ಮಹಿಳೆಯರಿಗೆ ಹೊಲಿಗೆ ಯಂತ್ರ ವಿತರಣೆ

7

ಮಹಿಳೆಯರಿಗೆ ಹೊಲಿಗೆ ಯಂತ್ರ ವಿತರಣೆ

Published:
Updated:

ದೇವದುರ್ಗ: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ ಪಟ್ಟಣದ ನಿರುದ್ಯೋಗ 20 ಜನ ಮಹಿಳೆಯರಿಗೆ ಹೊಲಿಗೆ ಯಂತ್ರಗಳನ್ನು ಬಿಜೆಪಿ ಮುಖಂಡ ವೆಂಕಟೇಶ ಪೂಜಾರಿ ವಿತರಣೆ ಮಾಡಿದರು.ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಹಿಂದುಳಿದ ಇಲಾಖೆ ವತಿಯಿಂದ ಏರ್ಪಡಸಿಲಾಗಿದ್ದ ಸರಳ ಸಮಾರಂಭದಲ್ಲಿ 2011-12ನೇ ಸಾಲಿನಲ್ಲಿ ಹೊಲಿಗೆ ತರಬೇತಿ ಪಡೆದು ಉತ್ತೀರ್ಣರಾದ 20 ಜನ ಮಹಿಳೆಯರಿಗೆ ಯಂತ್ರಗಳನ್ನು ನೀಡಿದರು.ಸರ್ಕಾರ ಮಹಿಳೆಯರಿಗಾಗಿಯೇ ಅನೇಕ ಯೋಜನೆಗಳನ್ನು ರೂಪಿಸಿದ್ದು, ಅವುಗಳ ಸದುಪಯೋಗ ಪಡೆದುಕೊಳ್ಳಲು ಮಹಿಳೆಯರು ಮುಂದೆ ಬರಬೇಕಾಗಿದೆ ಎಂದು ಅವರು ಕರೆ ನೀಡಿದರು.ಕಾರ್ಯಕ್ರಮದಲ್ಲಿ ಎಪಿಎಂಸಿ ಉಪಾಧ್ಯಕ್ಷ ಹನುಮಂತ ಮಿಯ್ಯಾಪೂರ, ಟಿಎಪಿಸಿಎಂಎಸ್ ಅಧ್ಯಕ್ಷ ಶರಣಗೌಡ ಕೊಪ್ಪರ, ತಿಮ್ಮಪ್ಪ ನಾಯಕ ಅರಕೇರಾ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ನಾಮದೇವ ರಾಠೋಡ್, ಶಾಸಕರ ಅಪ್ತ ಸಹಾಯಕ ಮಂಜುನಾಥ, ಇಲಾಖೆ ಅಧಿಕಾರಿ ಎಸ್.ಜಿ. ಹಿರೇಮಠ, ತೋಟಗಾರಿಕೆ ಅಧಿಕಾರಿ ಸುರೇಶ ಕುಮಾರ, ಇತರರು ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry