ಮಹಿಳೆ ಆತ್ಮಹತ್ಯೆ

ಶುಕ್ರವಾರ, ಜೂಲೈ 19, 2019
23 °C

ಮಹಿಳೆ ಆತ್ಮಹತ್ಯೆ

Published:
Updated:

ಬೆಂಗಳೂರು: ಕಾಮಾಕ್ಷಿಪಾಳ್ಯ ಸಮೀಪ ಕೊಟ್ಟಿಗೆಪಾಳ್ಯದಲ್ಲಿ ಬುಧವಾರ ಸೌಮ್ಯ (24) ಎಂಬುವರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಸಿದ್ದಪ್ಪ ಮತ್ತು ಪ್ರೇಮಮ್ಮ ದಂಪತಿ ಮಗಳಾದ ಸೌಮ್ಯ, ನಾಲ್ಕು ತಿಂಗಳ ಹಿಂದೆ ಬಾಬು ಎಂಬುವರನ್ನು ಪ್ರೀತಿಸಿ ವಿವಾಹವಾಗಿದ್ದರು.ದಂಪತಿ ಹೆಬ್ಬಾಳದಲ್ಲಿ ಬಾಡಿಗೆ ಮನೆ ಪಡೆದು ವಾಸವಾಗಿದ್ದರು. ಬುಧವಾರ ಕೊಟ್ಟಿಗೆಪಾಳ್ಯದಲ್ಲಿರುವ ತಾಯಿ ಮನೆಗೆ ಬಂದ ಸೌಮ್ಯ, ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಪೋಷಕರು ಬಿಡದಿಗೆ ಹೋಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.`ದಂಪತಿ ಅನ್ಯೋನ್ಯವಾಗಿದ್ದರು. ಮಗಳು ಏಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ತಿಳಿಯುತ್ತಿಲ್ಲ' ಎಂದು ಮೃತರ ಪೋಷಕರು ಹೇಳಿಕೆ ಕೊಟ್ಟಿದ್ದಾರೆ. ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಕಾಮಾಕ್ಷಿಪಾಳ್ಯ ಪೊಲೀಸರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry