ಮಂಗಳವಾರ, ಜೂನ್ 22, 2021
29 °C

ಮಹಿಳಾ ಹಕ್ಕು ಕಾರ್ಯಕರ್ತೆಗೆ ಬೆದರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇಸ್ಲಾಮಾಬಾದ್ (ಪಿಟಿಐ): ಈ ಹಿಂದೆ ತಾಲಿಬಾನ್ ಸಂಘಟನೆಯ ಪ್ರಬಲ ನೆಲೆಯಾಗಿದ್ದ ಸ್ವಾತ್ ಪ್ರದೇಶದಲ್ಲಿ ಉಗ್ರರ ವಿರುದ್ಧ ಮಾತನಾಡಿದ್ದಕ್ಕಾಗಿ ಪಾಕಿಸ್ತಾನದ ಖ್ಯಾತ ಮಹಿಳಾ ಹಕ್ಕುಗಳ ಕಾರ್ಯಕರ್ತೆ ಹಾಗೂ ಪ್ರಶಸ್ತಿ ಪುರಸ್ಕೃತೆ ಶಾದ್ ಬೇಗಂ ಅವರಿಗೆ ತಾಲಿಬಾನ್ ಸಂಘಟನೆ ಬೆದರಿಕೆ ಹಾಕಿದೆ. ಬೇಗಂ ಅವರು ಕೆಲವು ದಿನಗಳ ಹಿಂದಷ್ಟೇ ಅಂತರರಾಷ್ಟ್ರೀಯ ಶೌರ್ಯ ಪ್ರಶಸ್ತಿಗೆ ಪಾತ್ರರಾಗಿದ್ದರು.ಬೇಗಂ ಹೊರತಾಗಿ, ಪಾಕಿಸ್ತಾನದ ಮೊದಲ ರಾಷ್ಟ್ರೀಯ ಶಾಂತಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿರುವ 14 ವರ್ಷದ  ಮಲಾಲ ಯೂಸುಫ್‌ಜಾಯ್‌ಗೂ  ತೆಹ್ರಿಕ್-ಇ-ತಾಲಿಬಾನ್ ಸಂಘಟನೆ ಬೆದರಿಕೆ ಒಡ್ಡಿದೆ.ಈ ಇಬ್ಬರು ತಮ್ಮ `ಹತ್ಯೆ ಪಟ್ಟಿ~ಯಲ್ಲಿದ್ದಾರೆ ಎಂದು ತಾಲಿಬಾನ್ ವಕ್ತಾರ ಎಹ್‌ಸಾನುಲ್ಲಾ ಎಹ್‌ಸಾನ್ ಹೇಳಿದ್ದಾನೆ.

ಬೇಗಂ ಅವರು ದಿರ್ ಜಿಲ್ಲೆಯ ನಿವಾಸಿಯಾಗಿದ್ದು, ಸಾಮಾಜಿಕ ಕಾರ್ಯಕರ್ತೆಯಾಗಿ ದುಡಿಯುತ್ತಿದ್ದಾರೆ.ಯೂಸುಫ್‌ಜಾಯ್ ಸ್ವಾತ್ ಕಣಿವೆಯಲ್ಲಿ ನೆಲೆಸಿದ್ದು, ತಾಲಿಬಾನ್ ನಡೆಸುತ್ತಿರುವ ಹಿಂಸಾಚಾರವನ್ನು ತನ್ನ ಬ್ಲಾಗ್‌ನಲ್ಲಿ ವಿಸ್ತೃತವಾಗಿ ವಿವರಿಸುವ ಮೂಲಕ ಖ್ಯಾತಿ ಗಳಿಸಿದ್ದಾಳೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.