದು ಕರೆ ನೀಡಿದ ಅವರು, ರಾಜ್ಯದಲ್ಲಿ ಬಿಜೆಪಿ ದುರಾಡಳಿತ ನಡೆಸುತ್ತಿದ್ದು ಅದರ ವಿರುದ್ಧ ಹೋರಾಡಲು ಮುಂದಾಗಬೇಕು ಎಂದು ಸಲಹೆ ನೀಡಿದರು. ಮಹಿಳೆಯರಿಗೆ  ಶೇಕಡಾ 33ರಷ್ಟು ರಾಜಕೀಯ ಮೀಸಲಾತಿ ನೀಡುವ ಕುರಿತು ಸಮಾವೇಶದಲ್ಲಿ ಅನೇಕರು ಪ್ರಸ್ತಾಪಿಸಿದರು. ರಾಜಕೀಯ ಮೀಸಲಾತಿ ಯ ಮೂಲಕ ಮಹಿಳೆಯರ ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಸಬಲೀಕರಣ ಆಗಬೇಕು. ಸೋನಿಯಾ ಗಾಂಧಿ ಮಹಿಳೋದ್ಧಾರಕಿ. ಹೀಗಾಗಿ ಅವರ ~ಕೈ~ ಬಲಪಡಿಸಲು ಮಹಿಳೆಯರು ಮುಂದಾಗಬೇಕು ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕಿ ಮೋಟಮ್ಮ  ಮನವಿ ಮಾಡಿಕೊಂಡರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry