ಮಹಿಳೆಯರ ದೌರ್ಜನ್ಯಕ್ಕೆ ಕಡಿವಾಣ ಹಾಕಿ

7

ಮಹಿಳೆಯರ ದೌರ್ಜನ್ಯಕ್ಕೆ ಕಡಿವಾಣ ಹಾಕಿ

Published:
Updated:

ಬೆಂಗಳೂರು: `ನೊಂದವರಿಗೆ ನೆರವು ನೀಡುತ್ತಿರುವ ರೋಟರಿ ಕ್ಲಬ್ ಮಹಿಳೆಯರ ಹಕ್ಕಿನ ಉಲ್ಲಂಘನೆಯಂತಹ ಸೂಕ್ಷ್ಮ ವಿಚಾರಗಳ ಬಗ್ಗೆಯೂ ಗಮನ ಹರಿಸಬೇಕು. ಈ ಬಗ್ಗೆ ಚರ್ಚಿಸಿ ಸಲಹೆ ಪಡೆದುಕೊಳ್ಳಬಹುದು~ಎಂದು ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ಹೇಳಿದರು.ಬೆಂಗಳೂರು ರೋಟರಿ ಕ್ಲಬ್ ಸೋಮವಾರ ಆಯೋಜಿಸಿದ್ದ ಸರ್ಕಾರೇತರ ಸಂಸ್ಥೆಗಳಿಗೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.`ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ರೋಟರಿ ಕ್ಲಬ್ ್ರಸ್ತುತ ದಿನಗಳಲ್ಲಿ ಹೆಚ್ಚುತ್ತಿರುವ ಮಹಿಳೆಯರ ಸಮಸ್ಯೆಗಳು, ಮಕ್ಕಳ ದೌರ್ಜನ್ಯ ಪ್ರಕರಣಗಳಿಗೂ ಕಡಿವಾಣ ಹಾಕಬೇಕಿದೆ. ಈ ಕ್ಷೇತ್ರದಲ್ಲಿ ರೋಟರಿಯ ನೆರವಿನ ಅಗತ್ಯವಿದೆ~ ಎಂದು  ಹೇಳಿದರು.`ಸಾಥಿ~ `ಮೆಡಿಕೊಪ್ಯಾಸ್ಟಿ ಅಸೋಸಿಯನ್~  ಸರ್ಕಾರೇತರ ಸಂಸ್ಥೆಗಳ  ಪ್ರಮೋದ್ ಕುಲಕರ್ಣಿ, ಡಾ.ಅಜಿತ್ ಬಿಳೆ ಅವರನ್ನು ಸನ್ಮಾನಿಸಲಾಯಿತು. ಕ್ಲಬ್‌ನ ಅಧ್ಯಕ್ಷ ಎನ್.ಎಸ್.ಶ್ರೀನಿವಾಸ ಮೂರ್ತಿ, ಟಿ.ವಿ.ರಘುನಾಥ್, ಸುಕೇನ್ ಪದ್ಮನಾಭ ಇತರರು ಉಪಸ್ಥಿತರಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry