ಮಹಿಳಾ ಹಾಕಿ: ಡ್ರಾ ಪಂದ್ಯದಲ್ಲಿ ಭಾರತ

7

ಮಹಿಳಾ ಹಾಕಿ: ಡ್ರಾ ಪಂದ್ಯದಲ್ಲಿ ಭಾರತ

Published:
Updated:

ಪರ್ತ್ (ಪಿಟಿಐ): ಭಾರತದ ಮಹಿಳೆಯರ ತಂಡದವರು ಲಾನ್ಸೊ ಅಂತರರಾಷ್ಟ್ರೀಯ ಸೂಪರ್ ಹಾಕಿ ಸರಣಿಯ ಶುಕ್ರವಾರದ ಪಂದ್ಯವನ್ನು 1-1 ಗೋಲಿನಿಂದ ಆತಿಥೇಯ ಆಸ್ಟ್ರೇಲಿಯಾ ವಿರುದ್ಧ ಡ್ರಾ ಮಾಡಿಕೊಂಡರು.

ರಕ್ಷಣೆಗೆ ಒತ್ತು ನೀಡಿದ ಭಾರತದವರು ಸೋಲಿನ ಅಪಾಯದಿಂದ ತಪ್ಪಿಸಿಕೊಂಡರು. ಕಳೆದ ಶನಿವಾರ ಆಸ್ಟ್ರೇಲಿಯಾ ವಿರುದ್ಧ 5-0 ಗೋಲುಗಳ ಅಂತರದಿಂದ ಪರಾಭವಗೊಂಡಿದ್ದ ಭಾರತ ಸಾಕಷ್ಟು ಎಚ್ಚರಿಕೆ ವಹಿಸಿತು.

10ನೇ ನಿಮಿಷದಲ್ಲಿ ಆಶ್ಲೆಗ್ ನೆಲ್ಸನ್ ಶ್ರಮದಿಂದ ಆಸ್ಟ್ರೇಲಿಯಾ ಮುನ್ನಡೆ ಪಡೆಯಿತು. ಆದರೆ ಪಂದ್ಯದ ಐದು ನಿಮಿಷಗಳು ಮಾತ್ರ ಬಾಕಿ ಇದ್ದಾಗ ಭಾರತದ ಸೌಂದರ್ಯ ಯಾಂಡಾಲ್ ಅವರು ಗೋಲು ಅಂತರ ಸಮವಾಗುವಂತೆ ಮಾಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry