ಭಾನುವಾರ, ಮೇ 16, 2021
28 °C

ಮಹಿಳೆ ಕೊಲೆ ಪ್ರಕರಣ: ಆರೋಪಿ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮಹಿಳೆ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯೊಬ್ಬನನ್ನು ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ಬಂಧಿಸಿದ್ದಾರೆ.ಮೃತ ಮಹಿಳೆಗೆ ಪರಿಚಿತನಾದ ನಾಗಭೂಷಣ್ ಬಂಧಿತ ಆರೋಪಿ. ಏ.8 ರಂದು ಕೂಡ್ಲುಗ್ರಾಮದ ಕೆಎಸ್‌ಆರ್‌ಪಿ ವಸತಿ ಗೃಹದ ಹಿಂದೆ 35 ರಿಂದ 40 ವರ್ಷ ವಯಸ್ಸಿನ ಅಪರಿಚಿತ ಮಹಿಳೆಯ ಶವ ಪತ್ತೆಯಾಗಿತ್ತು. ಅವರ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಲಾಗಿತ್ತು. ಈ ಬಗ್ಗೆ ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ಪ್ರಕರಣ ದಾಖಸಿಕೊಂಡು ಆರೋಪಿಯ ಶೋಧ ನಡೆಸುತ್ತಿದ್ದರು.ಪತ್ನಿ ಕಾಣೆಯಾಗಿರುವ ಬಗ್ಗೆ ಮೃತ ಮಹಿಳೆಯ ಪತಿ ದೂರು ನೀಡಲು ಪೊಲೀಸ್ ಠಾಣೆಗೆ ಬಂದಾಗ ಮೃತರ ಗುರುತು ಪತ್ತೆಯಾಯಿತು ಎಂದು ಪೊಲೀಸರು ತಿಳಿಸಿದ್ದಾರೆ. `ಕೊಲೆಯಾದ ಮಹಿಳೆ ಸೀರೆ ವ್ಯಾಪಾರಿಯಾಗಿದ್ದರು. ಘಟನೆಯ ಹಿಂದಿನ ದಿನ(ಏ.7) ಮೃತ ಮಹಿಳೆಗೆ ಪರಿಚಿತನಾಗಿದ್ದ ನಾಗಭೂಷಣ್ ನಮ್ಮ ಸಂಬಂಧಿಕರಿಗೆ ಸೀರೆ ಬೇಕು ಎಂದು ಅವರನ್ನು ಕರೆದುಕೊಂಡು ಹೋಗಿದ್ದ~ ಎಂದು ಮೃತರ ಪತಿ ವಿಚಾರಣೆ ವೇಳೆ ಹೇಳಿದ್ದಾಗಿ ಪೊಲೀಸರು ತಿಳಿಸಿದರು.ನಾಗಭೂಷಣ್ ಪಾವಗಡದಲ್ಲಿ ಇರುವ ಬಗ್ಗೆ ಮಾಹಿತಿ ತಿಳಿದು ಆರೋಪಿಯನ್ನು ಬಂಧಿಸಲಾಯಿತು. `ಸೀರೆ ಖರೀದಿಯ ನೆಪದಲ್ಲಿ ಮಹಿಳೆಯನ್ನು ಕರೆದುಕೊಂಡು ಹೋಗಿ ಪ್ಲಾಸ್ಟಿಕ್ ಹಗ್ಗವನ್ನು ಅವರ ಕುತ್ತಿಗೆಗೆ ಬಿಗಿದು ಕೊಲೆ ಮಾಡಿರುವುದಾಗಿ ಹಾಗೂ ಅವರ ಬಳಿ ಇದ್ದ ಚಿನ್ನದ ಓಲೆ, ತಾಳಿ ಗುಂಡುಗಳನ್ನು ಕಿತ್ತುಕೊಂಡು ಗುರುತು ಸಿಗದಂತೆ ತಲೆಯ ಮೇಲೆ ಕಲ್ಲು ಎತ್ತಿ ಹಾಕಿದ್ದೆ~ ಎಂದು ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ~ ಎಂದು ಪೊಲೀಸರು ತಿಳಿಸಿದರು.  ಆಗ್ನೇಯ ವಿಭಾಗದ ಡಿಸಿಪಿ ಪಿ.ಎಸ್. ಹರ್ಷ, ಅವರ ಮಾರ್ಗದರ್ಶನದಲ್ಲಿ, ಮಡಿವಾಳ ಉಪ ವಿಭಾಗದ ಎಸಿಪಿ ಎಚ್.ಸುಬ್ಬಣ್ಣ ನೇತೃತ್ವದಲ್ಲಿ ಆರೋಪಿಯನ್ನು ಬಂಧಿಸಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.