ಗುರುವಾರ , ಜೂನ್ 24, 2021
30 °C

ಮಹಿಳೆಯರಿಗೆ ಕಾನೂನು ಅರಿವು ಅಗತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶ್ರೀನಿವಾಸಪುರ: ವಿವಾಹಿತ ಮಹಿಳೆ ಯರು ಮನೆ ಮಂದಿಯೊಂದಿಗೆ ಹೊಂದಿ ಕೊಂಡು ಹೋಗಬೇಕು. ಕ್ಷುಲ್ಲಕ ವಿಷಯ ಗಳಿಗೆ ನ್ಯಾಯಾಲಯದ ಮೆಟ್ಟಿಲೇರುವ ಪರಿಪಾಠ ಬಿಡಬೇಕು. ಕೌಟುಂಬಿಕ ಜೀವನ ಸುಖಕರವಾಗಿರುವಂತೆ ನೋಡಿ ಕೊಳ್ಳಬೇಕು ಎಂದು ಜೆಎಂಎಫ್‌ಸಿ ನ್ಯಾಯಾಲಯದ ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಪ್ರೀತ್‌ಜೆ ಸಲಹೆ ಮಾಡಿದರು.  ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಹಿಳಾ ದಿನಾಚರಣೆ ಅಂಗವಾಗಿ ಮಂಗಳವಾರ ಏರ್ಪಡಿಸಿದ್ದ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಹಿಳೆಯರು ತಮ್ಮ ರಕ್ಷಣೆಗಾಗಿ ಕಾನೂನಿನ ಅರಿವು ಹೊಂದಿರಬೇಕು. ಅನಿವಾರ್ಯ ಪರಿಸ್ಥಿತಿಯಲ್ಲಿ ಮಹಿಳೆ ಯರ ಪರ ಕಾನೂನಿನ ರಕ್ಷಣೆ ಪಡೆಯಬೇಕು ಎಂದು ಹೇಳಿದರು.  ಕಾಲೇಜಿನ ಪ್ರಾಂಶುಪಾಲ ಶಿವಣ್ಣ ಅಧ್ಯಕ್ಷತೆ ವಹಿಸಿದ್ದರು. ವಕೀಲರಾದ ಕೆ.ವಿ.ರೂಪಶ್ರೀ ವರದಕ್ಷಿಣೆ ಮತ್ತು ಜೀವನಾಂಶ ವಿಷಯ ಕುರಿತು ಮಾತನಾಡಿದರು. ಸ್ಥಳೀಯ ವಕೀಲರ ಸಂಘದ ಅಧ್ಯಕ್ಷ ಕೆ.ವೆಂಕಟೇಶ್, ಉನ್ಯಾಸಕಿ ಎಚ್.ಎನ್.ಪ್ರಮೀಳಾ, ವಕೀಲರಾದ ಕೆ.ಶಿವಪ್ಪ, ಪಿ.ಸಿ. ನಾರಾಯಣಸ್ವಾಮಿ, ಶ್ರೀನಿವಾಸರೆಡ್ಡಿ ಉಪಸ್ಥಿತರಿದ್ದರು. ರೇಣುಕಾ ನಿರೂಪಿಸಿ ದರು. ಅರ್ಜುನ್ ಸ್ವಾಗತಿಸಿದರು. ರಾಜಗೋಪಾಲರೆಡ್ಡಿ ವಂದಿಸಿದರು.ಕಾಂಗ್ರೆಸ್ ವಿಜಯೋತ್ಸವ

ಉಡುಪಿ - ಚಿಕ್ಕಮಗಳೂರು ಲೋಕ ಸಭಾ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ನ ಜಯಪ್ರಕಾಶ್ ಹೆಗಡೆ ಜಯಗಳಿಸಿ ದ್ದಕ್ಕಾಗಿ ತಾಲ್ಲೂಕು ಕಾಂಗ್ರೆಸ್ ಕಾರ್ಯ ಕರ್ತರು ಬುಧವಾರ ಪಟ್ಟಣದಲ್ಲಿ ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು.

 

ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಎಲ್.ಗೋಪಾಲಕೃಷ್ಣ, ಮುಖಂಡರಾದ ಎನ್.ಶ್ರೀರಾಮರೆಡ್ಡಿ, ದಿಂಬಾಲ ಅಶೋಕ್, ವೆಂಕಟಸುಬ್ಬಾರೆಡ್ಡಿ, ಸುಬ್ಬಾರೆಡ್ಡಿ, ಅಶೋಕ್, ನವೀನ್ ಮತ್ತಿತರರು ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.