ಮಹಿಳಾ ಹೋರಾಟಗಾರ್ತಿಯರ ಸ್ವಾಗತ

7

ಮಹಿಳಾ ಹೋರಾಟಗಾರ್ತಿಯರ ಸ್ವಾಗತ

Published:
Updated:

ನವದೆಹಲಿ (ಐಎಎನ್‌ಎಸ್‌): ): ನಾಲ್ವರು ಅತ್ಯಾಚಾರಿಗಳಿಗೆ ಮರಣ­ದಂಡನೆ ವಿಧಿಸಿ­ರುವ ಕೋರ್ಟ್ ತೀರ್ಪು, ಇನ್ನು ಇಂತಹ ಅಪರಾಧ ತಡೆಯಲು ನೆರವಾಗುತ್ತದೆ ಎಂದು ಹಲವು ನಾಯಕಿ­ಯರು ಮತ್ತು ಮಹಿಳಾ ಹಕ್ಕು­­ಗಳ ಕಾರ್ಯ­ಕರ್ತೆ­ಯರು  ಸ್ವಾಗತಿಸಿದ್ದಾರೆ.‘ಕೋರ್ಟ್‌ನ   ತೀರ್ಪು  ಸ್ವಾಗತಾರ್ಹ. ಇದು  ಅತ್ಯಾಚಾರ  ದಂತಹ ಅಪರಾಧ­ಗಳನ್ನು ತಡೆಯಲು ನೆರವಿಗೆ ಬರುತ್ತದೆ’ ಎಂದು ಬಿಜೆಪಿ ನಾಯಕಿ ಸುಷ್ಮಾ ಸ್ವರಾಜ್‌ ತಿಳಿಸಿದ್ದಾರೆ.‘ಇದೊಂದು ಐತಿಹಾಸಿಕ ತೀರ್ಪು ಮತ್ತು ನ್ಯಾಯಾಲಯದ ಅತ್ಯುತ್ತಮ ನಿರ್ಧಾರ­ವಾಗಿದೆ. ನಾಲ್ವರು ತಪ್ಪಿ­ತಸ್ಥ­ರಿಗೂ ಮರಣ ದಂಡನೆ ವಿಧಿ­ಸುವ ಮೂಲಕ ನ್ಯಾಯಾಲಯವು ಅಂತಹ ಅಪರಾಧ­ಗಳನ್ನು ಸಹಿಸು­ವುದಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ಸಮಾಜಕ್ಕೆ ಕಳು­ಹಿಸಿದೆ’ ಎಂದು ರಾಷ್ಟ್ರೀಯ ಮಹಿಳಾ ಆಯೋ­ಗದ ಅಧ್ಯಕ್ಷೆ ಮಮತಾ ಶರ್ಮ ಅಭಿಪ್ರಾಯಪಟ್ಟದ್ದಾರೆ.‘ಪೋಷಕರು, ಶಿಕ್ಷಕರು ಹಾಗೂ ಸಮು­ದಾಯಕ್ಕೆ ಇದು ಸ್ಪಷ್ಟ ಸಂದೇಶ­ವಾಗಿದೆ. ತಮ್ಮ ಹುಡುಗರಿಗೆ ಹೇಗೆ ನಡೆದುಕೊಳ್ಳ­ಬೇಕು ಮತ್ತು ಜವಾಬ್ಬಾರಿ­ಯಿಂದ ನಡೆ­ಯದಿ­ದ್ದರೆ ಗಲ್ಲಿಗೇರುವ ಎಚ್ಚರಿಕೆಯನ್ನು ನೀಡ­­ಲು ಅನುವಾಗಿದೆ’ ಎಂದು ಮಾಜಿ ಐಪಿಎಸ್‌ ಅಧಿಕಾರಿ ಕಿರಣ್‌ ಬೇಡಿ ನುಡಿದಿದ್ದಾರೆ.‘ಮರಣದಂಡನೆ ನೊಂದ ಯುವ­ತಿಯ ಕುಟುಂಬಕ್ಕೆ ಸಮಾಧಾನ ತರು­ತ್ತದೆ. ಅಲ್ಲದೆ, ಮೃತಳಿಗೆ ನ್ಯಾಯ ದೊರಕಿ­ಸು­ತ್ತದೆ. ಈ ಕಠಿಣ ಶಿಕ್ಷೆ ಮುಂದೆ ಇಂತಹ ಹೀನ­ಕೃತ್ಯ ಪುನರಾವರ್ತನೆ­ಯಾ­ಗ­ದಂತೆ ತಡೆ­ಯುತ್ತದೆ. ಇದೊಂದು ದೊಡ್ಡ­ಧ್ವನಿಯ ಸ್ಪಷ್ಟ ತೀರ್ಪು’ ಎಂದು ಸಾಮಾ­ಜಿಕ ಸಂಶೋಧನಾ ಕೇಂದ್ರದ (ಸಿಆರ್‌ಎ) ನಿರ್ದೇಶಕಿ ರಂಜನಾ ಕುಮಾರಿ ಹೇಳಿದ್ದಾರೆ.  ಪರಿಹಾರವಲ್ಲ: ಈ ಮಧ್ಯೆ, ‘ಲೈಂಗಿಕ ಹಿಂಸಾಚಾರ ಪ್ರಕ­ರಣಗಳಿಗೆ ಮರಣದಂಡನೆ ಪರಿಹಾರ ಆಗಲಾರದು’ ಎಂದು ಇತರ ಕೆಲವು ಕಾರ್ಯ­ಕರ್ತೆಯರು ಪ್ರತಿಕ್ರಿಯಿಸಿದ್ದಾರೆ.‘ಇದೊಂದು ಅಪರೂಪದ ಪ್ರಕರಣ­ವಾದರೂ ಮರಣದಂಡನೆಯು ಪರಿ­ಹಾರ­ವಲ್ಲ ಅಥವಾ ಅಪರಾಧವನ್ನು ತಡೆಯು­ವುದಿಲ್ಲ. ನಾಲ್ವರು ಆರೋಪಿ­ಗಳಿಗೆ ಸುಧಾರಣೆಯ ಅವಕಾಶ ಕೊಡ­ಬಹುದು. ಮಹಿಳೆಯರ ವಿರುದ್ಧದ ಲೈಂಗಿಕ ಹಿಂಸಾಚಾರಕ್ಕೆ ಮೂಲ ಕಾರಣ ಏನೆಂಬುದನ್ನು ನೋಡುವ ಅವಶ್ಯಕತೆ ಇದೆ’ ಎಂದು ‘ಮಹಿಳೆಯರಿಗೆ ಮಾಹಿತಿ, ಪ್ರೇರಣೆ ಹಾಗೂ ಸಶಕ್ತಿ’ ನೀಡುವ ಸರ್ಕಾರೇತರ ‘ಜಾಗೋರಿ’­ಸಂಸ್ಥೆಯ ಪ್ರತಿನಿಧಿ ಸುನಿತಾ ಧಾರ್‌ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry