ಮಹಿಳಾ ಸ್ವಾವಲಂಬನೆ: ಭ್ರೂಣಹತ್ಯೆ ತಡೆ

7

ಮಹಿಳಾ ಸ್ವಾವಲಂಬನೆ: ಭ್ರೂಣಹತ್ಯೆ ತಡೆ

Published:
Updated:

ಬೆಂಗಳೂರು: `ಇತರೆ ರಾಜ್ಯಗಳಿಗೆ ಹೋಲಿಸಿದರೆ ರಾಜ್ಯದ ಕರಾವಳಿ ಜಿಲ್ಲೆಯಲ್ಲಿ ಹೆಣ್ಣುಮಕ್ಕಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗುತ್ತಿರುವುದು ಉತ್ತಮ ಬೆಳವಣಿಗೆಯಾಗಿದ್ದು, ಮಹಿಳೆಯರು ಆರ್ಥಿಕವಾಗಿ ಸದೃಢರಾಗುವ ಮೂಲಕ ಭ್ರೂಣಹತ್ಯೆಯಂತಹ ಸಮಸ್ಯೆಯನ್ನು ತೊಡೆದುಹಾಕಬಹುದು~ ಎಂದು ಮಾಜಿ ಸಚಿವೆ ರಾಣಿ ಸತೀಶ್ ಹೇಳಿದರು.ಬಿಲ್ಲವ ಅಸೋಸಿಯೇಷನ್ ಬೆಂಗಳೂರು ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಮಹಿಳಾ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.`ಉತ್ತಮ ಸಮಾಜ ನಿರ್ಮಾಣಗೊಳ್ಳಬೇಕಾದರೆ ಮಹಿಳೆಯರ ಪಾತ್ರ ಮಹತ್ವದ್ದು, ಕುಟುಂಬ ಸದಸ್ಯರ ಪ್ರತಿ ತಪ್ಪುಗಳನ್ನು ಸರಿಪಡಿಸಿ ಸೂಕ್ತ ಮಾರ್ಗದರ್ಶನ ನೀಡುವ ಜವಾಬ್ದಾರಿ ಮಹಿಳೆಯರ ಮೇಲಿರುತ್ತದೆ~ ಎಂದು ಹೇಳಿದರು.`ದೃಢ ಮನಸ್ಸು ಮತ್ತು ಪರಿಶ್ರಮ ಮಾತ್ರ ಸಾಧನೆ ಮಾಡಲು ಪ್ರೇರೇಪಿಸುತ್ತದೆ. ಗೃಹಿಣಿಯರು ಸುತ್ತಮುತ್ತಲ ಆಗುಹೋಗುಗಳನ್ನು ಸೂಕ್ಷ್ಮವಾಗಿ ಗಮನಿಸುವ ಮೂಲಕ ಹೊಸ ಸವಾಲನ್ನು ಎದುರಿಸಬಹುದು~ ಎಂದರು.ಶಾಸಕ ದಿನೇಶ್ ಗುಂಡೂರಾವ್, `ಬಿಲ್ಲವ ಸಮುದಾಯದಿಂದ ಪ್ರಾಮಾಣಿಕ ರಾಜಕಾರಣಿಗಳು ಹೊರಹೊಮ್ಮಿದ್ದಾರೆ. ಈ ಸಮುದಾಯದಲ್ಲಿ ಮಹಿಳೆಯರು ಶೈಕ್ಷಣಿಕವಾಗಿ ಮುಂದುವರಿದಿದ್ದರೂ, ಸಾರ್ವಜನಿಕ ಕ್ಷೇತ್ರದಲ್ಲಿ ಕಾಣಿಸಿಕೊಂಡಿರುವವರ ಸಂಖ್ಯೆ ವಿರಳವಾಗಿದೆ~ ಎಂದು ಹೇಳಿದರು.`ಸಮಾಜ ಸುಧಾರಕ ನಾರಾಯಣಗುರು ಅವರ ವೈಚಾರಿಕ ವಿಚಾರಗಳನ್ನು ಅಳವಡಿಸಿಕೊಳ್ಳುವ ಮೂಲಕ ಪ್ರಸ್ತುತ ಎದುರಿಸುತ್ತಿರುವ ಹಲವು ಸಾಮಾಜಿಕ ಸಮಸ್ಯೆಗಳನ್ನು ಸರಿಪಡಿಸಿಕೊಳ್ಳಬಹುದು~ ಎಂದರು.ಫವರ್ ಲಿಪ್ಟಿಂಗ್ ಚಾಂಪಿಯನ್‌ಗಳಾದ ಸುಪ್ರೀತಾ ಮತ್ತು ಅಶ್ವಿತಾ ಅವರಿಗೆ ಸನ್ಮಾನ ಮಾಡಲಾಯಿತು. `ಡೆಕ್ಕನ್ ಹೆರಾಲ್ಡ್~ ಸುದ್ದಿ ಸಂಪಾದಕರಾದ ಗಾಯಿತ್ರಿ ನಿವಾಸ್, ಸಂಘದ ಅಧ್ಯಕ್ಷ ಎಂ.ವೇದಕುಮಾರ್, ಭಾಸ್ಕರ್ ಸಿ.ಅಮೀನ್, ಭಾಸ್ಕರ ಪೂಜಾರಿ ಇತರರು ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry