ಸೋಮವಾರ, ಜೂನ್ 14, 2021
22 °C

ಮಹಿಳೆಯ ಸಂಶಾಯಸ್ಪದ ಸಾವು: ಪತಿ ಮನೆಯವರ ವಿರುದ್ಧ ದೂರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಂಕೋಲಾ: ತಾಲ್ಲೂಕಿನ ಬೇಲೇಕೇರಿ ಗ್ರಾಮದಲ್ಲಿ ವಿವಾಹಿತ ಮಹಿಳೆಯೊ ಬ್ಬಳು ಸಂಶಯಾಸ್ಪದವಾಗಿ ಸಾವನ್ನಪ್ಪಿದ ಘಟನೆ ಶನಿವಾರ ಬೆಳಗಿನ ಜಾವ ಸಂಭವಿಸಿದೆ. ಈ ಕುರಿತು ಮಹಿಳೆಯ ತವರು ಮನೆ ಯವರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸ್ಮಿತಾ ಉಲ್ಲಾಸ ಫಡ್ನೇಕರ (37) ಎಂಬುವವಳೇ ಈ ಮಹಿಳೆಯಾಗಿದ್ದಾಳೆ.  ಕಾರವಾರ ತಾಲ್ಲೂ ಕಿನ ಕದ್ರಾ-ಬಾಳ್ನಿ ಗ್ರಾಮದವಳಾದ ಇವಳನ್ನು ಬೇಲೇಕೇರಿಯ ಉಲ್ಲಾಸ ಫಡ್ನೇಕರ ಎನ್ನುವವರಿಗೆ ಕಳೆದ 7 ವರ್ಷಗಳ ಹಿಂದೆ ವಿವಾಹ ಮಾಡಿಕೊಡ ಲಾಗಿತ್ತು.  ಶನಿವಾರ ಬೆಳಗಿನ ಜಾವ ಮನೆಯ ಎದುರಿನ ಸಾರ್ವಜನಿಕ ಬಾವಿ ಯಲ್ಲಿ ಸ್ಮಿತಾಳ ಶವವು ಪತ್ತೆಯಾಗಿದೆ.  ಮೃತಳಿಗೆ 6 ವರ್ಷದ ಉದ್ಭವ ಎನ್ನುವ ಮಗನಿದ್ದಾನೆ.  ಮೃತಳ ಅಣ್ಣ ಪ್ರದೀಪ ಗಣಪತಿ ನಾಯ್ಕ  ಗಂಡನ ಮನೆಯವರ ಮೇಲೆ ಸಂಶಯ ವ್ಯಕ್ತಪಡಿಸಿದ್ದು, ಸ್ಮಿತಾಳ ಗಂಡ ಉಲ್ಲಾಸ ಫಡ್ನೇಕರ, ಅತ್ತೆ ಶೈಲಾ, ಮೈದುನ ಸಂದೇಶ, ಮೈದುನಿಯರಾದ ಅಖಿಲಾ ಅಮದಳ್ಳಿ, ವನಿತಾ ಭಂಡಾರಿ ಕುಮಟಾ ಹಾಗೂ ಸುಜಾತಾ ತಾಮ್ಸೆ ಕೋಡಿಬಾಗ್ ಇವರ ವಿರುದ್ಧ ದೂರು ದಾಖಲಿಸಿದ್ದಾನೆ. ಪ್ರಕರಣ ದಾಖಲಾಗಿ ಪೊಲೀಸರು ಮುಂದಿನ ತನಿಖೆ ನಡೆಸಿದ್ದಾರೆ.  ಮರ ಣೋತ್ತರ ಪರೀಕ್ಷೆಯ ವರದಿ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳುವು ದಾಗಿ ಡಿವೈಎಸ್‌ಪಿ ಉಲ್ಲಾಸ ವೆರ್ಣೇಕರ, ಪಿಎಸ್‌ಐ ಜಾಯ್ ಆ್ಯಂಟನಿ ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.