ಮಹಿಳೆಯರಿಗೆ ಲಭಿಸಿದನ್ಯಾಯ

7
ಕೊಪ್ಪಳ ನಗರಸಭೆ ವಾರ್ಡ್‌ವಾರು ಮೀಸಲಾತಿ ಪಟ್ಟಿ ಪ್ರಕಟ

ಮಹಿಳೆಯರಿಗೆ ಲಭಿಸಿದನ್ಯಾಯ

Published:
Updated:

ಕೊಪ್ಪಳ: ಕೊಪ್ಪಳ ನಗರಸಭೆಯ ನೂತನ ಮೀಸಲಾತಿಯಲ್ಲಿ ಮಹಿಳೆಯರಿಗೆ ನೀಡಬೇಕಾದ ಸಂಖ್ಯೆಯಷ್ಟು ಸ್ಥಾನಗಳನ್ನು ನೀಡಲಾಗಿದೆ. ಶೇ 50ರಷ್ಟು ಮೀಸಲಾತಿ ನೀಡಬೇಕು ಎಂಬ ನಿಯಮದಂತೆ ಈ ಬಾರಿ 15 ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಡಲಾಗಿದೆ.ಆದರೆ, ಕಳೆದ ಬಾರಿ ಕೇವಲ 11 ಸ್ಥಾನಗಳನ್ನು ಮಾತ್ರ ಮಹಿಳೆಯರಿಗೆ ಮೀಸಲಿಟ್ಟಿದ್ದು ಮಾತ್ರ ವಿಚಿತ್ರ ಸಂಗತಿ. ಆದರೆ, ಸಾಮಾನ್ಯ ಹಾಗೂ ಹಿಂದುಳಿದ ವರ್ಗ ಎ ಮೀಸಲಾತಿಯಡಿ ಸ್ಪರ್ಧಿಸಲು ಬಯಸಿದವರಿಗೆ ನೂತನ ಮೀಸಲಾತಿ ಅಸಮಾಧಾನ ಮೂಡಿಸಲಿದೆ.ಕಳೆದ ಬಾರಿ 11 ವಾರ್ಡ್‌ಗಳನ್ನು ಸಾಮಾನ್ಯ ಅಭ್ಯರ್ಥಿಗಳಿಗಾಗಿ ಮೀಸಲಿಡಲಾಗಿದ್ದರೆ, ಅವುಗಳ ಸಂಖ್ಯೆಯನ್ನು ಈ ಬಾರಿ 9ಕ್ಕೆ ಇಳಿಸಲಾಗಿದೆ. ಆದರೆ, ಕಳೆದ ಬಾರಿ 6 ವಾರ್ಡ್‌ಗಳನ್ನು ಸಾಮಾನ್ಯ ಮಹಿಳೆಗೆ ಮೀಸಲಾಗಿಟ್ಟದ್ದರೆ, ಈ ಬಾರಿ ಈ ಸಂಖ್ಯೆಗಳನ್ನು 8ಕ್ಕೆ ಹೆಚ್ಚಿಸಲಾಗಿದೆ. ಅದೇ ರೀತಿ ಕಳೆದ ಬಾರಿ ಹಿಂದುಳಿದ ವರ್ಗ ಎ ಮಹಿಳೆ ಮೀಸಲಾತಿಯನ್ನು 2 ವಾರ್ಡ್‌ಗಳಿಗೆ ಸೀಮಿತಗೊಳಿಸಲಾಗಿತ್ತು. ಈ ಬಾರಿ ಅವುಗಳ ಸಂಖ್ಯೆಯನ್ನು 4ಕ್ಕೆ ಹೆಚ್ಚಿಸಲಾಗಿದೆ. ಹೀಗಾಗಿ ಹೆಚ್ಚುವರಿಯಾಗಿ 4 ವಾರ್ಡ್‌ಗಳನ್ನು ಮಹಿಳೆಯರಿಗೆ ಮೀಸಲಿರಿಸುವ ಮೂಲಕ ಮಹಿಳೆಯರಿಗೆ ನ್ಯಾಯ ಒದಗಿಸುವ ಪ್ರಯತ್ನ ಮಾಡಲಾಗಿದೆ.ಇನ್ನು, ಪರಿಶಿಷ್ಟ ಜಾತಿಗೆ 2 ಸ್ಥಾನಗಳ ಮೀಸಲಾತಿಯಲ್ಲಿ ಬದಲಾವಣೆ ಇಲ್ಲ. ಅದೇ ರೀತಿ ಹಿಂದುಳಿದ ವರ್ಗ ಬಿ, ಹಿಂದುಳಿದ ವರ್ಗ ಬಿ ಮಹಿಳೆ, ಪರಿಶಿಷ್ಟ ಪಂಗಡ ಮಹಿಳೆ ಹಾಗೂ ಪರಿಶಿಷ್ಟ ಜಾತಿ ಮಹಿಳೆಯರಿಗೆ ನೀಡಲಾಗಿರುವ ಮೀಸಲಾತಿಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಈ ಎಲ್ಲ ವರ್ಗಗಳಿಗೆ ತಲಾ ಒಂದು ವಾರ್ಡ್ ಮೀಸಲಿರಿಸಿರುವುದನ್ನು ಮುಂದುವರಿಸಲಾಗಿದೆ.

ಆದರೆ, ಪರಿಶಿಷ್ಟ ಪಂಗಡಕ್ಕೆ ಸೇರಿದ ಸಾಮಾನ್ಯ ಅಭ್ಯರ್ಥಿಗಾಗಿ ಕಳೆದ ಬಾರಿಯಂತೆ ಈ ಬಾರಿಯೂ ಯಾವುದೇ ವಾರ್ಡ್‌ನಲ್ಲಿ ಮೀಸಲಾತಿ ನೀಡಲಾಗಿಲ್ಲ.ಈ ಮೀಸಲಾತಿ ಬಗ್ಗೆ ಆಕ್ಷೇಪಣೆಗಳು ಇದ್ದಲ್ಲಿ ಸಲ್ಲಿಸಲು 7 ದಿನಗಳ ಕಾಲಾವಕಾಶ ಇದೆ. ಕೊಪ್ಪಳ ನಗರಸಭೆಯ ಮೀಸಲಾತಿ ಸೇರಿದಂತೆ ಜಿಲ್ಲೆಯ ನಾಲ್ಕೂ ಸ್ಥಳೀಯ ಸಂಸ್ಥೆಗಳ ನೂತನ ಮೀಸಲಾತಿಗೆ ಈ ವರೆಗೆ 12 ಆಕ್ಷೇಪಣೆಗಳು ಸಲ್ಲಿಕೆಯಾಗಿವೆ ಎಂದು ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ `ಪ್ರಜಾವಾಣಿ'ಗೆ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry