ಶನಿವಾರ, ಏಪ್ರಿಲ್ 17, 2021
32 °C

ಮಹಿಳೆಯರು ಸಮಾಜದ ಬುನಾದಿ: ಅಪ್ಪಚ್ಚುರಂಜನ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೋಮವಾರಪೇಟೆ: ಮಕ್ಕಳಿಗೆ ಮೊದಲ ಗುರುವಾಗಿ ಕಲಿಸುವ ಮಹಿಳೆಯರು ಸಮಾಜದ ಬುನಾದಿ ಎಂದು ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಅಭಿಪ್ರಾಯಪಟ್ಟರು.ಆಂಜನೇಯ ದೇವಸ್ಥಾನದ ಸಭಾಂಗಣದಲ್ಲಿ ಸೋಮವಾರ ನಬಾರ್ಡ್, ಓ.ಡಿ.ಪಿ ಸಂಸ್ಥೆ, ಮಹಿಳೋದಯ ಮಹಿಳಾ ಒಕ್ಕೂಟ, ಜಲಾನಯನ ಅಭಿವೃದ್ಧಿ ಸಮಿತಿಗಳ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.ಸಾಮಾಜಿಕ ವ್ಯವಸ್ಥೆಯಲ್ಲಿ ಪುರುಷ ಮತ್ತು ಸ್ತ್ರೀ ಸಮಾನರು. ಮೇಲು-ಕೀಳು ಭಾವನೆ ಕುಟುಂಬದ ಸಾಮರಸ್ಯ ಹದಗೆಡಿಸುತ್ತದೆ. ಪರಸ್ಪರ ನಂಬಿಕೆ ಮತ್ತು ಪ್ರೀತಿಯ ತಳಹದಿಯ ಮೇಲೆ ನಡೆದರೆ ಮಾತ್ರ ಶಾಂತಿ ನೆಲೆಸಲು ಸಾಧ್ಯ ಎಂದರು. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಕಾವೇರಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ರವಿ ಕುಶಾಲಪ್ಪ ಮಾತನಾಡಿದರು.ಕಾರ್ಯಕ್ರಮವನ್ನು ಓ.ಡಿ.ಪಿ ಸಂಸ್ಥೆಯ ನಿರ್ದೇಶಕ ಫಾ.ಜೆ.ಬಿ.ಜೇವಿಯರ್ ಉದ್ಘಾಟಿಸಿದರು. ಸ್ಕೌಟ್ ಮತ್ತು ಗೈಡ್ಸ್ ಸಂಸ್ಥೆಯ ಜಿಲ್ಲಾ ಪ್ರಧಾನ ಆಯುಕ್ತ ಬೇಬಿ ಮ್ಯಾಥ್ಯೂ, ನಬಾರ್ಡ್ ಯೋಜನಾ ಘಟಕದ ಡಿ.ಜಿ.ಎಂ ಎಚ್.ಎನ್.ನಾಗೇಂದ್ರ, ಡಿ.ಡಿ.ಎಂ ಶಿವರಾಮ ಕೃಷ್ಣನ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ವಿ.ಕೆ.ಲೋಕೇಶ್, ಉಪಾಧ್ಯಕ್ಷೆ ನೇತ್ರಾವತಿ ಈರಪ್ಪ, ಜಿಲ್ಲಾ ಪಂಚಾಯಿತಿ ಸದಸ್ಯರಾದ ವೆಂಕಪ್ಪ ಮತ್ತು ಶಿವಪ್ಪ, ಎಸ್.ಜಿ.ಎಸ್.ವೈ ಸಹಾಯಕ ಸಂಯೋಜನಾಧಿಕಾರಿ ಶಬೀರ್ ಪಾಷಾ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಎಚ್.ಎಸ್.ಬಲರಾಂ, ಗಂಗಾ ಗ್ರಾಮ ಜಲಾನಯನ ಸಮಿತಿ ಸದಸ್ಯರಾದ ಎಚ್.ಡಿ.ಚಿನ್ನಪ್ಪ ಇದ್ದರು.ಸಭಾ ಕಾರ್ಯಕ್ರಮಕ್ಕೂ ಮುನ್ನ ನಗರದ ಬಸವೇಶ್ವರ ದೇವಾಲಯದ ಬಳಿಯಿಂದ ಆರಂಭಗೊಂಡ ಮೆರವಣಿಗೆಗೆ ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷೆ ನೇತ್ರಾವತಿ ಈರಪ್ಪ ಚಾಲನೆ ನೀಡಿದರು. ಜಾಯ್ಸಾ ಮೆನೇಜಸ್ ಸ್ವಾಗತಿಸಿದರು. ಓ.ಡಿ.ಪಿ ಸಂಸ್ಥೆಯ ಸಹನಿರ್ದೇಶಕ ಫಾ.ಸ್ಟ್ಯಾನಿ ಅಲ್ಮೆಡಾ ಕಾರ್ಯಕ್ರಮದ ಉದ್ದೇಶಗಳ ಬಗ್ಗೆ ಮಾಹಿತಿ ನೀಡಿದರು. ಸುನೀತಾ ನಿರೂಪಿಸಿ ಸಂತೋಷ್ ಲೀವಿಸ್ ವಂದಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.