ಮಹಿಳೆ ಮೇಲೆ ದೌರ್ಜನ್ಯ: ಕಳವಳ

7

ಮಹಿಳೆ ಮೇಲೆ ದೌರ್ಜನ್ಯ: ಕಳವಳ

Published:
Updated:

ಚಿಕ್ಕಬಳ್ಳಾಪುರ: ಮಹಿಳೆಯರನ್ನು ದೈವಿಸ್ವರೂಪಿ, ತಾಯಿಯೆಂದೇ ಪೂಜಿಸುವ ನಮ್ಮ ದೇಶದಲ್ಲೇ ಮಹಿಳೆಯರ ಮೇಲೆ ಹೆಚ್ಚಿನ ಹಿಂಸೆ, ದೌರ್ಜನ್ಯ ಜರುಗುತ್ತಿವೆ. ಮಹಿಳೆಯರನ್ನು ವಿಕೃತವಾಗಿ ಹಿಂಸಿಸುವ ಪ್ರವೃತ್ತಿ ಹೆಚ್ಚುತ್ತಿದೆ ಎಂದು ಸಿಪಿಎಂ ರಾಜ್ಯ ಘಟಕದ ಅಧ್ಯಕ್ಷ ಅಧ್ಯಕ್ಷ ಜಿ.ವಿ.ಶ್ರೀರಾಮರೆಡ್ಡಿ ಆತಂಕ ವ್ಯಕ್ತಪಡಿಸಿದರು.ಮಹಿಳೆಯರ ಮೇಲೆ ನಡೆಯುತ್ತಿರುವ ಅತ್ಯಾಚಾರ, ದೌರ್ಜನ್ಯ ಖಂಡಿಸಿ ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಶನಿವಾರ ನಡೆದ ಜಿಲ್ಲಾ ಮಟ್ಟದ ಸಮಾವೇಶದಲ್ಲಿ ಮಾತನಾಡಿದ ಅವರು, ಸೂಕ್ತ ರಕ್ಷಣೆಯಿಲ್ಲದೆ ಮಹಿಳೆಯರು ಭಯದಲ್ಲಿ ಬದುಕುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.ಮಹಿಳೆಯರ ಮೇಲೆ ಅತ್ಯಾಚಾರ, ದೌರ್ಜನ್ಯ ಹೆಚ್ಚಾಗಲು ಮಹಿಳೆಯರೇ ಕಾರಣವೆಂದು ದೂಷಿಸಲಾಗುತ್ತದೆ. ಅವರ ವರ್ತನೆ ಮತ್ತು ತೊಡುವ ಬಟ್ಟೆಗಳಿಂದಲೇ ಸಂಕಷ್ಟಕ್ಕೆ ಸಿಲುಕುತ್ತಾರೆ. ಪುರುಷರು ಅತ್ಯಾಚಾರವೆಸಗುವಂತೆ ಪ್ರಚೋದಿಸುತ್ತಾರೆ ಎಂದು ಹೇಳಲಾಗುತ್ತದೆ. ಮಹಿಳೆಯರ ಮೇಲೆ ಅನಗತ್ಯ ಆರೋಪ ಹೊರಿಸಲಾಗುತ್ತದೆ.

ಆದರೆ ಪುರುಷರ ಮನೋವಿಕೃತಿ ಬಗ್ಗೆ ಯಾರೂ ಪ್ರಶ್ನಿಸುವುದಿಲ್ಲ. ಕನಿಷ್ಠ ಸೌಜನ್ಯ ಇಲ್ಲದೆ ಮಹಿಳೆಯರಿಗೆ ಹಿಂಸೆ ಮಾಡುತ್ತಾರೆ ಎಂದು ಅವರು ಕಳವಳ ವ್ಯಕ್ತಪಡಿಸಿದರು. ಮಹಿಳೆಯರು ಅತ್ಯಾಚಾರಕ್ಕೆ ಒಳಗಾಗುವುದನ್ನು ತಪ್ಪಿಸಲು ಬಾಲ್ಯವಿವಾಹ ಮಾಡಬೇಕೆಂದು ರಾಜಕಾರಣಿಗಳು ಹೇಳುತ್ತಿರುವುದು ನಾಚಿಕೆ ಸಂಗತಿ.

ಬಾಲ್ಯವಿವಾಹದಿಂದ ಅತ್ಯಾಚಾರ ತಪ್ಪಿಸಲು ಸಾಧ್ಯವೇ? ಮಹಿಳೆಯರಿಗೆ ಅಭಿವ್ಯಕ್ತಿ ಸ್ವಾತಂತ್ರ್ಯ ಎಂಬುದು ಇಲ್ಲವೇ? ಮಹಿಳೆಯರು ಭಯಮುಕ್ತ ವಾತಾವರಣದಲ್ಲಿ ಬದುಕಲು ಸಾಧ್ಯವಾಗದ ಪರಿಸ್ಥಿತಿಯಿದೆ. ಮಹಿಳೆಯರು ನೆಮ್ಮದಿ ಮತ್ತು ಸಮಾಧಾನದಿಂದ ಬದುಕುವಂತಹ ವಾತಾವರಣ ನಿರ್ಮಾಣವಾಗಬೇಕು ಎಂದರು.ಜನವಾದಿ ಮಹಿಳಾ ಸಂಘಟನೆ ಅಧ್ಯಕ್ಷೆ ಕೆ.ಎಸ್.ಲಕ್ಷ್ಮಿ, ಜಿಲ್ಲಾ ಪಂಚಾಯಿತಿ ಸದಸ್ಯೆ ಬಿ.ಸಾವಿತ್ರಮ್ಮ, ತಾಲ್ಲೂಕು ಪಂಚಾಯಿತಿ ಸದಸ್ಯೆ ಶೋಭಾರಾಣಿ, ಸಿಪಿಎಂ ಮುಖಂಡರಾದ ಸಿದ್ದಗಂಗಪ್ಪ ಮತ್ತು ಎಂ.ಪಿ.ಮುನಿವೆಂಕಟಪ್ಪ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry