ಮಂಗಳವಾರ, ಏಪ್ರಿಲ್ 13, 2021
26 °C

ಮಹಿಳೆಯರಿಗೆ ಕಾನೂನು ಸೇವಾ ಅರಿವು ಅಗತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

 ತಿ.ನರಸೀಪುರ: ಮಹಿಳೆಯರು ತಮ್ಮ ಮೇಲಿನ ದೌರ್ಜನ್ಯ ತಡೆಯಲು ಉಚಿತ ವಾಗಿ ನೀಡುತ್ತಿರುವ ಕಾನೂನು ಸೇವೆಗಳ ಬಗ್ಗೆ ತಿಳಿದು ಕೊಳ್ಳುವುದು ಅಗತ್ಯ ಎಂದು ಪಟ್ಟಣದ ಜೆಎಂಎಫ್‌ಸಿ ಹಿರಿಯಶ್ರೇಣಿ ನ್ಯಾಯಾ ಧೀಶ ಎಂ.ಜಿ.ಕುಡುವಕ್ಕಲಿಗೇರ ಹೇಳಿದರು.ಪಟ್ಟಣದ ಅಂಬೇಡ್ಕರ್ ಭವನದಲ್ಲಿ ನಿರಂತರ ಸೇವಾ ಸಂಸ್ಥೆ, ಕಾನೂನು ನೆರವು ಪ್ರಾಧಿಕಾರ, ಕ್ಯಾಥೋಲಿಕ್ ಆರೋಗ್ಯ ಜಾಗೃತಿ ಸಂಸ್ಥೆ, ಎಸ್‌ಜೆಎಸ್ ಆರ್‌ವೈ, ವಕೀಲರ ಸಂಘ, ಕ್ಷಯ ರೋಗ ನಿಯಂತ್ರಣ ಘಟಕಗಳ ಆಶ್ರಯ ದಲ್ಲಿ ಈಚೆಗೆ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಉದ್ಘಾ ಟಿಸಿ ಅವರು ಮಾತನಾಡಿದರು.ವಕೀಲರ ಸಂಘದ ಅಧ್ಯಕ್ಷ ನಂಜುಂಡೇಗೌಡ, ಮೈರಾಡ ಸಂಸ್ಥೆಯ ವ್ಯವಸ್ಥಾಪಕ  ಸದಾಶಿವಪ್ಪ ಮಾತನಾಡಿದರು.ಇದೇ ಸಂದರ್ಭದಲ್ಲಿ  ರಾಜ್ಯ ಮಟ್ಟದ ಉತ್ತಮ ಅಂಗನವಾಡಿ ಶಿಕ್ಷಕಿ ಪ್ರಶಸ್ತಿ ಗಳಿಸಿದ ತಾಲ್ಲೂಕಿನ ಮುತ್ತತ್ತಿ ಅಂಗನವಾಡಿ ಕೇಂದ್ರದ ಸುನಂದಾ ಅವರನ್ನು ಗೌರವಿಸಲಾಯಿತು.ಪ.ಪಂ. ಅಧ್ಯಕ್ಷ ಬಸವಣ್ಣ, ಉಪಾ ಧ್ಯಕ್ಷ ಟೆಂಪೋ ಮಹಾದೇವಣ್ಣ, ಯೋಜನಾಧಿಕಾರಿ ಕರಿಬಸವಯ್ಯ, ಕ್ಷಯ ರೋಗ ನಿಯಂತ್ರಣ ಘಟಕದ ಹಿರಿಯ ಮೇಲ್ವಿಚಾರಕ ಎಸ್.ಗಂಗಾ ಧರ್ ನಾಯಕ್, ಮಹಿಳಾ ಘಟಕದ ಅಧ್ಯಕ್ಷೆ ಲತಾ ಜಗದೀಶ್ ಸೇರಿದಂತೆ ಹಲವಾರು ವಕೀಲರು, ಮಹಿಳಾ ಕಾರ್ಯಕರ್ತರು  ಹಾಜರಿದ್ದರು. ಇದಕ್ಕೂ ಮುನ್ನಾ ಸಾರ್ವಜನಿಕ ಆಸ್ಪತ್ರೆಯ ಮುಂಭಾಗದಿಂದ ಸ್ತ್ರೀಶಕ್ತಿ ಸಂಘಟನೆಗಳ ಕಾರ್ಯಕರ್ತರು ಕ್ಷಯ ರೋಗ ನಿಯಂತ್ರಣ ಹಾಗೂ ಮಹಿಳೆ  ಹಕ್ಕುಗಳ ಅರಿವು ಕುರಿತಾದ ಜಾಥಾಕ್ಕೆ ಐಸಿಡಿಎಸ್‌ನ ಮೇಲ್ವಿಚಾರಕಿ  ಸುಧಾ ಚಾಲನೆ ನೀಡಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.