ಶುಕ್ರವಾರ, ನವೆಂಬರ್ 15, 2019
22 °C

ಮಹಿಳೆಗೆ ಸೂಕ್ತ ರಾಜಕೀಯ ಮೀಸಲು ಕಲ್ಪಿಸಲು ಆಗ್ರಹ

Published:
Updated:

ಯಳಂದೂರು: ಮಹಿಳೆಗೆ ರಾಜಕೀಯ ಕ್ಷೇತ್ರದಲ್ಲಿ ಶೇ.50ರಷ್ಟು ಮೀಸಲಾತಿ ಕಲ್ಪಿಸಬೇಕೆಂಬ ನಿಯಮವಿದ್ದರೂ ಅದರ ಪಾಲನೆಯಾಗುತ್ತಿಲ್ಲ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಲಕ್ಷ್ಮಿಮಹೇಶ್ ವಿಷಾಧಿಸಿದರು.ಪಟ್ಟಣದ ಗೌರೇಶ್ವರ ದೇಗುಲದ ಆವರಣದಲ್ಲಿ ಭಾನುವಾರ ಕರವೇ ಮಹಿಳಾ ತಾಲ್ಲೂಕು ಘಟಕ ಉದ್ಘಾಟಿಸಿ ಅವರು ಮಾತನಾಡಿದರು. ಮಹಿಳೆ ಇಂದು ಎಲ್ಲ ಕ್ಷೇತ್ರಗಳಲ್ಲೂ ಸೈ ಎನಿಸಿಕೊಂಡಿದ್ದಾಳೆ. ಆದರೆ ರಾಜಕೀಯದಲ್ಲಿ ಸೂಕ್ತ ಸ್ಥಾನ ನೀಡುವಲ್ಲಿ ಪುರುಷ ಪ್ರಧಾನ ಸಮಾಜ ಕಾಳಜಿ ವಹಿಸುತ್ತಿಲ್ಲ ಎಂದು ಅಸಾಮಾಧಾನ ವ್ಯಕ್ತಪಡಿಸಿದರು.ಇದೇ ಸಂದರ್ಭದಲ್ಲಿ ಯಳಂದೂರು ತಾಲ್ಲೂಕು ಕರವೇ ಮಹಿಳಾ ಘಟಕದ ಅಧ್ಯಕ್ಷೆಯಾಗಿ ವಿಜಯಲಕ್ಷ್ಮಿ, ಉಪಾಧ್ಯಕ್ಷೆಯಾಗಿ ದೇವಕಿ, ಗೌರವಾಧ್ಯಕ್ಷರಾಗಿ ಪದ್ಮ, ಅಂಬಿಕಾ ಕಾರ್ಯದರ್ಶಿಯಾಗಿ ನಿರ್ಮಲಾ, ಪ್ರೇಮ ಅವರನ್ನು ಆಯ್ಕೆ ಮಾಡಲಾಯಿತು.ಜಿಲ್ಲಾ ಕರವೇ ಕಾರ್ಯದರ್ಶಿ ವೈ.ಎನ್. ಸುಶೀಲ, ಗುಂಡ್ಲುಪೇಟೆ ಮಹಿಳಾ ಘಟಕದ ಅಧ್ಯಕ್ಷೆ ಗಂಗಮ್ಮ, ಗೌರವಾಧ್ಯಕ್ಷೆ ಲಕ್ಷ್ಮಮ್ಮ, ಕರವೇ ಉಪಾಧ್ಯಕ್ಷ ಶಿವಣ್ಣ, ಗೌರವ ಸಲಹೆಗಾರ ಪ್ರಕಾಶ್, ಹೋರಾಟ ಸಮಿತಿ ಅಧ್ಯಕ್ಷ ಮಹೇಶ್ ಇತರರು ಹಾಜರಿದ್ದರು.

ಪ್ರತಿಕ್ರಿಯಿಸಿ (+)