ಮಹಿಳೆಯರಿಗೆ ದೆಹಲಿ ರಸ್ತೆಗಳು ಸುರಕ್ಷಿತವಲ್ಲ: ಸುಪ್ರೀಂ ಕೋರ್ಟ್

7

ಮಹಿಳೆಯರಿಗೆ ದೆಹಲಿ ರಸ್ತೆಗಳು ಸುರಕ್ಷಿತವಲ್ಲ: ಸುಪ್ರೀಂ ಕೋರ್ಟ್

Published:
Updated:
ಮಹಿಳೆಯರಿಗೆ ದೆಹಲಿ ರಸ್ತೆಗಳು ಸುರಕ್ಷಿತವಲ್ಲ: ಸುಪ್ರೀಂ ಕೋರ್ಟ್

ನವದೆಹಲಿ (ಐಎಎನ್‌ಎಸ್): ದೆಹಲಿಯ ರಸ್ತೆಗಳು ಮಹಿಳೆಯರಿಗೆ ಸುರಕ್ಷಿತವಲ್ಲ ಹಾಗೂ  `ನಾವು ಮಹಿಳೆಯರಿಗೆ ಭದ್ರತೆ ಮತ್ತು ಗೌರವ ಕೊಡುವುದರಲ್ಲಿ ವಿಫಲರಾಗಿದ್ದೇವೆ' ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ತಿಳಿಸಿದೆ.ಮಹಿಳೆಯರ ಸುರಕ್ಷತೆಗೆ ಸಂಬಂಧಿಸಿದಂತೆ ಕಾನೂನು ವಿದ್ಯಾರ್ಥಿನಿಯೊಬ್ಬರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ಸಂದರ್ಭದಲ್ಲಿ ನ್ಯಾಯಾಲಯ ಈ ಅಭಿಪ್ರಾಯಪಟ್ಟಿತು.ಪ್ರಸಕ್ತ ವಿದ್ಯಮಾನಗಳನ್ನು ಗಮನಿಸಿರುವ ನ್ಯಾಯಾಲಯ ಮಹಿಳೆಯರ ಸುರಕ್ಷತೆ ಬಗ್ಗೆ ವರದಿ ನೀಡುವಂತೆ ಕೇಂದ್ರ ಸರ್ಕಾರ, ದೆಹಲಿ ಸರ್ಕಾರ, ಮಹಿಳಾ ಆಯೋಗ ಮತ್ತು ದೆಹಲಿಯ ಸಾರಿಗೆ ಸಂಸ್ಥೆಗೆ ನೋಟಿಸ್ ನೀಡಲಾಗಿದೆ ಎಂದು ನ್ಯಾಯಾಲಯ ತಿಳಿಸಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry