ಮಂಗಳವಾರ, ಜೂನ್ 15, 2021
25 °C

ಮಹಿಳಾ ಹಾಕಿ: ಅಸ್ಸಾಂಗೆ ಗೆಲುವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಮ್ಯಾಕ್ಸಿಮಾ ಅಲೆಕ್ಸೋ ಮತ್ತು ಫುಲವಾರಿ ಕಂದುಲಾನಾ ಅವರ ಉತ್ತಮ ಪ್ರದರ್ಶನದ ನೆರವಿನಿಂದ ಅಸ್ಸಾಂ ತಂಡವು ಇಲ್ಲಿಯ ಚಾಮುಂಡಿ ವಿಹಾರದಲ್ಲಿ ನಡೆಯುತ್ತಿರುವ 4ನೇ ರಾಷ್ಟ್ರೀಯ ಜೂನಿಯರ್ ಮಹಿಳೆಯರ ಹಾಕಿ ಟೂರ್ನಿಯ ಬಿ ಡಿವಿಷನ್‌ನಲ್ಲಿ ಜಯ ಗಳಿಸಿತು.ಶನಿವಾರ ಬೆಳಿಗ್ಗೆ ಲೀಗ್ ಹಂತದ ‘ಬಿ’ ಗುಂಪಿನಲ್ಲಿ ನಡೆದ ಪಂದ್ಯದಲ್ಲಿ ಅಸ್ಸಾಂ ತಂಡವು 7–0 (2–0)ಯಿಂದ ಜಮ್ಮು ಮತ್ತು ಕಾಶ್ಮೀರ ತಂಡದ ವಿರುದ್ಧ ಗೆದ್ದಿತು.ಇದಕ್ಕೆ ಕಾರಣವಾಗಿದ್ದು ಮ್ಯಾಕ್ಷಿಮಾ ಅಲೆಕ್ಸೊ ಮತ್ತು ಫುಲ್‌ವಾರಿ ಅವರು ಗಳಿಸಿದ ತಲಾ ಮೂರು ಗೋಲುಗಳು. ಬೆಳಿಗ್ಗೆ ನಡೆದ ಪಂದ್ಯದಲ್ಲಿ ಮ್ಯಾಕ್ಸಿಮಾ (4, 56, 59ನಿ) ಮತ್ತು ಫುಲವಾರಿ ಕಂದುಲಾನಾ (21, 64, 67ನಿ) ಭರ್ಜರಿ ಆಟದ ಮುಂದೆ ಜಮ್ಮು ಮತ್ತು ಕಾಶ್ಮೀರ ತಂಡವು ಶರಣಾಯಿತು. 69ನೇ ನಿಮಿಷದಲ್ಲಿ ಸೊರೊಪಿನಾ ಟಿಗ್ಗಾ ಕೂಡ ಒಂದು ಗೋಲು ಗಳಿಸಿ ತಂಡದ ಗಳಿಕೆಯನ್ನು ಹಿಗ್ಗಿಸಿದರು.ಗುಜರಾತ್‌ಗೆ ಗೆಲುವು: ತಾಳ್ಮೆಯ ಆಟ ಪ್ರದರ್ಶಿಸಿದ ಗುಜರಾತ್ ತಂಡವು ಬೆಳಿಗ್ಗೆ ನಡೆದ ಪಂದ್ಯದಲ್ಲಿ 4–0

(1–0)ಯಿಂದ ಪುದುಚೇರಿ ವಿರುದ್ಧ ಜಯ ಗಳಿಸಿತು.ಒಡಿಶಾಕ್ಕೆ ಗೆಲುವು: ಸಂಜೆ ನಡೆದ ಪಂದ್ಯದಲ್ಲಿ ಒಡಿಶಾ ಗಂಗಾಪುರ ತಂಡವು 4–0ಯಿಂದ ಆಂಧ್ರಪ್ರದೇಶ ತಂಡವನ್ನು ಮಣಿಸಿತು. ಒಡಿಶಾ ತಂಡದ ಜ್ಯೋತಿ ಉಂದಾಬಂಡಾ (17ನಿ, 40ನಿ) ಎರಡು ಗೋಲು ಗಳಿಸುವ ಮೂಲಕ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.