ಭಾನುವಾರ, ಮೇ 9, 2021
19 °C

ಮಹಿಳೆಯರ ಕೆಂಪು ವಸ್ತ್ರ: ಪುರುಷರಿಗೆ ಹೆಚ್ಚು ಆಕರ್ಷಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಂಡನ್ (ಪಿಟಿಐ): ಕೆಂಪು ಬಣ್ಣವು ಅನೇಕ ಸಂದರ್ಭಗಳಲ್ಲಿ ಅನೇಕರ ಪಾಲಿಗೆ ಅಪಾಯದ ಸಂಕೇತವಾಗಿರಬಹುದು ಆದರೆ, ಬಹುತೇಕ ಪುರುಷರು ಕೆಂಪು ವರ್ಣದ ವಸ್ತ್ರ ಧರಿಸಿದ ಮಹಿಳೆಯರನ್ನೇ ಹೆಚ್ಚಾಗಿ ಇಷ್ಟಪಡುತ್ತಾರಂತೆ.ಫ್ರಾನ್ಸ್‌ನ ಸೌತ್ ಬ್ರಿಟ್ಟನಿ ವಿಶ್ವವಿದ್ಯಾಲಯದ ಸಂಶೋಧನೆ ಈ ಸಂಗತಿಯನ್ನು ದೃಢಪಡಿಸಿದೆ.

ಯಾವ ಕಾರಣಕ್ಕೆ ಪುರುಷರಿಗೆ ಮಹಿಳೆಯರು ಹೆಚ್ಚು ಆಕರ್ಷಿತರಾಗುತ್ತಾರೆ ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು  ಸಂಶೋಧಕರು ವಿದ್ಯಾರ್ಥಿಗಳ ಗುಂಪಿನ ಅಧ್ಯಯನ ನಡೆಸಿ ಈ ತೀರ್ಮಾನಕ್ಕೆ ಬಂದಿದ್ದಾರೆ.`ಕೆಂಪು ವಸ್ತ್ರ ಧರಿಸಿದ್ದ  ಮಹಿಳೆಯರಿಗೇ  ಪುರುಷರು ಮೊದಲ ಆದ್ಯತೆ ನೀಡುತ್ತಾರೆ. ಇದಕ್ಕೆ ಕೆಂಪು ಬಣ್ಣದ ಬಟ್ಟೆ ಉಟ್ಟುಕೊಳ್ಳುವ ಮಹಿಳೆಯರ ಲೈಂಗಿಕ ಆಕರ್ಷಣೆಯೇ ಪ್ರಮುಖ ಕಾರಣವಂತೆ.  ಈ  ಅಧ್ಯಯನಕ್ಕಾಗಿ 18ರಿಂದ 21 ವರ್ಷದೊಳಗಿನ 120 ವಿದ್ಯಾರ್ಥಿಗಳ ಪ್ರತ್ಯೇಕ ತಂಡ ರಚಿಸಲಾಗಿತ್ತು.

 

ಕೆಂಪು, ನೀಲಿ, ಹಸಿರು ಇಲ್ಲವೆ ಬಿಳಿ ಬಣ್ಣಗಳ ವಸ್ತ್ರ ಧರಿಸಿದ್ದ  20 ವರ್ಷದ ಮಹಿಳೆಯರ ಚಿತ್ರ  ಅವಲೋಕಿಸಿ ತಮ್ಮ ಆಕರ್ಷಣೆಯ ನಿರ್ಧಾರ ದಾಖಲಿಸಲು ಮತ್ತು ವಸ್ತ್ರಗಳ ಬಣ್ಣ ಆಧರಿಸಿ ಅಂಕಗಳನ್ನು ನೀಡಲು  ಈ ತಂಡಕ್ಕೆ ತಿಳಿಸಲಾಗಿತ್ತು.ಪ್ರಶ್ನಾವಳಿಗೆ ಉತ್ತರಿಸಿದ ಈ ತಂಡದ ಬಹುತೇಕ  ವಿದ್ಯಾರ್ಥಿಗಳು, `ನಾವು ಕೆಂಪು ವಸ್ತ್ರ ತೊಡುವ ಮಹಿಳೆಗೆ ಆದ್ಯತೆ ನೀಡುತ್ತೇವೆ. ಲೈಂಗಿಕ ಆಸಕ್ತಿಯೂ ಅವಳಲ್ಲೇ ಹೆಚ್ಚಿಗೆ ಇರುತ್ತದೆ~ ಎಂದು ಅಭಿಪ್ರಾಯ ಪಟ್ಟಿದ್ದರು. ವಿವಿಧ ಬಣ್ಣಗಳ ವಸ್ತ್ರಗಳಿಗೆ ಅವರು ನೀಡಿದ ಅಂಕಗಳೂ ಇದೇ ಅಭಿಪ್ರಾಯ ಪುಷ್ಟೀಕರಿಸುತ್ತವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.