ಸೋಮವಾರ, ಜೂನ್ 14, 2021
26 °C

ಮಹಿಳೆಯರು ಆರೋಗ್ಯದತ್ತ ಲಕ್ಷ್ಯವಹಿಸಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗದಗ:  ಮಹಿಳೆಯರು ಪೌಷ್ಠಿಕ ಆಹಾರ ಸೇವಿಸುವ ಮೂಲಕ ತಮ್ಮ ಆರೋಗ್ಯ ದತ್ತ ಹೆಚ್ಚು ಲಕ್ಷ್ಯ ವಹಿಸಬೇಕು ಎಂದು ಡಾ. ತೋಂಟದ ಸಿದ್ಧಲಿಂಗ ಸ್ವಾಮೀಜಿ ಸಲಹೆ ನೀಡಿದರು. ಸ್ಥಳೀಯ ತೋಂಟ ದಾರ್ಯ ಮಠದಲ್ಲಿ ಇತ್ತೀಚೆಗೆ ಲಿಂಗಾಯತ ಪ್ರಗತಿ ಶೀಲ ಸಂಘದ ವತಿಯಿಂದ ನಡೆದ ಶಿವಾ ನುಭವ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.   ಪ್ರತಿನಿತ್ಯ ಯೋಗಾಭ್ಯಾಸ ಸೇರಿದಂತೆ ಸುಲಭವಾಗಿ ಲಭ್ಯವಾಗುವ  ಮೊಳಕೆ ಕಾಳು, ಹಸಿ ತರಕಾರಿ, ಹಾಲು, ಹಣ್ಣುಗಳನ್ನು ಸೇವಿಸಬೇಕು. ಪೌಷ್ಟಿಕ ಆಹಾರ ಸೇವಿಸುವ ಪರಿಪಾಠವನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು. 

 ಮಕ್ಕಳಿಗೆ ತಾಯಿಯ ಎದೆ ಹಾಲು ಶ್ರೇಷ್ಠ ಎಂಬುದು ವೈಜ್ಞಾನಿಕ ಸತ್ಯ.ಇದರಿಂದ ತಾಯಿ-ಮಗುವಿನ ಆರೋಗ್ಯ ಸುಧಾರಿಸುವುದೆಂಬುದನ್ನು ಮಹಿಳೆಯರು ಅರಿತುಕೊಳ್ಳಬೇಕು. ವಯಸ್ಸಾದ ಮಹಿಳೆಯರು ಕೂಡ ಪ್ರತಿನಿತ್ಯ ಸರಳವಾಗಿ ಮಾಡ ಬಹುದಾದ ಕಪಾಲಭಾತಿ, ಲೋಮ ಅನುಲೋಮ, ಸರಳ ಲಘು ಪ್ರಾಣಾಯಾಮ ಅನುಸರಿಸುವುದು ಉತ್ತಮ ಎಂದರು.   ಬಸವಾದಿ ಶರಣರ ವಚನಗಳನ್ನು ಓದುವುದರಿಂದ ವೈಚಾರಿಕಶಕ್ತಿ, ವೈಜ್ಞಾನಿಕ ಮನೋಭಾವ, ಆತ್ಮ ವಿಶ್ವಾಸ, ಸಮಾನತೆ ಬೆಳೆಯುತ್ತದೆ. ವಚನಗಳ ಅಧ್ಯಯನ ಅನುಸರಣೆಗೆ ಇಂದಿನ ಸಮಾಜ ಪ್ರಾಶಸ್ತ್ಯ ನೀಡಬೇಕು ಎಂದರು ಎಂದು ಹೇಳಿದರು. ಮೌಢ್ಯತೆ, ಕಂದಾಚಾರ, ಮೂಢನಂಬಿಕೆ ಉಂಟು ಮಾಡುವ ಸಾಹಿತ್ಯ ಧಾರ್ಮಿಕ ಮೌಢ್ಯಗಳನ್ನು ತಿರಸ್ಕರಿಸ ಬೇಕು. ಪುರುಷ- ಮಹಿಳೆಯರು ಸಮಾನ ಗೌರವಕ್ಕೆ ಪಾತ್ರರಾಗಬೇಕು ಎಂದು ಹೇಳಿದರು.   ಅರವಳಿಕೆ ವಿಭಾಗದ ವೈದ್ಯಕೀಯ ಪರೀಕ್ಷೆಯಲ್ಲಿ ಬಂಗಾರದ ಪದಕ ಪಡೆದ ಡಾ. ಶ್ವೇತಾ ಸಂಕನೂರ ಹಾಗೂ ಕರ್ನಾಟಕ ಲಲಿತಕಲಾ ಅಕಾಡೆಮಿ ಫೆಲೋಷಿಪ್ ಪುರಷ್ಕೃತರಾದ ಡಾ. ಲಕ್ಷ್ಮೀದೇವಿ ಗವಾಯಿ ಅವರನ್ನು ಶ್ರೀಗಳು ಸನ್ಮಾನಿಸಿದರು.  ಇದೇ ಸಂದರ್ಭದಲ್ಲಿ ಅಕ್ಕ ಮಹಾದೇವಿ ಯೋಗವಿಜ್ಞಾನ ಕೇಂದ್ರದ ವಾರ್ಷಿಕೋತ್ಸವದ ಅಂ ವಾಗಿ ಮಹಿಳೆಯರಿಂದ ಏರ್ಪಡಿಸಿದ್ದ ವಚನ, ಯೋಗ, ರಂಗೋಲಿ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.   ಉತ್ತಮ ಆಹಾರ ಪದ್ದತಿ ಯಾವುದು? ಎಂಬ ವಿಷಯ ಕುರಿತು ನಗರದ  ಡಾ. ಪ್ರಭಾ ದೇಸಾಯಿ ಅವರು `ಉತ್ತಮ ಆಹಾರ ಪದ್ಧತಿ~ ಹಾಗೂ ಮಹಿಳಾ ಉನ್ನತಿಗೆ ಒಡಕಾಗಿರುವ ಅನಿಷ್ಟ ಪದ್ದತಿ ಕುರಿತು ಡಾ. ಅನ್ನಪೂರ್ಣ ಜಾಲವಾದಿ ಉಪ ನ್ಯಾಸ ನೀಡಿದರು.  ಅಕ್ಕಮಹಾದೇವಿ ಯೋಗ ವಿಜ್ಞಾನ ಕೇಂದ್ರದ ಸದಸ್ಯೆಯರಿಂದ ಯೋಗ ಶಿಕ್ಷಕಿ  ಪದ್ಮಾ ಹುಂಬಿ ಮಾರ್ಗ ದರ್ಶನದಲ್ಲಿ ಯೋಗ ಪ್ರದರ್ಶನ ನಡೆಯಿತು. ಸುನಂದಾ ಜಾನೋಪಂತರ ಸಂಗಡಿಗರಿಂದ ವಚನಗಾಯನ, ಸುಮಂಗಲಾ ಹದ್ಲಿ ಸಂಗಡಿಗರಿಂದ ನೃತ್ಯ ಜರುಗಿತು. ಅನ್ನಪೂರ್ಣ ಬಡಿಗಣ್ಣವರ ಕಿತ್ತೂರ ಚೆನ್ನಮ್ಮ ಕುರಿತ ಕವನ ವಾಚಿಸಿದರು.  ಅನ್ನಪೂರ್ಣ ವರವಿ ಹಾಗೂ ಶಾಂತಾ ಮುಂದಿನಮನಿ ಅವರಿಂದ ವಚನ ಚಿಂತನ ನಡೆಯಿತು.  ದ್ರಾಕ್ಷಾಯಿಣಿ ಸಂಕೇಶ್ವರ, ಶೋಭಾ ಅಂಗಡಿ, ಅಮರೇಶ ಅಂಗಡಿ, ಚಂದ್ರು ಸಂಕಣ್ಣವರ, ನಿರ್ಮಲಾ ಪಾಟೀಲ, ನೀಲಮ್ಮ ಬೇವಿನಮರದ, ಶಿವಲೀಲಾ ಕುರಡಗಿ, ಶಿವಲೀಲಾ ಅಕ್ಕಿ, ಶಾಂತಾದೇವಿ ತುಪ್ಪದ, ಅಕ್ಕ ಮಹಾದೇವಿ ಚೆಟ್ಟಿ ಮತ್ತಿತರರು ಹಾಜರಿದ್ದರು.ಅನುದಾನ ಬಳಸಲು ಸೂಚನೆಗದಗ: ಸರ್ಕಾರದಿಂದ ಎಲ್ಲ ಇಲಾಖೆಗಳಿಗೆ ಬಿಡುಡೆಯಾಗಿರುವ ಅನುದಾನವನ್ನು ಕಡ್ಡಾಯವಾಗಿ  ಮಾರ್ಚ್ 31 ರೊಳಗಾಗಿ ವಿನಿ ಯೋಗಿಸಿ ಕೊಳ್ಳಬೇಕು ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಬಸವ ರಾಜೇಶ್ವರಿ ಪಾಟೀಲ ಅಧಿಕಾರಿಗಳಿಗೆ ಸಲಹೆ ನೀಡಿದರು.ನಗರದ ಜಿಲ್ಲಾ ಪಂಚಾಯಿತಿ ಸಭಾಭವನದಲ್ಲಿ ಇತ್ತೀಚೆಗೆ ನಡೆದ ಕೆಡಿಪಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಯಾವುದೇ ಹಣ ಪೋಲಾಗದಂತೆ ಖರ್ಚು ಮಾಡ ಬೇಕು ಎಂದು ಹೇಳಿದರು.ಬೇಸಿಗೆ ಬಿಸಿಲು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಸಾರ್ವ ಜನಿಕರಿಗೆ ಕುಡಿಯುವ ನೀರಿನ ತೊಂದರೆ ಉಂಟಾಗಿದ್ದು, ಈ ಬಗ್ಗೆ ಅಧಿಕಾರಿಗಳು ಗಮನಹರಿಸಬೇಕು ಎಂದರು.ಜಾನುವಾರುಗಳಿಗೆ  ಕುಡಿಯುವ ನೀರಿನ, ಆರೋಗ್ಯದ ತೊಂದರೆಯನ್ನು ಸರಿಯಾದ ರೀತಿಯಲ್ಲಿ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು  ಎಂದು ಸೂಚಿಸಿದರು.ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವೀರಣ್ಣ ತುರಮರಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲಿಸಿ ಮಾತನಾಡಿ, ಎಲ್ಲ ಇಲಾಖೆಗಳು ಶೇಕಡಾ 100 ರಷ್ಟು ಸಾಧನೆಯ ಕಡೆಗೆ ಗಮನ ಕೊಡಬೇಕು ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.