ಮಂಗಳವಾರ, ಜೂನ್ 15, 2021
23 °C

ಮಹಿಳೆ ಸಬಲೀಕರಣ-ಪೂರಕ ಸ್ಪಂದನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತರೀಕೆರೆ: ಪುರುಷ ಪ್ರಧಾನವಾಗಿರುವ ದೇಶದಲ್ಲಿ ಸಂಘಟನಾ ಚಾತುರ್ಯದಿಂದ ಮಹಿಳೆಯರು ನಿಧಾನವಾಗಿ ಸಮಾಜದ ಎಲ್ಲಾ ಕ್ಷೇತ್ರಗಳಲ್ಲಿ ತಮ್ಮ ಇರುವಿಕೆಯನ್ನು ತೋರಿಸುತ್ತಾ, ಸರ್ಕಾರದ ಮಹಿಳಾ ಸಬಲೀಕರಣದ ಕಾರ್ಯಕ್ರಮಗಳ ಉದ್ದೇಶಕ್ಕೆ ಪೂರ್ವಕವಾಗಿ ನಡೆದುಕೊಳ್ಳುತ್ತಿರುವುದು ಸ್ವಾಗತಾರ್ಹ ಕ್ರಮ ಎಂದು ಶಾಸಕ ಡಿ.ಎಸ್.ಸುರೇಶ್ ಹೇಳಿದರು.ಪಟ್ಟಣದ ಕನಕ ಕಲಾಭವನದಲ್ಲಿ ಸೋಮವಾರ ಏರ್ಪಡಿಸಿದ್ದ ವಿಶ್ವ ಮಹಿಳಾ ದಿನಾಚರಣೆ ಮತ್ತು ಪಂಚಾಯತ್ ರಾಜ್ ಸಂಸ್ಥೆಗಳ ಮಹಿಳಾ ಸದಸ್ಯರಿಗಾಗಿ ಏರ್ಪಡಿಸಿದ್ದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.ಸ್ವಾಭಿಮಾನಿಯಾಗಿರುವ ಮಹಿಳೆ ರಾಜಕೀಯ ಕ್ಷೇತ್ರದಲ್ಲಿ ಉನ್ನತ್ತೀಕರಣ ಸಾಧಿಸಿರುವುದಕ್ಕೆ ಸಾಕ್ಷಿಯಾಗಿರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ತಮಿಳುನಾಡಿನ ಜಯಲಲಿತಾ, ದೆಹಲಿಯ ಶೀಲಾದೀಕ್ಷಿತ್ ಮತ್ತು ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮಾಯಾವತಿ  ಅವರನ್ನು ಉದಾಹರಿಸಿದ ಅವರು, ಇತರ ಮಹಿಳೆಯರಿಗೆ ಇವರು ಸ್ಫೂರ್ತಿಯಾಗಿದ್ದಾರೆ ಎಂದರು.ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಬಿ.ಆರ್.ರವಿ ಮಾತನಾಡಿ ಭಾರತದಲ್ಲಿ ಹೆಣ್ಣಿಗೆ ವಿಶಿಷ್ಟವಾದ ಸ್ಥಾನಮಾನ ನೀಡಿದೆ ನಾವು ಅವರನ್ನು ಗೌರವಿಸುವ ಕರ್ತವ್ಯವನ್ನು ಮಾಡಬೇಕಿದೆ ಎಂದರು.ಪ್ರಾಸ್ತಾವಿಕವಾಗಿ ಮಾತನಾಡಿದ ತಾಲ್ಲೂಕು ಶಿಶು ಅಭಿವೃದ್ಧಿ ಅಧಿಕಾರಿ ಶ್ರೀಧರ್, ಸರ್ಕಾರ ಮಹಿಳೆಯರಿಗೆ ಶಿಕ್ಷಣ, ಉದ್ಯೋಗ ಮುಂತಾದ ಕ್ಷೇತ್ರದಲ್ಲಿ ಹೆಚ್ಚಿನ ಆದ್ಯತೆ ನೀಡಿದ್ದು, ದುರ್ಬಲ ವರ್ಗದ ಜನತೆಯ ಉದ್ದಾರಕ್ಕೆ ಪ್ರಾತಿನಿದ್ಯ ನೀಡಿದೆ ಎಂದರು.ಜಿಲ್ಲಾ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಆರ್.ಆನಂದಪ್ಪ, ಸದಸ್ಯರಾದ ಸುಧಾ ಅಮೃತೇಶ್, ವಿಶಾಲ ತಿಪ್ಪೇಶಪ್ಪ, ತಾ.ಪಂ.ಸ್ಥಾಯಿ ಸಮಿತಿ ಅಧ್ಯಕ್ಷ ವಿಜಯಾನಾಯ್ಕ, ಪುರಸಭಾಧ್ಯಕ್ಷೆ ಪಾರ್ವತಮ್ಮ, ಸಿಡಿಎಸ್ ಅಧ್ಯಕ್ಷೆ ಟಿ.ಆರ್.ಸುಧಾ, ಮುಖ್ಯಾಧಿಕಾರಿ ಕೆ.ಎಂ.ಸತ್ಯನಾರಾಯಣ್, ಕಾರ್ಯನಿವಾಹಕಾಧಿಕಾರಿ ಸಿ.ದೇವರಾಜ್, ಎಸ್‌ಜೆಎಸ್‌ಆರ್‌ವೈ ವ್ಯವಸ್ಥಾಪಕಿ ಅನುಪಮ ಮತ್ತು ಸಹಾಯಕ ಸಿಡಿಪಿಓ ಜ್ಯೋತಿಲಕ್ಷ್ಮಿ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.