ಭಾನುವಾರ, ಜೂನ್ 13, 2021
21 °C

ಮಹಿಳೆ ಮೇಲೆ ಅತ್ಯಾಚಾರ: ಬೆತ್ತಲೆ ಮೆರವಣಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರೈಸೆನ್‌, ಮಧ್ಯಪ್ರದೇಶ (ಪಿಟಿಐ): ದಾಂಡಿ­ಗನೊಬ್ಬ 22 ವರ್ಷದ ಮಹಿ­ಳೆಯ ಮೇಲೆ ಅತ್ಯಾಚಾರ ಮಾಡಿದ್ದ­ಲ್ಲದೆ, ಆಕೆಯನ್ನು ಬೆತ್ತಲೆ ಮಾಡಿ ಊರೆಲ್ಲ ಮೆರವಣಿಗೆ ಮಾಡಿದ ಪೈಶಾ­ಚಿಕ ಘಟನೆ ಜಿಲ್ಲೆಯ ಐತಿಹಾಸಿಕ ಪಟ್ಟಣ ಸಾಂಚಿ ಬಳಿ  ನಡೆದಿದೆ.ಆರೋಪಿಯನ್ನು ಸೌದಾನಾ ಸಿಂಗ್‌್ (40) ಎಂದು ಗುರುತಿಸಲಾಗಿದೆ. ‘ಕಳೆದ ಎರಡು ದಿನಗಳ ಹಿಂದೆ ಈತ ಬಹಿರ್ದೆಸೆಗೆ ತೆರಳಿದ್ದ ಮಹಿಳೆ ಮೇಲೆ ಅತ್ಯಾಚಾರ ಎಸಗಿದ್ದ. ಈ ವಿಷಯವನ್ನು ಯಾರಿಗೂ ಬಾಯಿಬಿಡದಂತೆ ಬೆದರಿಕೆ ಕೂಡ ಹಾಕಿದ್ದ’ ಎಂದು ಪೊಲೀಸರು ತಿಳಿಸಿದ್ದಾರೆ.ಬೆದರಿಕೆಗೆ ಸೊಪ್ಪುಹಾಕದ ಮಹಿಳೆ ಊರವರಿಗೆ ವಿಷಯ ತಿಳಿಸಿದರು.  ಸಿಟ್ಟಾದ ಸಿಂಗ್‌್ ಮಹಿಳೆಯ ಮನೆ­ಯೊ­ಳಗೆ ನುಗ್ಗಿ ಆಕೆಯನ್ನು ಬೆತ್ತಲೆ ಮಾಡಿ  ದರದರನೆ ಹೊರಗೆ ಎಳೆದು­ ಕೊಂಡು ಬಂದ. ಸುದ್ದಿ ತಿಳಿದ ಗ್ರಾಮ­ಸ್ಥರು ಸ್ಥಳಕ್ಕೆ ಧಾವಿಸಿ, ಮಹಿಳೆಗೆ ಮೈ­ ಮುಚ್ಚಿ­ಕೊಳ್ಳುವುದಕ್ಕೆ ಬಟ್ಟೆ

ಕೊಟ್ಟರು.ಆದರೆ ಮತ್ತೆ ಸಿಂಗ್‌ ಆಕೆಯನ್ನು ವಿವಸ್ತ್ರ­ಗೊಳಿ­ಸಿದ. ಇಷ್ಟೆಲ್ಲ ಆದ ಮೇಲೆ ಅಲ್ಲಿಗೆ ಬಂದ ಮಹಿಳೆಯ ಪತಿ ಆಕೆಯನ್ನು ಮನೆ­ಯೊ­ಳಗೆ ಕರೆದು­ಕೊಂಡು ಹೋದ. ಮಹಿಳೆ ನೀಡಿದ ದೂರಿನ ಮೇರೆಗೆ ಸಿಂಗ್‌­ನನ್ನು ಪೊಲೀಸರು ಮಂಗಳವಾರ ಬಂಧಿಸಿ, ಬುಧವಾರ  ಕೋರ್ಟ್‌ಗೆ ಹಾಜರುಪಡಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.