ಮಹಿಳೆಯರ ಆರ್ಥಿಕ ಬಲವರ್ಧನೆಗೆ ಸಲಹೆ

7

ಮಹಿಳೆಯರ ಆರ್ಥಿಕ ಬಲವರ್ಧನೆಗೆ ಸಲಹೆ

Published:
Updated:

ನ್ಯಾಮತಿ:  ಸ್ತ್ರೀಶಕ್ತಿ ಸಂಘದ ಮಹಿಳೆ ಯರು ಬ್ಯಾಂಕ್ ವ್ಯವಹಾರಗಳಿಗೆ ಮಾತ್ರ ಸೀಮಿತಗೊಳ್ಳದೇ, ಆರ್ಥಿಕ ಆದಾಯ ಬರುವ ಚಟುವಟಿಕೆ, ಉದ್ಯೋಗ ಕೈಗೊಳ್ಳಬೇಕು ಎಂದು ಪ್ರಗತಿಪರ ರೈತ ಮಹಿಳೆ ಆರುಂಡಿ ಇಂದ್ರಮ್ಮ ಸಲಹೆ ನೀಡಿದರು.ಸಮೀಪದ ಬೆಳಗುತ್ತಿಯಲ್ಲಿ ಗುರುವಾರ ಸ್ತ್ರೀಶಕ್ತಿ ಗೊಂಚಲು ಗುಂಪಿನ ಪ್ರತಿನಿಧಿಗಳಿಗೆ ‘ಗೊಂಚಲು ಗುಂಪು ಮತ್ತು ಬ್ಲಾಕ್ ಸೊಸೈಟಿಗಳ ಬಲವರ್ಧನೆ’ ಕುರಿತ   ಮೂರು ದಿನಗಳದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.ಮಹಿಳಾ ಸಂಘಟನೆಗಳು ಅಂತರಿಕ ಸಾಲ, ಉಳಿತಾಯ, ಸುತ್ತುನಿಧಿ ಎಂದು ಸೀಮಿತವಾಗದೇ, ಆರ್ಥಿಕ ಆದಾಯ ಬರುವಂತಹ ಕಸುಬು ಗಳನ್ನು ಮಾಡುವುದರ ಮೂಲಕ ಸ್ವಾವಲಂಬಿಗಳಾಗಿ ಬದುಕುಬೇಕು ಎಂದು ತಿಳಿಸಿದರು.ಚೀಲೂರು ಗ್ರಾಮದ ಮಹಾತ್ಮ ಗ್ರಾಮಾಭಿವೃದ್ಧಿ ಸ್ವಯಂಸೇವಾ ಸಂಸ್ಥೆ ಅಧ್ಯಕ್ಷ ಪರುವಂತರ ಪರಮೇಶ್ವರಪ್ಪ ಮಾತನಾಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry