ಮಂಗಳವಾರ, ಜೂನ್ 15, 2021
20 °C

ಮಹಿಳೆಯರಲ್ಲೇ ಹೆಚ್ಚಿನ ಸಂತಾನಶಕ್ತಿ ಹರಣ ಚಿಕಿತ್ಸೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯದಲ್ಲಿ ಪುರುಷರಿ­ಗಿಂತ ಮಹಿಳೆಯರು ಹೆಚ್ಚಿನ  ಸಂಖ್ಯೆ­ಯಲ್ಲಿ ಸಂತಾನಶಕ್ತಿ ಹರಣ ಚಿಕಿತ್ಸೆಗೆ ಒಳ­ಗಾಗುತ್ತಿ­ದ್ದಾರೆ ಎಂಬುದು ಕರ್ನಾಟಕ ಆರ್ಥಿಕ ಸಮೀಕ್ಷೆಯ ವರದಿಯಿಂದ ದೃಢಪಟ್ಟಿದೆ.2014ರ ಕರ್ನಾಟಕ ಆರ್ಥಿಕ ಸಮೀ­ಕ್ಷೆ ವರದಿಯಂತೆ ರಾಜ್ಯ­ದಲ್ಲಿ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆಗೆ ಒಳ­ಗಾದ ಮಹಿಳೆಯರು 1,79,989.   ಪುರುಷರ ಸಂಖ್ಯೆ ಕೇವಲ 1,312.  ನಾಲ್ಕು ವರ್ಷ­ಗ­ಳಿಂದ ಪುರು­ಷರು ಸಂತಾನ­ಶಕ್ತಿ ಹರಣ ಶಸ್ತ್ರ­ಚಿಕಿತ್ಸೆಗೆ ಒಳಗಾ­ಗುವ ಸಂಖ್ಯೆಯು ಸಾಕಷ್ಟು ಪ್ರಮಾ­ಣ­ದಲ್ಲಿ ಇಳಿಮುಖ­ವಾ­ಗಿದೆ. 2011–12­ರಲ್ಲಿ ಶೇ 0.01 ಇದ್ದಿದ್ದು 2012­–13ರಲ್ಲಿ ಶೇ. 0.008 ರಷ್ಟಾಗಿದೆ. ಸರ್ಕಾ­­ರವು ಪುರು­ಷರ ಸಂತಾನಶಕ್ತಿ ಹರಣ ಚಿಕಿತ್ಸೆಗೆ ಹೆಚ್ಚಿನ ಪ್ರೋತ್ಸಾಹ ನೀಡು­ತ್ತಿದೆ.ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.­ಮಮತಾ ಅವರು, ‘ಪುರುಷರ ಸಂತಾ­ನ­ಶಕ್ತಿ ಹರಣ ಚಿಕಿತ್ಸೆ ಕುರಿತು ಜಾಗೃತಿ ಮೂಡಿಸಲು ಅನೇಕ ಆರೋಗ್ಯ ಶಿಬಿರಗಳನ್ನು ನಡೆಸಲಾ­ಗು­ತ್ತಿದೆ.ಈ ಆರೋಗ್ಯ ಶಿಬಿರಗ­ಳಲ್ಲಿ 30 ರಿಂದ 40 ರಷ್ಟು ಮಹಿಳೆ­ಯರು ಭಾಗ­ವಹಿಸಿದರೆ, ಒಬ್ಬಿಬ್ಬರು ಪುರು­ಷರು ಭಾಗವಹಿಸುತ್ತಾರೆ’ ಎಂದರು.‘ಪುರುಷರು ಸಂತಾ­ನ­ಶಕ್ತಿ ಹರಣ ಚಿಕಿತ್ಸೆ ಮಾಡಿಸಿಕೊಂಡರೆ, ಅವರ ಆರೋಗ್ಯದ ಮೇಲೆ ಪ್ರತಿಕೂಲ ಪರಿ­ಣಾಮ ಉಂಟಾಗುತ್ತದೆ ಎಂಬ ತಪ್ಪು ಕಲ್ಪನೆಯಿದೆ. ಇದರ ಕುರಿತು ಪುರು­ಷರ ಮನವೊಲಿಸಲು ಬಿಪಿಎಲ್‌ ವರ್ಗಕ್ಕೆ ₨ 600, ಎಪಿಎಲ್‌ ವರ್ಗಕ್ಕೆ ₨ 250 ನೀಡಲಾಗುತ್ತಿದೆ’ ಎಂದು ವಿವರಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.