ಮಹಿಳೆ ಶವ ಪತ್ತೆ

7

ಮಹಿಳೆ ಶವ ಪತ್ತೆ

Published:
Updated:

ಹೊಸಕೋಟೆ: ತಾಲ್ಲೂಕಿನ ಅನು ಗೊಂಡನಹಳ್ಳಿ ಹೋಬಳಿ ಓಬಳಾಪುರ ಗ್ರಾಮದ ಬಳಿಯ ನೀಲಗಿರಿ ತೋಪಿ ನಲ್ಲಿ ವಿವಾಹಿತ ಮಹಿಳೆಯ ಶವ ವೊಂದು ಮಂಗಳವಾರ ಪತ್ತೆಯಾಗಿದೆ.ಸುಮಾರು 30 ವರ್ಷ ವಯಸ್ಸಿನ ಆ ಮಹಿಳೆಯ ಎಡ ಕಿವಿಯಲ್ಲಿ ರಕ್ತದ ಕಲೆಗಳಿದ್ದು ಕುತ್ತಿಗೆಯನ್ನು ಹಗ್ಗದಿಂದ ಹಿಸುಕಿದ ಗುರುತಿದೆ. ಆಕೆಯ ಎಡಗೈ ಯಲ್ಲಿ ಎಲ್ಲಮ್ಮ ಹಾಗು ಬಲಗೈಯಲ್ಲಿ ಸುಬ್ರಮಣಿ ಎಂದು ಬರೆದ ಹಚ್ಚೆಯ ಗುರುತಿದೆ. ಆಕೆಯನ್ನು ಎಲ್ಲಿಯೋ ಕೊಲೆ ಮಾಡಿ ನಂತರ ಇಲ್ಲಿ ತಂದು ಹಾಕಿರಬಹುದು ಎಂದು ಶಂಕಿಸಲಾಗಿದೆ.ಅನುಗೊಂಡನಹಳ್ಳಿ ಪೊಲೀಸರು ಕೊಲೆ ಪ್ರಕರಣ ದಾಖಲಿಸಿ ತನಿಖೆ ನಡೆಸಿದ್ದಾರೆ. ವಾರಸುದಾರರು 080–27945777 ಸಂಪರ್ಕಿಸಲು ಕೋರಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry