ಸೋಮವಾರ, ಏಪ್ರಿಲ್ 12, 2021
22 °C

ಮಹಿಳೆ ಮತ್ತು ಮಾನವ ಹಕ್ಕುಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಾನವ ಹಕ್ಕು ಅಥವಾ ‘ಮಹಿಳೆಯರ ಹಕ್ಕು’ ಎಂಬ ಘೋಷಣೆ ಇತ್ತೀಚಿನ ಪಾಶ್ಚಾತ್ಯರ ಪ್ರಭಾವದಿಂದ ಬಂದ ಘೋಷಣೆ.  ‘ಮಾತೃದೇವೋಭವ ‘ ಎಂಬ ನಮ್ಮ ಪ್ರಾಚೀನ ಪರಂಪರೆಯ ಪರಿಕಲ್ಪನೆ ಅತ್ಯದ್ಭುತ. ಸಮಾನತೆ, ಸಮಬಾಳ್ವೆ, ಸಮಾನ ಸುಖ ಸಂತೋಷವನ್ನು ಸಾರುವ ನಮ್ಮ ಸನಾತನ ಧರ್ಮದ  ‘ಸರ್ವೇಜನಾಃ ಸುಖಿನೋಭವಂತು’ ಎನ್ನುವುದನ್ನು ಮರೆತ ಮಾನವರು ದಾನವರಾಗುತ್ತಿರುವ ಇಂದಿನ ದಿನಗಳಲ್ಲಿ ಜಗತ್ತಿನಾದ್ಯಂತ ಜಾಗಟೆ ಹೊಡೆದಂತೆ ಮಾನವ ಹಕ್ಕಿನ ಹೋರಾಟ ಮತ್ತು ಕೂಗಾಟ ಎಲ್ಲೆಲ್ಲೂ ಕೇಳಿಬರುತ್ತಿದೆ.ಪ್ರತಿಯೊಂದು ಕ್ಷೇತ್ರದಲ್ಲೂ ನೈತಿಕತೆಯ ನೆಲೆಗಟ್ಟು ನೆಲಕಚ್ಚಿದೆ. ನಮ್ಮ ಸಮಾಜ ಸ್ವಾರ್ಥಿಗಳಿಂದ ತುಂಬಿ ಎಲ್ಲೆಲ್ಲೂ ಅಸಮಾನತೆ ಅಸಮಾಧಾನ ಮತ್ತು ಅಸಂತೋಷ ತಾಂಡವವಾಡುತ್ತಿದೆ. ಮನುಕುಲದಲ್ಲಿ ಪ್ರತಿಯೊಬ್ಬರಿಗೂ ಬದುಕುವ ಸಮಾನ ಹಕ್ಕಿದೆ. ಆದರೆ ದುರಂತವೆಂದರೆ  Men are more equal than women ಅಂತ ಪುರುಷ ಪ್ರಧಾನ ಸಮಾಜ ದೈತ್ಯಾಕಾರವಾಗಿ ಬೆಳೆದು ನಿಂತಿದೆ. Man ಅನ್ನುವುದು woman ನಲ್ಲಿದೆ  He is in she ಅನ್ನುವುದನ್ನು ಜಗತ್ತು ಮರೆತಂತಿದೆ. History ನಲ್ಲಿ ಕೇವಲ His story ಅಲ್ಲ ಮಹಿಳೆಯೂ ಇತಿಹಾಸ ನಿರ್ಮಿಸಿದ್ದಾಳೆ ಅನ್ನುವುದನ್ನು ಯಾರೂ ಗಣನೆಗೆ ತೆಗೆದುಕೊಳ್ಳುತ್ತಿಲ್ಲ.ಮಗುವಿಗೆ ಜನ್ಮಕೊಟ್ಟು ಅದಕ್ಕೆ ಹಾಲುಣಿಸಿ ಪೋಷಿಸಿ ಪಾಲನೆ ಮಾಡುವುದು ಹೆಣ್ಣು. ಮುಂದೆ ಮದುವೆ ಆದ ಮೇಲೆ ಗಂಡನಿಗೆ ಬೆನ್ನೆಲುಬಾಗಿ ಅವನ ಸಾಧನೆಗೆ ಸಹಕರಿಸುವುದೇ ಹೆಂಡತಿ, ಹೆಣ್ಣು!  There is a woman behind every successful man  ಅನ್ನುತ್ತಾರೆ. ಆದರೆ ಯಾರೂ There is a man behind every successful woman ಅಂತ ಹೇಳುವುದಿಲ್ಲ! ಆದರೆ ದುರಂತ ಅಂದರೆ ಇಂದು There are many women behind the fall of a man  ಆಗಿದೆ. ಅದಕ್ಕಿಂತಲೂ ದೊಡ್ಡ ದುರಂತ ಎಂದರೆ There is one woman ನೀರಾ ರಾಡಿಯಾ behind many scoundrel men and as many scandals! ಇನ್ನು ಗಂಡಸು ಮುದುಕರಾದ ಮೇಲೆ ಒಂದು ಹೆಂಡತಿ ನೋಡಿಕೊಳ್ಳಬೇಕು, ಇಲ್ಲ ಸೊಸೆ ಇಲ್ಲ,ಅವರ ಹೆಣ್ಣು ಮಕ್ಕಳು. ಇನ್ನು ಕಾಯಿಲೆ ಬಂದು ಆಸ್ಪತ್ರೆಗೆ admit ಆದರೆ ಅಲ್ಲಿ   nurse ಹೆಣ್ಣೆ ನೋಡಿಕೊಳ್ಳಬೇಕು. ಹಾಗಾಗಿ ಗಂಡು ಸದಾ ಹೆಣ್ಣಿನ ಆಶ್ರಯದಲ್ಲಿಯೇ ಬಾಳಿ ಬದುಕಿದರೂ it is a man’s world ಅಂತ ಬೀಗುವುದು ವಿಪರ್ಯಾಸ.  There is no world without woman ಅನ್ನುವುದನ್ನು ಮರೆಯಬಾರದು.ಇಂದು  ಸರ್ವಶಕ್ತಿಮಯಿಯಾದ ಹೆಣ್ಣನ್ನು ಮೂಢರು ಹುಟ್ಟುವ ಮೊದಲೆ ಹುಟ್ಟು ಅಡಗಿಸಲು ಹೋಗಿ ಸಮಾಜದ ಸಮತೋಲನವನ್ನು ಅಲ್ಲೋಲ ಕಲ್ಲೋಲ ಮಾಡುತ್ತಿದ್ದಾರೆ. ಕುಟುಂಬದ ಕುಡಿ ಹುಟ್ಟುವ ಮೊದಲೆ ಲಿಂಗಭೇದ ಮಾಡಿ ಭ್ರೂಣ ಹತ್ಯೆ ಮಾಡುತ್ತಿದ್ದಾರೆ. ಸ್ತ್ರೀ ತನ್ನ ಜನ್ಮಸಿದ್ಧ ಹಕ್ಕು ಅಂತ ಧ್ವನಿ ಎತ್ತುವ ಮೊದಲೆ ಹೆಣ್ಣು ಭ್ರೂಣ ಹತ್ಯೆಯಿಂದ ಕಳೆದ ಹತ್ತು ವರ್ಷದಲ್ಲಿ ನಮ್ಮ ದೇಶದಲ್ಲಿ 10 ಕೋಟಿ ಮಹಿಳೆಯರ ಸಂಖ್ಯೆ ಕಡಿಮೆ ಆಗಿದೆ. ಅಂದರೆ ಸಮಸ್ಯೆಯ ಗಾಂಭೀರ್ಯ ಅರ್ಥಮಾಡಿಕೊಳ್ಳಲೇಬೇಕು.ಗಂಡಸು ಮಾಡುವ ಎಲ್ಲಾ ಕೆಲಸಗಳನ್ನೂ ನಾವು ಮಹಿಳೆಯರು ತುಂಬ ಅಚ್ಚುಕಟ್ಟಾಗಿ ಮಾಡಬಹುದು. ಆದರೆ men can never do one thing that we woman only can do and that is give birth to a child! ಜಗತ್ತನ್ನು ಮುನ್ನಡೆಸಿಕೊಂಡು ಹೋಗುವ ಮುಂದಿನ ಪೀಳಿಗೆಯನ್ನು ಬೆಳೆಸುವ ಶಕ್ತಿ ಕೇವಲ ಮಹಿಳೆಯರಿಗಿದೆ.ಭಾರತ ಉಳಿಯಬೇಕೆಂದರೆ ಹೆಣ್ಣು ಭ್ರೂಣ ಹತ್ಯೆಯಂತಹ ಹೀನ ಕೃತ್ಯ ನಿಲ್ಲಲೇಬೇಕು. ಇದರಲ್ಲಿ ಗಂಡಸರಿಗೆ ಬೆರಳು ಮಾಡಿ ತೋರಿಸಿದರೆ ತಪ್ಪಾಗುತ್ತದೆ. ಯಾಕೆಂದರೆ ಭ್ರೂಣ ಹತ್ಯೆಗೆ ಅನುಮತಿ ಕೊಡುವ ತಾಯಿ ಅದಕ್ಕೆ ಪುಸಲಾಯಿಸುವ ಅತ್ತೆ ಮತ್ತು ತಲೆತುಂಬುವ ಅಜ್ಜಿ ಎಲ್ಲರೂ ಹೆಣ್ಣೆ! ಹೆಣ್ಣು ಕುಟುಂಬಕ್ಕೆ ಹುಣ್ಣು ಎನ್ನದೇ ಹೆಣ್ಣು ಕುಟುಂಬದ ಕಣ್ಣೆಂದು ಕಾಣಬೇಕಾದ ಅಗತ್ಯ ಇಂದು ಹೆಚ್ಚಾಗಿದೆ. ಇಲ್ಲದಿದ್ದರೆ ಮುಂದೆ ಗಂಡಸರಿಗೆ ಮದುವೆಗೆ ಹೆಣ್ಣು ಸಿಗದೆ ದ್ರೌಪದಿಯರ ಸಂಖ್ಯೆ ಹೆಚ್ಚಾಗುವ ಸಂಭವವಿದೆ!12ನೇ ಶತಮಾನದ ಶರಣರು ‘ಆತ್ಮಕ್ಕೆ ಹೆಣ್ಣು ಗಂಡೆಂಬ ಭೇದವಿಲ್ಲ’ ಎಂದು ಜಗತ್ತಿಗೆ ಸಾರಿ ಹೇಳಿದರು. ಮಹಿಳೆಯರಿಗೆ ಸರಿಸಮಾನ ಹಕ್ಕು ಕೊಟ್ಟು ಭಕ್ತಿಮಾರ್ಗದಲ್ಲಿ ನಡೆದ ಅವರು ಮಹಿಳೆಯರಿಗೆ ‘ಅಕ್ಕ’ ಮತ್ತು ‘ತಾಯಿ’ ಎಂದು ಸಂಬೋಧಿಸುತ್ತಿದ್ದರು. ಪರಸ್ತ್ರೀಯನ್ನು ಮುಟ್ಟಬಾರದೆಂದು ಬೋಧಿಸಿದರು.

ಭಕ್ತಿಮಾರ್ಗದಲ್ಲಿ ನಡೆಯಲು ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಕೊಟ್ಟರು. ಇದರ ಪರಿಣಾಮವಾಗಿ ಮಹಿಳೆಯರೂ ಸಾಹಿತ್ಯ ಕೃಷಿ ಮಾಡಿದರು. ಇವರಲ್ಲಿ ಅಕ್ಕಮಹಾದೇವಿ ಕನ್ನಡದ ಪ್ರಪ್ರಥಮ  ಕವಯತ್ರಿಯಾಗಿ ಅತ್ಯದ್ಭುತ ದಾರ್ಶನಿಕಳಾಗಿ ಸಮಾಜದ ಚೌಕಟ್ಟನ್ನು ದಾಟಿ ಭಕ್ತಿಯ ಎಲ್ಲೆ ಏರಿದ ಮಹಾನ್ ಸಾಧಕಿಯಾದಳು.ಆದರೆ ಇಂದು 21ನೇ ಶತಮಾನದಲ್ಲಿ ಚಿತ್ರನಟಿ ಜಯಮಾಲಾ  ಶಬರಿಮಲೈನಲ್ಲಿ ದರ್ಶನ ಮಾಡಿದ್ದಕ್ಕೆ ಮೂರ್ಖ ಜನ ದಂಡ ಕಟ್ಟಿಸುವುದಲ್ಲದೆ ಇಪ್ಪತ್ತು ವರ್ಷದ ನಂತರ ನೀರಿನಿಂದ ತೊಳೆಯುವ ಬೂಟಾಟಿಕೆಗೆ ಮುಂದಾಗಿದ್ದು ಮೂರ್ಖತನ. ದಿಲ್ಲಿಯ ಅಕ್ಷರಧಾಮದಲ್ಲಿ ಜೀವಮಾನ ಸಾಧನೆಗೆ ನನ್ನ ಹೆಸರು ಕರೆದಾಗ, ನಾನು ವೇದಿಕೆ ಏರುತ್ತಿದ್ದಂತೆ ಅಲ್ಲಿಯ ಸ್ವಾಮೀಜಿ ಎದ್ದು ಹೊರ ಹೋಗಿದ್ದರು. ಆ ಸ್ವಾಮೀಜಿ ಮಹಿಳೆಯ ಮುಖ ನೋಡುವುದಿಲ್ಲವಂತೆ!ಮಹಿಳೆಯರ ತಾರತಮ್ಯ ತಾರಕಕ್ಕೇರಿದ ಇಂದಿನ ದಿನದಲ್ಲಿ ಕೂಡ ಮಹಿಳೆ ತನ್ನ ಹೊಣೆ ಅರಿತು ಸಮಾಜ ಕಲ್ಯಾಣಕ್ಕೆ ಶ್ರಮಿಸುತ್ತಿರುವುದು ಶ್ಲಾಘನೀಯ.70 ವರ್ಷದ ಹುಲಿಗೆಮ್ಮ ತಾನು ದೇವದಾಸಿಯಾದರೂ 13 ಎಕರೆ ಭೂಮಿಯನ್ನು ಶಾಲೆಗೆ ದಾನವಾಗಿ ಕೊಟ್ಟು ತನ್ನ ಹಣೆಬರಹ ಬದಲಾಗದಿದ್ದರೂ ಊರಿನ ಉಳಿದ ಹೆಣ್ಣು ಮಕ್ಕಳ ಹಣೆಬರಹ ಬದಲಿಸುವ ಅದ್ಭುತ ಕಾರ್ಯ ಮಾಡಿದ್ದಾಳೆ. ಆದ್ದರಿಂದ ಪಾಶ್ಚಾತ್ಯರಂತೆ ಹಕ್ಕಿಗೆ ಹೋರಾಡಿ ಸೋತು ಸುಣ್ಣ ಆಗದೆ ಹೊಣೆಗಾಗಿ ಹೆಣಗಾಡಿ ಸಾರ್ಥಕ ಜೀವನ ನಡೆಸಿ ಸುಂದರ ಸಮಾಜ ಕಟ್ಟೋಣ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.